ತಾನು ಪ್ರೀತಿಸಿದ ಹುಡುಗಿಯ ಎದುರೇ ವಿಷ ಸೇವನೆ । ಉಜಿರೆ ವಿದ್ಯಾರ್ಥಿ ಸಂದೀಪ್ ಸಾವು

ಉಜಿರೆ : ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಂದೀಪ್, ತನ್ನ ಪ್ರೇಯಸಿಯ ಎದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಈ ಘಟನೆ ಇಂದು ಮುಂಜಾವು ದಿದಿಂಬಿ ಅಣ್ಣುಗೌಡರ ಮಗ ಸಂದೀಪ್ (17 ವರ್ಷ ) ಮೃತ ಬಾಲಕ.

ಆತ ಉಜಿರೆಯ ಎಸ್ ಡಿ ಎಂ ಕಾಲೇಜಿನ ಪ್ರಥಮ ಪಿ ಯು ಸಿ ಹುಡುಗನಾಗಿದ್ದು, ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು.

ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಿಸದೆ ಆತ ದುರ್ಮರಣಕ್ಕೀಡಾಗಿದ್ದಾನೆ.
ಆತನ ಸಾವಿಗೆ ಪ್ರೇಮನಿರಾಕರಣವೇ ಕಾರಣ ಎಂದು ತಿಳಿದುಬಂದಿದೆ.

Leave A Reply

Your email address will not be published.