ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ । ಸಿಕ್ಕಿಬಿದ್ದ ಸಂದೀಪ್ ರೆಡ್ಡಿ
ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಮಾಲೀಕರನ್ನು ಬೆಂಗಳೂರು ಪೊಲೀಸರು ಬುಧವಾರ ನಗರದಲ್ಲಿ ಬಂಧಿಸಿದ್ದಾರೆ.
ಮಹಾಲಕ್ಷ್ಮಿಲೇಔಟ್ ನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನು ನಡೆಸಲಾಗುತ್ತಿದೆ ಎಂಬ ಸುಳಿವನ್ನು ಪಡೆದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ತಡರಾತ್ರಿ ಮಹಾಲಕ್ಷ್ಮಿ ಲೇಔಟ್ ನ ಶ್ರೀ ವೆಂಕಟೇಶ್ವರ ಸಂಸ್ಥೆಯ ಆವರಣದಲ್ಲಿ ದಾಳಿ ನಡೆಸಿ ಮಾಲೀಕ ಸಂದೀಪ್ ರೆಡ್ಡಿ (45) ಎಂಬಾತನನ್ನು ಬಂಧಿಸಲಾಗಿದೆ.
ದೇಶಾದ್ಯಂತ ಹಲವಾರು ತೆರೆದ ವಿಶ್ವವಿದ್ಯಾಲಯಗಳಿಗೆ ಸೇರಿದ 45 ಕ್ಕೂ ಹೆಚ್ಚು ಮಾರ್ಕ್ಸ್ ಕಾರ್ಡ್ ಗೆ ಬಳಸುವ ಕಾಗದ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಕಾರ್ಡ್ ಮುದ್ರಣ ಸಾಮಗ್ರಿಗಳನ್ನು ಗುರುತಿಸಿದ್ದಾರೆ. ಸಂದೀಪ್ ರೆಡ್ಡಿ 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಐಟಿ ಸಲಹೆಗಾರನಾಗಿ ಕೆಲಸ ಮಾಡಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಐದು ವರ್ಷಗಳ ಹಿಂದೆ, ಒಮ್ಮೆಲೇ ದುಡ್ಡು ಗೋರಿಕೊಳ್ಳುವ ಉದ್ದೇಶದಿಂದ ಆತ ಶ್ರೀ ವೆಂಕಟೇಶ್ವರ ಸಂಸ್ಥೆಯನ್ನು ಪ್ರಾರಂಭಿಸಿದರು.
ಈಗ ಉನ್ನತ ಶಿಕ್ಷಣವಿದ್ದರೇನೇ ಒಳ್ಳೊಳ್ಳೆಯ ಉದ್ಯೋಗಾವಕಾಶಗಳಿರುವುದರಿಂದ ಸರ್ಟಿಫಿಕೇಟ್ ಗಳಿಗೆ ಮುಗಿಬೀಳುವ ಆಕಾ೦ಕ್ಷಿಗಳ ಅಗತ್ಯಗಳಿಗಾಗಿ ಆತ ಈ ಧ೦ಧೆಗೆ ಇಳಿದಿದ್ದ. ತನಿಖೆ ಈಗ ಪ್ರಗತಿಯಲ್ಲಿದೆ.
ಇದೇ ದಂಧೆಯಲ್ಲಿ ಲಕ್ಷಾಂತರ ರೂಪಾಯಿ ಕಮಾಯಿಯಿಸಿದ್ದ. ಬೃಹನ್ ಬೆಂಗಳೂರೆಂಬ ಊರು ಹೇಗಾದರೂ ಸರಿ, ಒಂದಷ್ಟು ಕಾಸು ಮಾಡಿಕೊಡುತ್ತದೆ- ಅದು ಯಾರೇ ಇರಲಿ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು