ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಇಂದು ಉಪ್ಪಿನಂಗಡಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಉಜಿರೆಗೆ
ಈ ದಿನ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಾಲಯದ ಗುಂಡಿಯಲ್ಲಿ ನಡೆಯಲಿರುವ ಕಿಂಡಿ ಆಣೆಕಟ್ಟು ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಯವರು ಬರಲಿದ್ದಾರೆ. ಇಂದು, ಶನಿವಾರ, ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ನಾಳೆ, ಭಾನುವಾರ ಬೆಳ್ತಂಗಡಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರಲಿದ್ದಾರೆ. ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ತಾಲೂಕಿನ 347 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಇನ್ನುಳಿದಂತೆ, ರಾಜ್ಯದ ಮುಜರಾಯೀ ಮಂತ್ರಿಗಳಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರೂ, ಸಂಸದರೂ ಆದ ಶ್ರೀ ನಳಿನ್ ಕುಮಾರ್ ಕಟೀಲರು ಮತ್ತಿತರ ಆಸುಪಾಸಿನ ಜಿಲ್ಲೆಯ ಶಾಶಕರುಗಳು ಉಜಿರೆಯಲ್ಲಿ ಜೊತೆಗೂಡಲಿದ್ದಾರೆ.