ವಿವೇಕ ಜಯಂತಿ ಆಚರಣೆ ಇಂದು ಬೆಳ್ಳಾರೆಯಲ್ಲಿ

ಸವಣೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ಳಾರೆ ನಗರ ವತಿಯಿಂದ ಆಧ್ಯಾತ್ಮಿಕವಾದಿ ಸ್ವಾಮಿ ವಿವೇಕಾನಂದರ 157 ನೇ ಜನ್ಮ ಜಯಂತಿಯ ಪ್ರಯುಕ್ತ ವಿವೇಕ ಜಯಂತಿ ಕಾರ್ಯಕ್ರಮವು ಜ.11 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ನಡೆಯಲಿದೆ.

ಬೆಳಿಗ್ಗೆಗಂಟೆ 9.30 ರಿಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಿಂದ ಅಚಲಾಪುರ ಕಟ್ಟೆಯ ತನಕ ಆಕರ್ಷಕ ನೃತ್ಯ ಭಜನೆ, ಚೆಂಡೆವಾದನಗಳೊಂದಿಗೆ ವಿಜ್ರಂಭಣೆಯ ನಗರ ಮೆರವಣಿಗೆ, ಬೆಳಿಗ್ಗೆ ಗಂಟೆ 11.00 ರಿಂದ ಸಭಾಕಾರ್ಯಕ್ರಮ ನಡೆಯಲಿದೆ.
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ಶ್ಯಾನುಭಾಗ ಮಣಿಕ್ಕಾರ್ ಅಧ್ಯಕ್ಷತೆ ವಹಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಎ.ಬಿ.ವಿ.ಪಿ. ಮಂಗಳೂರು ನಗರದ ನಿಕಟಪೂರ್ವ ಸಂಘಟನಾ ಕಾರ್ಯದರ್ಶಿ ಚತ್ರಪತಿ ಮಹಿಪಾಲ್ ಶಿವಮೊಗ್ಗ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ, ಎಬಿವಿಪಿ ಯ ಮಾಜಿ ರಾಜ್ಯ ಕಾರ್ಯದರ್ಶಿಯೂ ಆದ ಶ್ರೀ ರಮೇಶ್ ಕೆ., ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಯಾದ ಕುಮಾರಿ ಸಂಧ್ಯಾಕುಮಾರಿ ಬಿ.ಎನ್., ಹಾಗೂ ಪೆರುವಾಜೆ, ಬೆಳ್ಳಾರೆ ಡಾ| ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಹರ್ಷಿತಾ ಕೆ.ಎಸ್‌ರವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದ್ದು, ಅನೇಕ ಗಣ್ಯರನೇಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Leave A Reply

Your email address will not be published.