ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು !

15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ, ತಮಗೆ ಕೈ ಕೊಟ್ಟು ಹೋದ ‘ಅನರ್ಹರನ್ನು’ ಸೋಲಿಸಲೇಬೇಕೆಂಬ ಛಲ. ಜೆಡಿಎಸ್ ಗೆ , ಒಂದು ಕಡೆ ತನ್ನ ಕಡೆಯಿಂದ ಬಿಜೆಪಿಗೆ ಹೋದ ಶಾಶಕರನ್ನು ಸೋಲಿಸುವ ಪಣ ಮತ್ತು, ಅಲ್ಲಲ್ಲಿ ತನಗಾಗದೆ ಇರುವವರ ಸೋಲಿಸುವ ಹುನ್ನಾರ.

ಜೆಡಿಎಸ್ ಗೆ ತನಗೆ ಗೆಲ್ಲುವುದಕ್ಕಿಂತಲೂ, ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶವಿತ್ತು. ಆ ಮೂಲಕ ಒಂದು ಕಡೆ, ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹಂಬಲ ಮತ್ತು ಬಿಜೆಪಿಗೆ ಒಂದು ವೇಳೆ ಉಪಚುನಾವಣೆಯಲ್ಲಿ ಅಗತ್ಯಶಾಶಕರ ಆಯ್ಕೆ ಆಗದೆ ಹೋದರೆ, ಇನ್ನೊಮ್ಮೆ ಬಿಜೆಪಿಯ ಅಥವಾ ಕಾಂಗ್ರೆಸ್ಸಿನ ಜತೆಗೆ ಸೇರಿ ‘ಕಿಂಗ್ ಮೇಕರ್’ ರಾಜಕೀಯ ಮಾಡುವ ಕಾತುರ.

ಆದರೆ ಮತದಾರ ಪ್ರಭುದ್ಧನಾಗಿದ್ದಾನೆ. ಆತನಿಗೆ, ನಿಜಕ್ಕೂ ಮತದಾರನಿಗೆ ಬೇರೆ ಆಯ್ಕೆಗಳೇ ಇರಲಿಲ್ಲ. ಅತ್ತ ಬಿಜೆಪಿಯ ಅಭ್ಯರ್ಥಿಗಳನ್ನುಸೋಲಿಸಿದರೆ, ಮತ್ತೊಮ್ಮೆ ಸರಕಾರ ಅಸ್ಥಿರತೆಗೆ ಬೀಳುತ್ತದೆ. ಈಗಾಗಲೇ 1.5 ವರ್ಷಗಳ ಸರಕಾರದ ಅಸ್ಥಿರತೆ, ಕಚ್ಚಾಟವನ್ನು ಜನ ನೋಡಿದ್ದಾರೆ. ಮತ್ತೊಮ್ಮೆಮೊನ್ನೆ ಸರಕಾರ ಬಿದ್ದಾಗ ನಡೆದ ಎಲ್ಲ ಪ್ರಹಸನಗಳನ್ನು ಆತ ನೋಡಿದ್ದಾನೆ. ಈಗ ಮತ್ತೊಮ್ಮೆ ಉಪಚುನಾವಣೆಯ ಸಂಧರ್ಭದಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಿದರೆ, ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ರಾಜ್ಯ ಹೊಸ ರಾಜಕೀಯ ನಾಟಕ, ಸಮೀಕರಣಕ್ಕೆ- ನೀವದನ್ನು ಏನು ಬೇಕಾದರೂ ಕರೆಯಿರಿ- ಮುಂದಾಗಬೇಕಾಗುತ್ತದೆ. ಮತದಾರನು, ಮತ್ತೊಮ್ಮೆಶಾಶಕರ ಜಗಳ, ರಾಜೀನಾಮೆ, ಪಕ್ಷಾಂತರ, ಅನರ್ಹತೆ ಮುಂತಾದುವುಗಳನ್ನು ಇನ್ನುಳಿದ 3.5 ವರ್ಷ ಕಾಲ ನೋಡಲು ಮತದಾರ ರೆಡಿಯಿಲ್ಲ ಎಂಬುದಂತೂ ಸ್ಪಷ್ಟವಾಗಿದೆ.

ಅಷ್ಟೇ ಅಲ್ಲದೆ, ಇವತ್ತಿನ ಬಿಜೆಪಿಯ ಗೆಲುವಿಗೆ ಮುಖ್ಯಮಂತ್ರಿ ಮತ್ತು ಫುಲ್ ಟೈಮ್ ಸ್ಟ್ರಾಟೆಜಿಕ್ ರಾಜಕಾರಣಿ ಬಿ ಎಸ್ ಯಡಿಯೂರಪ್ಪನವರ ಚರಿಸ್ಮಾಕೆಲಸ ಮಾಡಿದೆ. ಓವ್ರ ರಾಜಕಾರಣಿ, ತನ್ನ 76 ನೆಯ ವಯಸ್ಸಿನಲ್ಲಿ, ಈ ರೀತಿ ಕಾಲಿಗೆ ಹೆಲಿಕಾಪ್ಟರ್ ಕಟ್ಟಿಕೊಂಡು ಗಿರಗಿಟ್ಲೆ ಸುತ್ತಿ, ನಿರಂತರ ತಂತ್ರಗಾರಿಕೆ ಮಾಡಿ, ಭಿನ್ನಮತ ಶಮನ ಮಾಡಿ ಕೆಲಸ ಮಾಡುತ್ತಾರೆಂದಾದರೆ, ಅದು ಅಸಾಮಾನ್ಯ ಕೆಲಸವೇ ಸರಿ. ಜನರು, ಯಡಿಯೂರಪ್ಪನವರ ಕಾರ್ಯವೈಖರಿಯನ್ನು, ಮೊನ್ನೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಹಿಸಿಕೊಂಡ ಕೂಡಲೇ ಗಮನಿಸಿದ್ದರು. ಆವಾಗ, ಮಂತ್ರಿಮಂಡಲ ವಿಸ್ತರಣೆ ಆಗಿರಲಿಲ್ಲ. ಸರಕಾರದಲ್ಲಿದ್ದದ್ದು ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತೆ ಯಡಿಯೂರು ಮಾತ್ರ. ಆವಾಗ ಅವರು ಅತಿವೃಷ್ಟಿ ಪ್ರವಾಹದ ಕ್ಷೇತ್ರಗಳಲ್ಲಿ ತಿರುಗಿದ ರೀತಿ ನವಯುವಕರನ್ನೂ ಬೆಚ್ಚಿಬೀಳಿಸುವಂತಿತ್ತು. ಯುವಕರಿಗೆ ಮಾದರಿಯಾಗುವಂತಿತ್ತು.

ಶಾಶಕರ ಅನರ್ಹತೆ ಮಾಡಿದ್ದು ತಪ್ಪು ಎಂದು ಜನತಾ ಜನಾರ್ಧನ ತೀರ್ಪಿತ್ತಿದ್ದಾನೆ. ಇವತ್ತಿನ ತೀರ್ಪು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯನವರಿಗೆ ತೀವ್ರ ಮುಖಭಂಗವಾಗಿದೆ.

ಯಡಿಯೂರಪ್ಪನವರು ಎರಡೂ ಕೈಯಲ್ಲಿ ‘ V ‘ ಶೇಪಿನಲ್ಲಿ ಕೈ ಬೀಸಲು ರೆಡಿಯಾಗಿದ್ದಾರೆ. ಮತದಾರ ಇನ್ನು ಮೂರೂವರೆ ವರ್ಷ ರಾಜಕೀಯ ಸ್ಥಿರತೆಯ ದೃಷ್ಟಿಯಿಂದ ನೆಮ್ಮದಿಯಾಗಿರಬಹುದು.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.