ರಸಕವಿ ಕಾಳಿದಾಸನ ಮೇಘಸಂದೇಶ

ಹಿಮಾಲಯನ್ ನಗರಿ ಅಲಕಾವನ್ನು ಆಳುತ್ತಿದ್ದವರು ಯಕ್ಷರಾಜ ಕುಬೇರ. ಕುಬೇರನ ಅರಮನೆಯಲ್ಲಿ ಕೆಲಸಕ್ಕಿದ್ದ ಯಕ್ಷನೊಬ್ಬನಿಗೆ ಆಗ ತಾನೆ ಮದುವೆಯಾಗಿತ್ತು. ಹೆಂಡತಿಯ ಮೇಲಿನ ವಿಪರೀತ ಮೋಹಕ್ಕೆ ಬಿದ್ದ ಯಕ್ಷ ತನ್ನ ಕೆಲಸದ ಮೇಲಿದ್ದ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಕುಪಿತಗೊಂಡ ಕುಬೇರನು ಯಕ್ಷ ಸೇವಕನನ್ನು ಗಡಿಪಾರು ಮಾಡುತ್ತಾನೆ.


Ad Widget

Ad Widget

Ad Widget

Ad Widget
Ad Widget

Ad Widget

ಹೀಗೆ ಕುಬೇರನಿಂದ ದೇಶಭ್ರಷ್ಟನಾಗಿ ಹೊರದಬ್ಬಲ್ಪಟ್ಟ ಯಕ್ಷನು ಹಿಮಾಲಯನ್ ಪ್ರದೇಶದಿಂದ ಬಹುದೂರಕ್ಕೆ, ದಕ್ಷಿಣಕ್ಕೆ ಮಧ್ಯ ಭಾರತಕ್ಕೆ ಬರುತ್ತಾನೆ. ಅಷ್ಟು ದೂರ ಪ್ರಯಾಣಿಸಿ ಬಂದರೂ ಆತನ ಮನಸ್ಸೆಲ್ಲಾ ತನ್ನ ಪ್ರಿಯತಮೆಯ ಸುತ್ತಲೇ ಸುತ್ತುತ್ತಿರುತ್ತವೆ. ಆಕೆಯ ಬಗ್ಗೆ ಚಿಂತಿಸುತ್ತಾ ಚಿಂತಿಸುತ್ತಾ ಆತ ಊಟ ತಿಂಡಿ ಬಿಡುತ್ತಾನೆ. ಆಹಾರವಿಲ್ಲದೆ ಆತ ವಿಪರೀತ ಕೃಷನಾಗುತ್ತಾನೆ. ಧರಿಸಿದ್ದ ಬಲಗೈಮಣಿಕಟ್ಟಿನ ಸರ (ಈಗಿನ ಬ್ರೇಸ್ಲೆಟ್) ಜಾರಿ ಬೀಳುತ್ತದೆ. ಹೆಂಡತಿಯನ್ನು ಸೇರಲಾರದು ಅಸಹಾಯಕತೆಯಿಂದ ಆತ ದೂರದ ಬೆಟ್ಟ ಹತ್ತಿ ಕೂರುತ್ತಾನೆ.


Ad Widget

ಅಲ್ಕಾದಲ್ಲಿ ಹೆಂಡತಿ ಆತನಿಗಾಗಿ ಕಾಯುತ್ತಿರುತ್ತಾಳೆ. ಹಾಗೆ ಈತ ಬೆಟ್ಟದ ಮೇಲೆ ಕುಳಿತಿರುವಾಗ ಮುಂಗಾರಿನ ಮೊದಲ ಮೋಡಗಳ ಮೊದಲ ಕಂತುಗಳು ಹರಿದ ಚಿತ್ರಗಳಂತೆ ತಮ್ಮ ಪ್ರಯಾಣವನ್ನು ಉತ್ತರದ ಕಡೆಗೆ ಮುಖಮಾಡಿ ಸಾಗುತ್ತಿರುತ್ತವೆ.

ಅಷ್ಟೊತ್ತಿಗಾಗಲೇ ಉತ್ತರ ಮತ್ತು ಮಧ್ಯ ಭಾರತದ ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ವರ್ತಕರ ಎಲ್ಲರೂ ಕೂಡ ಮಳೆಗಾಲದ ನಿಮಿತ್ತ ತಮ್ಮಜೋಳಿಗೆ ಬರಿದು ಮಾಡಿಕೊಂಡು ತಮ್ಮ ತಮ್ಮ ಗೂಡು ಸೇರಿರುತ್ತಾರೆ. ಆದ್ದರಿಂದ ಯಾವುದೇ ಸಂದೇಶವನ್ನು ತನ್ನ ಪತ್ನಿಗೆ ತಲುಪಿಸಲಾಗಿದೆ ಪರಿತಪಿಸುತ್ತಾನೆ. ಅಲ್ಲದೆ ತನ್ನ ಆಕೆಯ ಕ್ಷೇಮದ ಬಗ್ಗೆ ಯಾವುದೇ ಸುಳಿವು ಇಲ್ಲದೆ ಗಾಬರಿ ಗೊಳ್ಳುತ್ತಾನೆ.

ಇಂತಹ ಡೆಸ್ಪರೇಶನ್ ನ ಸ್ಥಿತಿಯಲ್ಲಿ ಸಾಗುತ್ತಿರುವ ಮುಂಗಾರಿನ ಮೋಡಗಳನ್ನು ಕೂಗಿ ಕರೆಯುತ್ತಾನೆ ಯಕ್ಷ. ಕರೆದು ತನ್ನ ಪತ್ನಿಗೆ ಸಂದೇಶ ತಲುಪಿಸುವಂತೆ ಬೇಡಿಕೊಳ್ಳುತ್ತಾನೆ. ಯಕ್ಷನು ಮಾನಸಿಕವಾಗಿ ಮೇಘಗಳ ಜೊತೆಗೆ ಪ್ರಯಾಣಿಸುತ್ತಾನೆ. ಮೇಘದೂತನ ದಾರಿಯುದ್ದಕ್ಕೂ ಸಿಗುವ ಪ್ರಕೃತಿಯೇ ಮೇಘಸಂದೇಶ ಕಥಾವಸ್ತು. ಆತ ಕಳಿಸುವ ಸಂದೇಶ ಸಂಕ್ಷಿಪ್ತವಾಗಿದ್ದರೂ, ಮೇಘಗಳು ಸಾಗುವ ಪಾತ್ರದುದ್ದಕ್ಕೂ ಬರುವ ವರ್ಣನೆಗಳು ಬಹಳ ರಸವತ್ತಾಗಿವೆ. ಅದು ರಸ ರಮ್ಯ ಶೃಂಗಾರ ಕಾವ್ಯ.

ಇಲ್ಲಿಯ ತನಕ ಉತ್ತರ ಮತ್ತು ಮಧ್ಯ ಭಾರತವನ್ನು ಬೆಸೆಯುವ ಬೆಸೆಯುವ ಭಾಗವಾಗಿರುವ ಪ್ರದೇಶವು, ಮೇಘಗಳ ತಮ್ಮ ಪಯಣದುದ್ದಕ್ಕೂ ವಿಂಗಡನೆಗೊಂಡು ಆ ಭೂ ಭಾಗಗಳಿಗೆ ಗಡಿಗಳು ಗುರುತುಗೊಂಡು ಬಿಡುತ್ತವೆ. ಭೂಭಾಗಗಳಿಗೆ ಕೈ ಕಾಲು ದೇಹಗಳು ಮೂಡಿ ಸ್ತ್ರೀಯೊಬ್ಬಳ ರೂಪ ಯವ್ವನ ಹೊಂದಿ ಸೌಂದರ್ಯದಿಂದ ತೊನೆದಾಡುತ್ತಾಳೆ. ಮೇಘಗಳು ಮುಂದೆ ಮುಂದೆ ಚಲಿಸಿದಂತೆ ಎಲ್ಲಾ ಹೊಸ ಹೊಸ ಭೂಪ್ರದೇಶಗಳು, ಅವುಗಳ ಆಚಾರ-ವಿಚಾರಗಳು ಬಿಚ್ಚಿಕೊಳ್ಳುತ್ತವೆ. ಗಮ್ಯ ಹತ್ತಿರವಾದಂತೆ ಮೋಡಗಳ ವೇಗ ಕಮ್ಮಿಯಾಗುತ್ತದೆ. ಪ್ರಯಾಣದ ಸುಸ್ತಿನಿಂದ ಭಾರವಾದ ಹೆಜ್ಜೆಗಳನ್ನಿಡುತ್ತವೆ ಮೋಡಗಳು. ವರ್ಣನಾ ಭಾರ ಅಧಿಕವಾಗುತ್ತದೆ. ಸಸ್ಪೆನ್ಸ್ ನ ಸಾಂದ್ರತೆಯಿಂದ ಮನಸ್ಸು ಮುದಗೊಳ್ಳುತ್ತದೆ.

ಆಕಾಶದಿಂದ ನೋಡಿದಾಗ ಈ ಗಿರಿಶಿಖರಗಳ ಘನ ಕಾಡು ಮಳೆಯಿಂದ ನೆಂದು ಹೋದ ಹೆಣ್ಣಿನ ತಲೆಗೂದಲಿನ ಇಳಿಜಾರು ಪ್ರದೇಶದಂತೆ ಭಾಸ. ಆ ಇಳಿಜಾರಿನ ಫಲವತ್ತಾದ ಪ್ರದೇಶದಲ್ಲಿ ಬೆಳೆದ ರಸಭರಿತ ಮಾವಿನಹಣ್ಣಿನ ಕಾಂತಿ ಅವಳಲ್ಲಿದೆ. ಶಿಖರದ ಉನ್ಮತ್ತ ಪ್ರದೇಶವು ಅವನಿಗಿಂತ ನಿಮಿರಿ ನಿಂತ ಕುಂಭ ಕುಚದ ಗಾಢ ಪ್ರದೇಶದಂತೆಯೂ, ಸುತ್ತಲಿನ ಪ್ರದೇಶವು ಬಿಳಿಯ ಆವೃತ್ತದಂತೆಯೂ ಗೋಚರ. ಅಲ್ಲಿ ನಿಗಿನಿಗಿ ಯೌವ್ವನದಿಂದ ಹರಿಯುವ ಗಾಂಭೀರ ನದಿಯ ಝಳ ಝಳ ಹರಿದು ಹೋಗುತ್ತಿದ್ದಾಳೆ. ತನ್ನ ದಡದಿಂದ ಅಲ್ಲಲ್ಲಿ ನೀರು ಹೊರಕ್ಕೆ ಚೆಲ್ಲಿ ನಡೆಯುವ ಆಕೆಯ ಸರಬರ ನಡೆಯುವಾಗ, ಧರಿಸಿದ ಬಟ್ಟೆ ಸರಿದು ತುಂಬಿದ ಬಿಳಿಯ ತೊಡೆಗಳನ್ನು ತೋರ್ಪಡಿಸುತ್ತಿದ್ದಾಳೆ. ಅವಳುಟ್ಟಿದ್ದ ತಿಳಿನೀರ ತೆಳುಸೀರೆ ಸುಯ್ಯುವ ಗಾಳಿಗೆ ಅಸ್ತವ್ಯಸ್ತವಾಗಿ ಹಾರುತ್ತಿದೆ.

”ತುಂಬಿದ ಪುಷ್ಕಳ ನಿತಂಬದ ರುಚಿ ಕಂಡವನು ಯಾರು ತಾನೇ ಅದನ್ನು ಬಿಡಲು ಸಾಧ್ಯ” ಎಂದು ಯಕ್ಷನು ಶೃಂಗಾರದಲ್ಲಿ ವರ್ಣಿಸುತ್ತಾನೆ.

ಕಾವ್ಯದ ಕೊನೆಯಲ್ಲಿ ಯಕ್ಷನ ಹೆಂಡತಿಯ ಪ್ರಸ್ತಾಪ ಬರುತ್ತದೆ. ಇಲ್ಲಿಯತನಕ ನಾವು ಮೇಘಗಳ ಮೋಹಕತೆ, ಗಾಂಭೀರಾಳ ತುಂಬು ನಿತಂಬಗಳ ವೈಯಾರವನ್ನು ನೋಡಿದ್ದರೆ, ಈಗ ಖುದ್ದು ಯಕ್ಷನ ರಾಜಕುಮಾರಿಯೇ ಮೋಡದ ಆಚೆಯಿಂದ ಎದ್ದು ಬರುತ್ತಾಳೆ. ಆಕೆಯದು ಅನನ್ಯ ಸೌಂದರ್ಯ ರಾಶಿ. ಕಾಶ್ಮೀರಿ ಹುಡುಗಿಯರು ಕಪ್ಪು ಕಣ್ಣುಗಳು. ರಕ್ತಮಿಶ್ರಿತ ಬಿಳಿಯ ಬಣ್ಣ. ಆಕೆಯ ತುಟಿಯು ಕಲಿತ ಕಡು ಕೆಂಪನೆಯ ಬಿಂಬಾ ಹಣ್ಣು. ಬಳುಕುವ ಹಿಡಿ ಸೊಂಟ. ಪಳ ಪಳ ಹೊಳೆಯುವ ಚಿಗರೆ ಮರಿಯ ಚಾಂಚಲ್ಯ ನೋಟ. ತೊನೆಯುವ ಗೊಂಚಲು ಕುಚಗಳ ಭಾರಕ್ಕೆ ದೇಹ ತುಸು ಮುಂದೆ ಬಾಗಿದೆ. ಸುಳಿಭರಿತ ಗುಹೆಯಂತಹಾ ಅವಳ ಹೊಕ್ಕುಳ. ತೊಡೆಗಳ ಭಾರಕ್ಕೆ ನದಿಗೆ ನಿಧಾನ.

ಅವಳ ಹುಬ್ಬುಗಳ ಚಲನೆಯಲ್ಲಿ ಗಾಂಧಾರ ನದಿಯ ಹರಿವಿನ ವೇಗ. ಕೆನ್ನೆಗಳು ಚಂದ್ರನ ಬಣ್ಣಗಳು. ಒಟ್ಟಾರೆ ನಿನ್ನಂತೆ ಒಂದು ಪ್ರತ್ಯೇಕ ಪ್ರದೇಶವಿಲ್ಲವೆಂದು ಹೊಗಳಿ ಹೇಳುತ್ತಾನೆ ಯಕ್ಷ.
ದೇಶಭ್ರಷ್ಟನಾಗಿ ಅಪರಿಚಿತ ಊರಿನಲ್ಲಿರುವ ಆತನಿಗೆ ತನ್ನ ಹೆಂಡತಿಯದೇ ಚಿಂತೆ. ಆತನಿಗೆ ಗೊತ್ತು : ತನ್ನ ಹೆಂಡತಿ ಕೂಡ ತನ್ನಂತೆಯೇ ಆತನಿಗೆ ಕಾಯುತ್ತಿದ್ದಾಳೆ, ಹಂಬಲಿಸುತ್ತಿದ್ದಾಳೆ ಎಂದು.

ಆಕೆಗೋ ದಿನದ ಉಳಿದ ಸಮಯದಲ್ಲಿ ಮನೆಯ ಕೆಲಸ ಕಾರ್ಯಗಳು ಇರುವುದರಿಂದ ಬೆಳಗಿನ ಹೊತ್ತು ಹೇಗೋ ಕಳೆದುಹೋಗುತ್ತದೆ. ಆದರೆ ಮುಗಿಲ ಮೇಲೆ ಸೂರ್ಯ ಮುನಿಸಿಕೊಂಡು ದೂರ ಹೋದ ಸಮಯದಲ್ಲಿ ಕಿಟಕಿಯ ಪಕ್ಕ ದಿಂಬಿಗೆ ತಲೆಯಿಟ್ಟು ಮಲಗಿರುವಾಗ ನಿಡು ಸುಯ್ಯುತ್ತಾಳೆ.
ಅತ್ತು ಅತ್ತು ಅವಳ ಕಣ್ಣು ಗುಡ್ಡೆಗಳು ಉಬ್ಬಿನಿಂತಿವೆ. ಮುಖ ಊದಿಕೊಂಡಿದೆ. ಮುಖವನ್ನು ಅರ್ಧ ಮುಚ್ಚಿರುವ ಕತ್ತಲಿನಂತಹಾ ಗಾಢವಾದ ಕೂದಲು ಗ್ರಹಣದ ಚಂದ್ರನನ್ನು ನೆನಪಿಸುತ್ತವೆ. ವಿರಹದ ಸ್ಥಿತಿಯಲ್ಲಿರುವ ಯಕ್ಷನು ತನ್ನ ಪತ್ನಿಯನ್ನು ಈಗಿನ ಸ್ಥಿತಿಯಲ್ಲಿ ನೆನಪಿಸಿಕೊಳ್ಳುವ ರೀತಿ ಇದು.

ಸೂರ್ಯರಶ್ಮಿ ಕಂತಿದ ನಂತರದ ಹೊತ್ತೇ ಯಕ್ಷನನ್ನ ಜಾಸ್ತಿ ಚಿಂತೆಗೀಡು ಮಾಡುತ್ತಿರುವುದು. ಯಕ್ಷನ ಮನಸ್ಸು ಒಂದರೆಗಳಿಗೆ ಚಂಚಲಗೊಳ್ಳುತ್ತದೆ. ”ರಾತ್ರಿಗಳಲ್ಲಿ ತಾನೇ ಮನಸ್ಸು ಬೇರೆ ಪ್ರಿಯಕರನ ಜೊತೆ ಓಡಾಡುವುದು..” ಹಾಗೆಂದು ಯಕ್ಷ ಚಿಂತೆಗೀಡಾಗುತ್ತಿರುವುದು.

ಆಕೆ ಅದೆಷ್ಟು ಪ್ರೀತಿಯಿಂದ ಅವನಿಗಾಗಿ ಕಾಯುತ್ತಿರಲಿ, ಆದರೆ ಸಹಜವಾಗಿ ಯಕ್ಷನು ವಿಚಲಿತನಾಗಿದ್ದಾನೆ. ಭಯಗೊಂಡಿದ್ದಾನೆ. ಸುಂದರ ನಗರ ಅಲಕಾದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಏರು ಯವ್ವನದ ನವಯುವಕರಿದ್ದಾರೆ. ಯಾವುದೋ ಒಂದು ಉನ್ಮತ್ತ ಕ್ಷಣದಲ್ಲಿ ಆಕೆ ತನ್ನ ಸ್ಥಿಮಿತ ಕಳೆದು ಕೊಳ್ಳಬಹುದು ಎಂಬ ಭಯ ಆತನದು.

ತನ್ನ ಹೆಂಡತಿ ಅಂಥವಳಲ್ಲ ಎಂದು ಆತನಿಗೆ ಗೊತ್ತು. ಆದರೆ ಯಕ್ಷನಿಗೆ ಗೊತ್ತು, ಬೇರೆ ಹೆಂಗಸರು ಅಂತಹಾ ಆಕರ್ಷಣೆಗೆ ಒಳಗಾಗುವುದನ್ನು ಆತ ಕಂಡಿದ್ದಾನೆ. ಬೇರೆ ಹೆಂಗಸರು ರಾತ್ರಿಗಳಲ್ಲಿ ತಮ್ಮ ರಾಜವೀದಿಯ ಕೊನೆಯಲ್ಲಿರುವ ತಮ್ಮ ಇನಿಯರ ಮನೆಗಳಿಗೆ ಗುಟ್ಟಾಗಿ ಹೋಗುತ್ತಾರೆ. ಅಲ್ಲಿ ಸೂಜಿ ಮೊನೆ ಕೂಡ ಸೋಕಲಾರದಷ್ಟು ಕತ್ತಲು. ಗಹನ ಕತ್ತಲಿನಲ್ಲಿ ಅವರಿಗೆ ನಿಚ್ಚಳ ಸುಖದ ಬೆಳಕು.

ಆದರೆ ಅಂಥ ಸಂದರ್ಭಗಳಲ್ಲಿ ಕೂಡ ಯಕ್ಷನು, ” ಆ ಕತ್ತಲಲ್ಲಿ ಬೆಂಕಿ ಸಿಡಿಲು ತೋರಿಸಿ ಅವರನ್ನು ಹೆದರಿಸಬೇಡ, ಅವರ ಗುಟ್ಟು ರಟ್ಟು ಮಾಡಬೇಡ, ಹೆಂಗಸರು ಸುಮ್ಮಸುಮ್ಮನೆ ಭಯಪಡುವವರು” ಎಂದು ಮೋಡಗಳಿಗೆ ತಿಳಿ ಹೇಳುತ್ತಾನೆ. ಆ ಹೆಣ್ಣುಗಳ ಮೇಲೆ ಕರುಣೆ ಕೂಡ ತೋರಿಸುತ್ತಾನೆ.

ಮುಂದೇನಾಯಿತು ಕಥೆ ಎನ್ನುವುದು ನಮ್ಮ ಕುತೂಹಲ. ಆದರೆ ಸಾಹಿತ್ಯದ ದೃಷ್ಟಿಯಲ್ಲಿ ಮುಂದಿನ ಕಥೆಗೆ ಮಹತ್ವ ಇಲ್ಲ. ಈತನ ಸಂದೇಶವನ್ನು ಮೇಘಗಳು ಆಕೆಗೆ ತಲುಪಿಸಿದವಾ, ಇಲ್ಲವಾ? ಆ ಕುತೂಹಲವು ಹಾಗೇ ಉಳಿಯಲಿ.

ಕಾಳಿದಾಸನ ಮೇಘಸಂದೇಶವನ್ನು ಈಗ ನಿಮ್ಮ ಬಳಿ ತಂದವನು ಸುದರ್ಶನ್ ಬಿ. ಪ್ರವೀಣ್, ಬೆಳಾಲು

error: Content is protected !!
Scroll to Top
%d bloggers like this: