ಪೌರತ್ವ ಕಾಯ್ದೆಮಾಹಿತಿಗೆ ಮನೆ ಮನೆಗೆ ಬಿಜೆಪಿ : ಸ್ವಗ್ರಾಮ ಪಾಲ್ತಾಡಿಯಲ್ಲಿ ನಳಿನ್ ಕುಮಾರ್ ಕಟೀಲ್ ಚಾಲನೆ
ಸವಣೂರು : ಮಂಗಳೂರಿನಲ್ಲಿ ಜ.19 ಕ್ಕೆ ನಡೆಯಲಿರುವ ಜನಪೌರತ್ವ ಕಾಯ್ದೆಯ (CAA – 2019) ಬಗ್ಗೆಹೆಚ್ಚಿನ ಮಾಹಿತಿ ಮತ್ತು ಜಾಗೃತಿ ಸಭೆಯು ದೊಡ್ಡಸಮಾವೇಶದ ರೀತಿಯಲ್ಲಿಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿಈಗಾಗಲೇ ಬಿಜೆಪಿಯು ಮನೆ ಮನೆ ಸಂಪರ್ಕ ಮಾಡಿ ಜಾಗೃತಿಗೊಳಿಸುವ ಕೆಲಸ ಆರಂಭಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಪಾಲ್ತಾಡಿ ಗ್ರಾಮದ ಕುಂಜಾಡಿಯ ತನ್ನ ಮನೆಯಲ್ಲಿ ಜನಜಾಗೃತಿ ಸಭೆಯ ಮನೆ ಮನೆ ಬೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಳಿನ್ ಕುಮಾರ್ ಕಟೀಲ್, ಸದ್ಯಕ್ಕೆ ಮಂಗಳೂರಿನಲ್ಲಿದ್ದರೂ, ಮೂಲತಃ ಅವರು ಪಾಲ್ತಾಡಿ ಗ್ರಾಮದವರು.
ಈ ಸಂದರ್ಭ ನಳಿನ್ ಕುಮಾರ್ ಅವರ ಗುರು ಬಿ.ಕೆ.ರಮೇಶ್ರವರು, ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ.ಅಧ್ಯಕ್ಷೆಇಂದಿರಾ ಬಿ.ಕೆ, ಸದಸ್ಯರಾದ ಸತೀಶ್ ಬಲ್ಯಾಯ, ಗಿರಿಶಂಕರ ಸುಲಾಯ, ಸತೀಶ್ ಅಂಗಡಿಮೂಲೆ, ಪ್ರಮುಖರಾದ ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ ರೈ ಕುಂಜಾಡಿ, ಇಸ್ಮಾಯಿಲ್ ಕಾನಾವು, ಕುಶಾಲಪ್ಪ ಗೌಡ,, ವಿಠ್ಠಲ ಶೆಟ್ಟಿ ಬಂಬಿಲ, ಪುಟ್ಟಣ್ಣ ಮಡಿವಾಳ ಪರಣೆ, ನವೀನ್ ಕುಮಾರ್ ರೈ ಮೊದಲಾದವರಿದ್ದರು.