ಹೈದರಾಬಾದ್ ನಿರ್ಭಯಾ ರೇಪ್ ಆರೋಪಿಗಳು ಮಟಾಷ್ । ಸೂಪರ್ ಫಾಸ್ಟ್ ನ್ಯಾಯ ಕೊಟ್ಟ ಪೊಲೀಸರು !

ಜಸ್ಟಿಸ್ ಡೆಲಿವರ್ಡ್ ಫ಼ಾರ್ ಪ್ರಿಯಾಂಕಾ ರೆಡ್ಡಿ !

ಮೊನ್ನೆ ತಾನೇ ನಡೆದ ಹೈದರಾಬಾದ್ ನ ಪಶುವೈದ್ಯೆ ರೇಪ್ ಕೇಸ್ ನ ಆರೋಪಿಗಳಿಗೆ ದೇಶದ ಸೂಪರ್ ಫಾಸ್ಟ್ ನ್ಯಾಯಾಲಯ – ನಮ್ಮ ಪೊಲೀಸು ವ್ಯವಸ್ಥೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇಂದು ನಾಲ್ವರು ಆರೋಪಿಗಳನ್ನು ಅತ್ಯಾಚಾರದ ಸ್ಥಳ ಪರಿಶೀಲನೆಗೆ ಕರೆದೊಯ್ಯುವ ಸಂದರ್ಭದಲ್ಲಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ, ಪೊಲೀಸರು ಹಾರಿಸಿದ ಬೆಂಕಿಗುಂಡುಗಳು ಅಪರಾಧಿಗಳ ಹೊಟ್ಟೆ ಬಗೆದು ಹಾಕಿದೆ. ಅಪರಾಧಿಗಳು ಬಾಯಿಗೆ ತೊಟ್ಟು ನೀರೂ ಇಲ್ಲದಂತೆ ಆಕಾಶ ನೋಡಿಕೊಂಡು ಸೆಟೆದುಕೊಂಡು ಮಲಗಿದ್ದಾರೆ.

ಟ್ರಕ್ ಡ್ರೈವರ್ ಮೊಹಮ್ಮದ್ , ಜೊಲ್ಲು ಶಿವ, ಜೊಲ್ಲು ನವೀನ್, ಮತ್ತು ಚಿಂತಕುಂಟ ಚೆನ್ನಕೇಶವುಲು

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯೆ ನಡೆದ ಸ್ಥಳದಲ್ಲಿಯೇ ಎನ್ ಕೌಂಟರ್ ನಡೆದಿದೆ. ಇಂದು ಮುಂಜಾನೆ ಮೂರು ಗಂಟೆಯ ಸುಮಾರಿಗೆ ಸ್ಪಾಟ್ ಮಹಜರು ನಡೆಯುವ ವೇಳೆ ಎನ್ ಕೌಂಟರ್ ನಡೆದಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಆರೋಪಿಗಳು ತಪ್ಪಿಸಿಕೊಳ್ಳಲು ಪೊಲೀಸರತ್ತ ಕಲ್ಲು ಬಿಸಾಡಿದ್ದರೆಂದು ಪೊಲೀಸ್ ಮೂಲಗಳು ಹೇಳಿದರೂ, ಅದನ್ನು ಯಾರೂ ನಂಬುವುದಕ್ಕೆ ಆಗುವುದಿಲ್ಲ . ತೆಲಂಗಾಣದ ಟೆರರ್ ಮುಖ್ಯಮಂತ್ರಿ ಕೆಸಿಆರ್ – ಕೆ ಚಂದ್ರಶೇಖರ್ ರಾವ್ ಅವರ ಸರಕಾರದ ಬೆಂಬಲವಿಲ್ಲದೆ ಇದು ನಡೆಯಲು ಸಾಧ್ಯವಿಲ್ಲ.
ಕೆಸಿಆರ್ ಕಣ್ಣ ಇಶಾರೆಯಲ್ಲಿಯೇ ಕೆಲಸ ಮುಗಿಸಿ ತಣ್ಣಗೆ ಕುಳಿತಿದ್ದಾರೆ.

ದೆಹಲಿಯ ನಿರ್ಭಯಾ ಹತ್ಯಾ ಆರೋಪಿಗಳಿಗೆ ಶಿಕ್ಷೆ ಜಾರಿಯಾಗದೆ 7 ವರ್ಷದ ನಂತರವೂ ನ್ಯಾಯ ಪ್ರಕ್ರಿಯೆಯಲ್ಲಿಯೇ ಇದ್ದಾರೆ. ನ್ಯಾಯ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಜನತೆಯಲ್ಲಿ ಸಣ್ಣದಾಗಿ ನಿಟ್ಟುಸಿರು.

ಶಹಬ್ಬಾಶ್ ತೆಲಂಗಾಣ ಪೊಲೀಸ್ !!

Leave a Reply

error: Content is protected !!
Scroll to Top
%d bloggers like this: