ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್
ಆ ದಿನ ಚಳಿಗಾಲದ ಮುಂಜಾನೆಯಲ್ಲೂ ಸಣ್ಣಗೆ ಬಿಸಿಲು ಬಿಚ್ಚಿಕೊಂಡಿತ್ತು. ಅದು 1983 ರ ಸಮಯ. ಆ ದಿನ 875 ಕಿಲೋ ಮೀಟರುಗಳ ದೂರದ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ವರೆಗಿನ ಮಹಾನ್ ಮ್ಯಾರಥಾನ್ ಪಂದ್ಯಾಟ ನಡೆಯಲಿತ್ತು. ಓಟ ಇನ್ನೇನು ಶುರುವಾಗಲಿತ್ತು. ಓಟಗಾರರು ಒಬ್ಬೊಬ್ಬರಾಗಿ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಷ್ಟರಲ್ಲಿ ಓವ್ರ ವೃದ್ಧ, ಮಳೆಗಾಲದಲ್ಲಿ ಧರಿಸುವಂತಹಾ ರಬ್ಬರ್ ಶೂ (ಗಮ್ ಬೂಟ್) ಧರಿಸಿಕೊಂಡು, ಮೈಮೇಲೊಂದು ದೊಗಳೆ ಜೆರ್ಕಿನ್ ಹಾಕಿಕೊಂಡು ಬಂದು ನಿಂತ. ಸುತ್ತಮುತ್ತ ಮ್ಯಾರಥಾನ್ ನ ಪ್ರಾರಂಭವನ್ನು ವೀಕ್ಷಿಸಲು ಬಂದಿದ್ದ …