ಮಠ೦ದೂರು ಮಾದರಿ ಶಾಸಕ ಯಾಕೆ ? । ಕೋಟ ಶ್ರೀನಿವಾಸ್ ಪೂಜಾರಿ ನೀಡಿದ ಆ ಏಳು ಕಾರಣಗಳು !

ಮೊನ್ನೆ ಪುತ್ತೂರಿಗೆ ಕೋಟ ಶ್ರೀನಿವಾಸ್ ಪೂಜಾರಿಯವರು ಬಂದಿದ್ದಾಗ, ಪುತ್ತೂರಿನ ಶಾಸಕರಾದ ಸಂಜೀವ ಮಠ೦ದೂರರ ಬಗ್ಗೆ ಕೆಲವು ಒಳ್ಳೆಯ ಮಾತನ್ನಾಡಿದ್ದರು. ಸಂಜೀವ ಮಠ೦ದೂರರು ” ಮಾದರಿ ಶಾಸಕರು ” ಎಂದು ಆ ದಿನ ಕೋಟಾ ಅವರು ಮಠ೦ದೂರರ ಅವರ ಬಗ್ಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.

 

ಕೋಟ ಶ್ರೀನಿವಾಸ್ ಪೂಜಾರಿಯವರು ಹಾಗನ್ನಲು ಏನು ಕಾರಣ ? ಯಾವ ಮಾನದಂಡಗಳನ್ನು ಇಟ್ಟುಕೊಂಡು ಕೋಟ ಅವರು ಹಾಗಂದಿರೋದು ಎಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಆ 7 ಕಾರಣಗಳನ್ನು ರಿವೀಲ್ ಮಾಡುತ್ತಿದೆ ಹೊಸಕನ್ನಡ .ಕಾಮ್

ಕೋಟ ಶ್ರೀನಿವಾಸ್ ಪೂಜಾರಿಯವರು ಇಡೀ ರಾಜ್ಯಕ್ಕೇ ತಿಳಿದಿರುವಂತೆ ಓರ್ವ ಸಾಮಾನ್ಯ ರಾಜಕಾರಣಿಯಲ್ಲ. ನಾಟ್ ಒನ್ ಇನ್ ಹಂಡ್ರೆಡ್ !

ಕೋಟ ಅವರು ಸಿಂಪ್ಲಿಸಿಟಿ ಮತ್ತು ಆದರ್ಶದಲ್ಲಿ ಮನೆಮಾತಾದವರು. ಅವರು ಹೇಳಿದ್ದಕ್ಕೆ ಒಂದು ತೂಕವಿರುತ್ತದೆ. ಘನತೆರಿರುತ್ತದೆ. ಹಾಗೆ ಅವರ ಆ ಒಂದು ಮಾತಿನ ಬೆನ್ನು ಹತ್ತಿ ಹೋದ ನಮಗೆ ಸಿಕ್ಕಿದ್ದು ಆ 7 ಕಾರಣಗಳು.

ಕಾರಣ-1 : ಕಾಲು ಶತಮಾನದ ರಾಜಕೀಯ ಅನುಭವ. ಎರಡು ದಶಕಗಳ ಕಾಲ ಹಲವು ಶಾಸಕರೊಡನೆ ಕ್ಷೇತ್ರದಲ್ಲಿ ದುಡಿದ ಅನುಭವ

ಕಾರಣ-2 : ರಾಜ್ಯ ನಾಯಕರೊಂದಿಗೆ ಅವರು ಹೊಂದಿರುವ ‘ ಫೇಸ್ ವ್ಯಾಲ್ಯೂ ‘ ಮತ್ತು ಸಂಪರ್ಕ. ರಾಜ್ಯದ ಯಾವುದೇ ಮಂತ್ರಿ, ಅಥವಾ ನಾಯಕರುಗಳು, ಇವತ್ತು ಸಂಜೀವಣ್ಣಏನಾದರೂ ಕ್ಷೇತ್ರದ ಬಗ್ಗೆ ಬೇಡಿಕೆ ಇಟ್ಟಲ್ಲಿ, ಅಂತಹ ಬೇಡಿಕೆಯ ಬಗ್ಗೆ ಅನಗತ್ಯ ಪರಾಮರ್ಶೆಗೆ ಇಳಿಯುವುದಿಲ್ಲ. ಯಾಕೆಂದರೆ, ಸಂಜೀವ ಮಠ೦ದೂರರಿಗೆ ಅವರದೇ ಆದ ಫೇಸ್ ವ್ಯಾಲ್ಯೂ ಇದೆ. ಅದೇ ಫೇಸ್ ವ್ಯಾಲ್ಯೂ ಅವರ ಪರವಾಗಿ ಈಗ ಸರ್ಕಾರದಿಂದ ಫಲಾನುಭವ ತರುವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ.

ಕಾರಣ-3 : ಪಕ್ಷ ಮತ್ತು ಅಭಿವೃದ್ಧಿಯ ಮಧ್ಯದ ಪರ್ಫೆಕ್ಟ್ ಸಮತೋಲನ. ಪಕ್ಷ ಭೇದ ಮರೆತು ಕಾರ್ಯನಿರ್ವಹಣೆ. ಅಭಿವೃದ್ಧಿ ಮತ್ತು ಅನುದಾನ – ಎರಡೂ ನೈಜ ಆದ್ಯತೆಯ ( ಪ್ರಿಯೋರಿಟಿ ದ್ಯಾನ್ ಪಾರ್ಟಿ ) ಮುಖಾಂತರ ಜಾರಿ.

ಕಾರಣ-4 : ಅನಗತ್ಯ ಪ್ರಚಾರದಿಂದ ದೂರ ಉಳಿದು ಸೇವಾ ಮನೋಭಾವನೆ. ಇವತ್ತು ಎಲ್ಲ ಕ್ಷೇತ್ರಗಳಲ್ಲೂ ತನ್ನಣ್ಣವು ತಾನು ಮಾಡಿಕೊಂಡು ಮಿಂಚಲು ಪ್ರಯತ್ನಿಸುವ ಪರಿಸ್ಥಿತಿಯಲ್ಲಿ, ತಾನು ರಾಜಕೀಯಕ್ಕೆ ಬಂದದ್ದು ಅಧಿಕಾರಕ್ಕಲ್ಲ, ಸೇವಾ ಮನೋಭಾವನೆಗೆ ಎಂಬ ಮನಸ್ಸತ್ವದಿಂದ ಕಾರ್ಯ ನಿರ್ವಹಿಸುವ ಅವರ ಪ್ರವೃತ್ತಿತಡವಾಗಿಯಾದರೂ, ಅಷ್ಟೇ ಪ್ರಬಲವಾಗಿ ಅದನ್ನು ಜನರು ಗುರುತಿಸಿದ್ದಾರೆ.

ಕಾರಣ-5 : ಯೋಜನೆಯನ್ನು ಫಾಲೋ ಅಪ್ ಮಾಡುವ ವಿಧಾನ. ಅಧಿಕಾರಿ ಜನಸಾಮಾನ್ಯರ ಮಧ್ಯದ ಬ್ಯಾಲೆನ್ಸ್ಡ್ ಕೊಂಡಿಯಾಗಿ ಕೆಲಸ ಮಾಡುವ ಕಸುಬುದಾರಿಕೆ.

ಕಾರಣ-6 : ದಣಿವರಿಯದ ಕ್ಷೇತ್ರದಲ್ಲಿನ ಪ್ರವಾಸ. ಸಮಯ ಕ್ಷೇತ್ರದಲ್ಲಿಯೇ ಕಳೆಯುತ್ತಿರುವುದನ್ನು ರಾಜ್ಯ ಹೈಕಮಾಂಡ್ ಕೂಡಾ ಗಮನಿಸಿ ಅವರ ಕಾರ್ಯಕ್ಕೆ ಶಹಬ್ಬಾಸ್ ನೀಡಿದೆ ಅನ್ನಲ್ಲಾಗುತ್ತಿದೆ.

ಕಾರಣ -7 : ಈ ಹಿಂದಿನ ಪುತ್ತೂರಿನ ನಾಯಕರುಗಳಿಗಿಂತ ವಿಭಿನ್ನವಾಗಿ ತಾಲೂಕಿನ, ಜಿಲ್ಲೆಯ ಮತ್ತು ರಾಜ್ಯದ ಮುಖಂಡರುಗಳನ್ನುಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವರ ಅಜಾತಶತ್ರು ಗುಣ.

Leave A Reply

Your email address will not be published.