ನಿರ್ಭಯಾ ಹಂತಕರಿಗೆ ‘ ಲಾಸ್ಟ್ ಮೀಲ್ ‘ । ಖೈದಿಗಳ ಕುಟುಂಬ ಯಾಕಿನ್ನೂ ಅವರನ್ನು ಭೇಟಿ ಮಾಡಿಲ್ಲ?!

ನಿರ್ಭಾಯಳನ್ನು ಅತ್ಯಾಚಾರ ಮಾಡಿ ಕೊಂದ ನಾಲ್ಕು ಜನ ಹಂತಕರಿಗೆ ಫೈನಲ್ ಡೇಟ್ ಫಿಕ್ಸ್ ಆಗಿದೆ. ಫೆಬ್ರುವರಿ ಒಂದರ ಮುಂಜಾನೆ ಆರು ಗಂಟೆಗೆ ಅವರು ವಧಾಸ್ಥಾನದಲ್ಲಿ ನಿಂತು ಶವವಾಗಿ ನೇತಾಡಲಾರಂಭಿಸುತ್ತಾರೆ.

ಈಗ ಜೈಲು ನಿಯಮಗಳ ಪ್ರಕಾರ ಗಲ್ಲು ಶಿಕ್ಷೆಗೆ ‘ ಡೆತ್ ರೋ ‘ ನಲ್ಲಿರುವ ಖೈದಿಗೆ ಶಿಕ್ಷೆಗೆ ಮೊದಲು ಈ ಮೂರು ತಮ್ಮ ಇಚ್ಛೆಗಳನ್ನು ನೆರವೇರಿಸಲು ಕೇಳಿಕೊಳ್ಳುತ್ತಾರೆ.

ಮೊದಲನೆಯದಾಗಿ ‘ ಲಾಸ್ಟ ಮೀಲ್ ‘

ಖೈದಿಯು, ತಾನು ಸಾಯುವ ಕೆಲವು ದಿನಗಳ ಮೊದಲು ತಾನಿಚ್ಛಿಸಿದ ಆಹಾರ ಪದಾರ್ಥವನ್ನು ತಿಂಡಿಯನ್ನು ತಿನ್ನುವ ಬಯಕೆಯನ್ನು ವ್ಯಕ್ತಪಡಿಸಬಹುದು. ಜೈಲು ಅಧಿಕಾರಿಗಳು ಅದಕ್ಕೆ ಅವಕಾಶವನ್ನು ಮಾಡಿಕೊಡುತ್ತಾರೆ. ನಿನ್ನೆ ತಾನೇ ನಿರ್ಭಾಯಳನ್ನು ಕೊಂದ ಅಪರಾಧಿಗಳಿಗೆ ತಮ್ಮ ಕೊನೆಯ ಇಷ್ಟದ ತಿನಿಸನ್ನು ತಿನ್ನುವ ಪಟ್ಟಿ ನೀಡುವಂತೆ ಕೇಳಿಕೊಳ್ಳಲಾಯಿತು. ಆದರೆ ನಾಲ್ವರಲ್ಲಿ ಒಬ್ಬರು ಕೂಡ ಏನೂ ಪ್ರತಿಕ್ರಿಯಿಸಿಲ್ಲ.

ಎರಡನೆಯದಾಗಿ ಆಸ್ತಿಯ ವಿಲ್

ತಮ್ಮ ಹೆಸರಿನಲ್ಲಿ ಯಾವುದಾದರೂ ಆಸ್ತಿ ಪಾಸ್ತಿ ಇದ್ದಲ್ಲಿ, ಅದನ್ನು ಯಾರ ಹೆಸರಿಗೆ ಬರೆಯಿಸಬೇಕು, ವರ್ಗಾಯಿಸಿಕೊಡಬೇಕು ಎಂದು ಖೈದಿಯು ಸೂಚಿಸಬಹುದು. ಕಾನೂನು ಆತನ ಆ ಇಚ್ಚೆಯನ್ನು ಪೂರೈಸುತ್ತದೆ. ಈಗ ಗಲ್ಲು ಶಿಕ್ಷೆಗೊಳಪಟ್ಟ ಪಾತಕಿಗಳು ತೀರಾ ಬಡವರು. ಅವರ ಹೆಸರಿನಲ್ಲಿ ಯಾವುದೇ ಅಷ್ಟೇ ಪಾಸ್ತಿ ಇದ್ದಂತಿಲ್ಲ. ಇರುವ ಪಿತ್ರಾರ್ಜಿತ ಆಸ್ತಿ ಕೂಡ ಇನ್ನೂ ತಮ್ಮ ಹೆತ್ತವರ ಜತೆ ಇದೆ.

ಮೂರನೆಯದಾಗಿ ಲಾಸ್ಟ್ ಮೀಟ್

ಖೈದಿಗಳು, ತಾವು ಇನ್ನೇನು ಸಾಯುವ ಮೊದಲು ಯಾರನ್ನಾದರೂ ನೋಡಬೇಕು, ಮಾತಾಡಿಸಬೇಕು ಎಂದು ಇಷ್ಟಪಟ್ಟರೆ ಕಾನೂನು ಎಡಕ್ಕೂ ಅವಕಾಶ ಕಲ್ಪಿಸಿದೆ. ಶಿಕ್ಷೆಗೊಳಗಾಗುವ ಮುನ್ನ ವ್ಯಕ್ತಿಯು ತನ್ನ ಹೆತ್ತವರನ್ನು, ಹೆಂಡತಿಯನ್ನು ಮಕ್ಕಳನ್ನು ಕಡೆಯ ಬಾರಿಗೆ ನೋಡಿ ಕಣ್ಣೀರು ತುಂಬಿಕೊಳ್ಳುವುದಿದೆ. ಎಷ್ಟೋ ಸಲ ಯಾರನ್ನೂ ಮೀಟ್ ಆಗಲು ಕೂಡ ಒಪ್ಪದೇ ಇರುವವರೂ ಇದ್ದಾರೆ.

‘ ನೋಡಿದರೂ, ಮಾತಾಡಿದರೂ ಏನುಪಯೋಗ ? ತಾನಂತೂ ಸತ್ತುಹೋಗುತ್ತೇನೆ. ಇರುವ ಕುಟುಂಬಸ್ಥರನ್ನು ಇಲ್ಲಿ ಕರೆಸಿಕೊಂಡು ಕಣ್ಣೀರು ಕೆಡವಿಸಿ, ಅವರನ್ನು ಅಸ್ಥಿರಗೊಳಿಸಿ ಯಾಕೆ ನನ್ನ ಕುಟುಂಬಕ್ಕೆ ಮತ್ತಷ್ಟು ನೋವು ಕೊಡಲಿ. ನನ್ನೊಂದಿಗೇ ನಾನವರಿಗೆ ಇಲ್ಲಿಯ ತನಕ ಕೊಟ್ಟ ನೋವು ಸರಿದುಹೋಗಲಿ. ಮುಂದೆ ಅವರನ್ನು ನನ್ನ ‘ ಕಡೆಯ ನೋಟ ‘ ವು ಕೊನೆಯ ತನಕ ಚುಚ್ಚಿ ಕೊಲ್ಲುವುದು ಬೇಡ. ‘ ಹೀಗಂದುಕೊಂಡು ಯಾರ ಭೇಟಿಯನ್ನೂ ನಿರಾಕರಿಸುವವರೇ ಜಾಸ್ತಿ.

ಆದರೆ ಇಲ್ಲಿಯತನಕ, ಗಲ್ಲು ಶತಸ್ಸಿದ್ಧ ಎಂದು ತಿಳಿದ ನಂತರ ಕೂಡ ಕುಟುಂಬದವರು ಅಪರಾಧಿಗಳನ್ನು ಮಾತಾಡಿಸಲು ಉತ್ಸುಕರಾಗಿಲ್ಲ.

ಈ ನಾಲ್ಕು ಜನರಿಗೆ ಈ ಮೇಲಿನ ಮೂರು ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಇನ್ನು ಬಾಕಿ ಉಳಿದಿರೋದು ಕೇವಲ 168 ಗಂಟೆಗಳಷ್ಟೇ ! ಗಂಟೆಗಳು ಕರಗಿ ಹೋಗಲು ಎಷ್ಟು ಹೊತ್ತು ಬೇಕು ?!

ಕಾಂಡೋಮ್ ಗಾಗಿ ಆಕೆಯ ಕೊಲೆ । ಕೊಲೆಗಾರ ಮುಕುಂದೆ ತಿಕೊಂದೆ !!

Leave A Reply

Your email address will not be published.