ಧನ್ಯವಾಗಿದೆ ಪುತ್ತೂರು, ಅಂದಿನ 1934 ರ ಭೇಟಿಗೆ ಮತ್ತು ಇಂದಿನ ಗಾಂಧೀ ಸಂಸ್ಮರಣೆಗೆ !

0 15

ಪುತ್ತೂರು ಹೇಳಿ ಕೇಳಿ ದೇಶದ ರಾಜಕೀಯ ಪ್ರಯೋಗಶಾಲೆ. ಇಲ್ಲಿನ ಜನಸಾಮಾನ್ಯರಿಂದ ಹಿಡಿದು ರಾಜಕೀಯ ನಾಯಕರುಗಳವರೆಗೆ ಪ್ರತಿಯೊಬ್ಬರೂ ತೀವ್ರ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನಿಟ್ಟುಕೊಂಡು ಬದುಕುತ್ತಿರುವವರು. ಯಾವುದಾದರೊಂದು ಸಂಘ, ಸಂಸ್ಥೆ, ಪಕ್ಷ ಹೀಗೆ ತನ್ನ ತೊಡಗಿಸುಕೊಳ್ಳುವಿಕೆಯಲ್ಲಿ ಪುತ್ತೂರಿಗರಿಗೆ ಅವರೇ ಸಾಟಿ. ಯಾವ ಜಾತಿಯ, ಸಂಸ್ಥೆಯ ಜತೆಗೆ ನಿಂತರೂ, ದೇಶದ ವಿಷಯ ಬಂದಾಗ ಎಲ್ಲವನ್ನು ಮೈಕೊಡವಿಕೊಂಡು ಧಾವಿಸುವವರು ಪುತ್ತೂರಿಗರು. ಪುತ್ತೂರು ಮತ್ತೊಂದು ಸಲ, ತನ್ನ ದೇಶ ಪ್ರಜ್ಞೆಯನ್ನು ಮೆರೆದಿದೆ. ಪುತ್ತೂರಿನ ಅಸ್ಮಿತೆ ಮತ್ತೆ ಗಾಂಧೀ ಸಂಕಲ್ಪಯಾತ್ರೆಯ ಸಂದರ್ಭ ಪ್ರಜ್ವಲಿಸಿದೆ.

ದೇವರೇ ನಿಮಗೆ ಪುತ್ತೂರ ಜನತೆಯ ಪ್ರಣಾಮ. ಪಾವನವಾಗಿದೆ ಪುತ್ತೂರು ( ಪುತ್ತೂರಿಗೆ ಭೇಟಿ ನೀಡಿದ ಸಂದರ್ಭ )

ಸ್ವಚ್ಛತೆಯ ಬಗ್ಗೆ ಜನರಲ್ಲಿ ಮನವಿ, ಅಲ್ಲಲ್ಲಿ ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವುದು ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ಜನರ ವ್ಯಾಪಕ ಪ್ರಶಂಸೆಗೆ ಪಾತ್ರವಾದವು. ಗಾಂಧಿಯ ಹೆಸರನ್ನು ಹೇಳಿಕೊಂಡು ಮತ ಕೇಳುವ ಕೆಲವು ಪಕ್ಷಗಳು, ಇಂತಹಾ ಅರ್ಥಪೂರ್ಣ ಜಾಥಾವನ್ನು ನಡೆಸಲಾರದು. ಅದರ ಹೆಚ್ಚಿನ ಸಮಾರಂಭಗಳು ಲಿಕ್ಕರ್ ಶಾಪಿನಲ್ಲಿ ಶುರುವಾಗಿ, ಬೀದಿ ಜಗಳದಲ್ಲಿ ಕೊನೆಯಾಗುವಂತದ್ದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.

1921 ರಲ್ಲಿ ಮಹಾತ್ಮ ಮಂಗಳೂರಿಗೆ ಬಂದಾಗ

ಆ ದಿನ 24 ನೇ ಫೆಬ್ರವರಿ 1934 ರಂದು ಮಹಾತ್ಮಾ ದಿ ಗ್ರೇಟ್, ದಿ ಒನ್ ಅಂಡ್ ಓನ್ಲಿ ಇನ್ ಹ್ಯೂಮನ್ ಹಿಸ್ಟರಿ, ಪುತ್ತೂರಿಗೆ ಭೇಟಿ ನೀಡಿದ್ದರು. ಅವತ್ತು ಡಾ. ಸುಂದರ ರಾವ್ ಅವರ ಮನೆಯಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಮಹಾತ್ಮಾ ತೆಗೆದುಕೊಂಡಿದ್ದರು. ಅವರ ಮಗಳು ಚಿನ್ನದ ಬಳೆಗಳನ್ನು ಗಾಂಧಿಗೆ ಸಮರ್ಪಿಸಿದ್ದಳು. ಶ್ರೀಮತಿ ಲಕ್ಷ್ಮಿರೈ ಅನ್ನುವ ಮಹಾನ್ ಶೆಟ್ಟರ ಮಹಿಳೆ ಅವತ್ತು ತನ್ನ ಕೈಯ ಎರಡೂ ಬಳೆಗಳನ್ನು ಮಹಾತ್ಮನಿಗೆ ನೀಡಿದ್ದರು: ಒಂದು ಬಳೆ ಹರಿಜನ ನಿಧಿಗೂ, ಇನ್ನೊಂದು ಭೂಕಂಪ ಪರಿಹಾರ ಬಿಹಾರದ ನಿಧಿಗೂ ! ಆ ಸಮಯದಲ್ಲಿ ಭಾರತದ ದೇವರು ಬೊಟ್ಟತ್ತಾರು ಮತ್ತು ರಾಗಿಕುಮೇರುವಿನ ಹರಿಜನ ಕಾಲೋನಿ ಗೆ 1934 ನಲ್ಲಿ ಭೇಟಿ ನೀಡಿದ್ದರು. ನೆನಪಿಡಿ: 1934, ಆ ದಿನಗಳಲ್ಲೇ, ಗಾಂಧಿ ಅಸ್ಪೃಶ್ಯತೆಯ ಬಗ್ಗೆ ಹೋರಾಡಿದ್ದರು. ನಮಗೆಲ್ಲ ನಾಚಿಕೆಯಾಗುವಷ್ಟು ಹಿಂದೆಯೇ !!

ಬದಲಾಗುತ್ತಿರುವ ಸಮಾಜದಲ್ಲಿ, ಗಾಂಧೀಜಿಯ ಸ್ವರಾಜ್ಯ, ರಾಮರಾಜ್ಯ, ಸ್ವದೇಶ ಮತ್ತು ಸ್ವದೇಶಿ ಮಂತ್ರವನ್ನು ನೆನಪಿಸಿಕೊಳ್ಳಲು ಮತ್ತು ಗಾಂಧಿಯ ಹಲವು ಚಿಂತನೆಗಳನ್ನು ಮತ್ತೆ ಜನರಲ್ಲಿ ಚಿಗುರಿಸಲು ‘ ಗಾಂಧೀ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಗಾಂಧೀಜಿಯ 150 ನೇ ಜನ್ಮದಿನದ ದಿನ, ಅಕ್ಟೋಬರ್ 2 ರಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾತ್ರೆಯನ್ನು ರಾಷ್ಟ್ರವ್ಯಾಪಿಯಾಗಿ ಉದ್ಘಾಟಿಸಿದ್ದರು.

ಮೊನ್ನೆ, ಅಕ್ಟೋಬರ್ 23 ರಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಪುತ್ತೂರಿನ ಶಾಶಕರಾದ ಸಂಜೀವ ಮಠ೦ದೂರು, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲರು ಮತ್ತಿತರ ತಾಲೂಕು ಪ್ರಮುಖರಿಂದ ಪ್ರಾರಂಭವಾದ ಜಾಥಾ ಇವತ್ತಿಗೆ ಸಮಾರೋಪ ಸಮಾರಂಭ ಕಂಡು ಮುಕ್ತಾಯವಾಗಿದೆ.

ಒಟ್ಟು 150 ಕಿಲೋಮೀಟರ್ ಗಳ- ಪಾದಯಾತ್ರೆಯ ಗುರಿಯನ್ನು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ, ತಾಲೂಕು ಮಟ್ಟದಲ್ಲಿ, ಆಯಾ ಗ್ರಾಮವಾರು ಮಟ್ಟದಲ್ಲಿ ಕೈಗೊಳ್ಳ್ಳುವಂತೆ ಸೂಚಿಸಿತ್ತು. ಆದರೆ, ಪುತ್ತೂರಿನಲ್ಲಿ ಒಟ್ಟು 12 ದಿನಗಳಲ್ಲಿ 228 ಕಿಲೋಮೀಟರ್ ಗಳ ಪಾದಯಾತ್ರೆಯನ್ನು ಶಾಶಕರ ಸಮ್ಮುಖದಲ್ಲಿ, ಒಟ್ಟು 42 ಗ್ರಾಮಗಳನ್ನೂ ಒಳಗೊಳ್ಳುವಂತೆ ನಡೆಸಲಾಯಿತು.

ಇವತ್ತು ಸಮಾರೋಪ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮರೀಲು ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಬಳಿಯಿಂದ ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಗಿಡ ನೆಡುವ ಮೂಲಕ ಪ್ರಾರಂಭಗೊಂಡು ನಂತರ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವಠಾರದಲ್ಲಿರುವ ಭಾರತ್ ಮಾತಾ ಸಮುದಾಯ ಭವನದಲ್ಲಿ ಸಮಾರಂಭ ಕಾರ್ಯಕ್ರಮ ನಡೆಯಿತು.

”ಅಹಿಂಸೆಯಿಂದ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹದಿಂದ ಸಮಾಜದ ಜಾಗೃತಿ ಮಾಡಿದ್ದ ಗಾಂಧೀಜಿಯ ಕನಸನ್ನು ಸಾಮಾನ್ಯ ಜನರಿಗೆ ತಾಳುವಿಸುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ವರ್ಷಕ್ಕೊಂದು ಕಿಲೋಮೀಟರುಗಳಂತೆ, ಮಹಾತ್ಮಾ ಹುಟ್ಟಿದಲಿನಿಂದ ಇಂದಿನವರೆಗಿನ 150 ವರ್ಷಗಳಿಗೆ ಸಾಂಕೇತಿಕವಾಗಿ 150 ಕಿಲೋಮೀಟರುಗಳ ಪಾದಯಾತ್ರೆಯ ಗುರಿ ಹಾಕಲಾಗಿತ್ತು. ಆದರೆ ಪುತ್ತೂರು ತಾಲೂಕು 228 ಕಿಲೋಮೀಟರು ನಡೆದು ತೋರಿಸಿದೆ. ಅದರ ಕ್ರೆಡಿಟ್ ಪುತ್ತೂರು ಬಿಜೆಪಿ ಮಂಡಲದ್ದು ಮತ್ತು ಶಾಶಕರದ್ದು” ಎಂದು ನಳೀನ್ ಕಟೀಲ್ ಈ ಸಂದರ್ಭದಲ್ಲಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಭಾಗವಹಿಸಿದರು. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್.ಆರ್.ಸತೀಶ್ಚಂದ್ರ, ಮಾಜಿ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ಪುತ್ತೂರು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಮಂಜುನಾಥ, ಹರೀಶ್ ಬಿಜಾತ್ರೆ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ನಗರಮಂಡಲ ಅಧ್ಯಕ್ಷರಾದ ಶ್ರೀ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ಶ್ರೀ ಶಂಭು ಭಟ್, ಶ್ರೀ ರಾಮದಾಸ್ ಹಾರಾಡಿ,ಶ್ರೀಮತಿ ಗೌರಿ ಬನ್ನೂರು, ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸುನಿಲ್ ದಡ್ಡು, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಶ್ರೀ ಅಬ್ದುಲ್ ಕುಂಞಿ, ನಗರಸಭಾ ಸದಸ್ಯರುಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಧನ್ಯೋಸ್ಮಿ ಪುತ್ತೂರು !!!!

Leave A Reply