ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled.

ನಟಿ ಯಾಮಿ ಗೌತಮ್, ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪೇಡ್ನೆಕರ್ ಜತೆಯಾಗಿ ನಟಿಸಿದ ಚಿತ್ರ ‘ಬಾಲ’. ಹಿಂದಿಯಲ್ಲಿ ಬಾಲ್ ಅಂದರೆ ತಲೆಕೂದಲು ಎಂದರ್ಥ. ಯಾಮಿ ಗೌತಮಿ, ಈ ಚಿತ್ರದಲ್ಲಿ ತನ್ನ ಕೂದಲು ಇಲ್ಲದ (ಬಾಲ್ಡ್) ಕಾರಣದಿಂದ ಕೀಳರಿಮೆ ಬೆಳೆಸಿಕೊಂಡಿರುವ ಹುಡುಗನ ಪತ್ನಿಯಾಗಿ ಅಭಿನಯಿಸಿದ್ದಾರೆ. ನಮ್ಮ ಕನ್ನಡದಲ್ಲಿ ‘ ಒಂದು ಮೊಟ್ಟೆಯ ಕಥೆಯಲ್ಲಿ ‘ ರಾಜ್ ಶೆಟ್ಟಿ ಮಾಡಿದ್ದರಲ್ಲ, ಹಾಗೆ. ಚಿತ್ರದ ಬಗ್ಗೆ ಮಾತಾಡುತ್ತಿರುವಾಗ, ಯಾಮಿ ಗೌತಮಿ, ತಮಗೆ ನಿಜ ಜೀವನದಲ್ಲಿ ಬಾಲ್ಡ್ ಗಂಡ ಸಿಕ್ಕಿದರೂ ಚಿಂತೆ ಇಲ್ಲ ಎಂದು ಯಾಮಿ ಹೇಳಿಕೊಂಡಿದ್ದಾರೆ.
ನಿಜ ಹೇಳಬೇಕೆಂದರೆ, ಅಟ್ರಾಕ್ಷನ್ ಸೈನ್ಸ್ ನ ಪ್ರಕಾರ, ಹುಡುಗಿಯರಿಗೆ ಬಾಲ್ಡ್ ಇರುವ ಹುಡುಗರು ಮತ್ತು ಗಂಡಸರ ಮೇಲೆ ತೀವ್ರ ಆಕರ್ಷಣೆ ಇರುತ್ತದಂತೆ. ಬಾಲ್ಡ್ ರು ಹಿರಿಯರಾಗಿ ಕಾಣುತ್ತಾರೆ ಮತ್ತು ಕೂದಲು ಇರುವ ಗಂಡಸರಿಗಿಂತ ಹೆಚ್ಚು ಬುದ್ದಿವಂತಿಕೆಯನ್ನು ಹೊಂದಿರುತ್ತಾರೆ. ಬುದ್ದಿಮತ್ತೆ ಮಾತ್ರವಲ್ಲ, ಬಾಲ್ಡಿಗಳು ಯಾವುದೇ ಸನ್ನಿವೇಶಗಳನ್ನು ಇತರರಿಗಿಂತ ಸಲೀಸಾಗಿ ನಿರ್ವಹಿಸುವ ಜಾಣ್ಮೆಯನ್ನು ಹೊಂದಿರುತ್ತಾರೆ. ಅಲ್ಲದೆ, ಬಾಲ್ಡ್ ಗಂಡಸರು, ಮಾನಸಿಕವಾಗಿ ಕೂದಲಿರುವ ಗಂಡಸರಿಗಿಂತ ಬಲಿಷ್ಠರಾಗಿರುತ್ತಾರೆ.
ತೀರಾ ಇತ್ತೀಚಿನವರೆಗೂ, ಬಾಲ್ಡ್ ಗಂಡಸರು ಹೆಚ್ಚು ಕೂದಲು ಹೊಂದಿರುವ ಗಂಡಸರಿಗಿಂತ ಸೆಕ್ಷುವಲೀ ಹೆಚ್ಚು ಆಕ್ಟಿವ್ ಆಗಿರುತ್ತಾರೆಂದು ನಂಬಿದ್ದರು. ಬಾಲ್ಡಿಯಾಗುವುದಕ್ಕೂ ಪುರುಷ ಹಾರ್ಮೋನಾದ ಟೆಸ್ಟೋಸ್ಟೆರೋನ್ ಗೂ ನೇರ ಸಂಬಂಧವಿದ್ದರೂ, ಇತ್ತೀಚಿಗಿನ ಸಂಶೋಧನೆ ‘ಆ ವಿಶ್ಯದಲ್ಲಿ’ ಇಬ್ಬರೂ ಸಮಾನ ಬಲಿಷ್ಠರು ಎಂದು ಇಬ್ಬರಿಗೂ ಸಮಾನ ಅಂಕಗಳನ್ನು ನೀಡಿದೆ. ಉಳಿದೆಲ್ಲಂತೆ, ಬಾಲ್ದಿಗಳು ಕೂದಲಿರುವ ಗಂಡಸರನ್ನು ಮೀರಿಸುತ್ತಾರೆ.
ಕೂದಲು ಇರಲಿ, ಇಲ್ಲಾ Bald ನೇ ಆಗಿರಲಿ, ಆದ್ರೆ ಹುಡುಗನಲ್ಲಿ ಸಾಕಷ್ಟು Gold ಇರಲೇ ಬೇಕು. ಬಾಲಿವುಡ್ ಮತ್ತಿತರ ಸಿನಿಮಾ ಹುಡುಗಿಯರು ಬಡವರನ್ನಂತೂ ಮದುವೆ ಆಗಲ್ಲ.
ನಮ್ಮ ಪಡ್ಡೆಗಳ ಲೇಟೆಸ್ಟ್ ಡಯಲಾಗ್ : Bald ಇಲ್ಲದಿದ್ದರೂ ಓಕೆ, Gold ಇರದಿದ್ದರೂ, ಇಟ್ಸ್ ಓಕೆ ; But he should be ‘Balled’.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave a Reply

error: Content is protected !!
Scroll to Top
%d bloggers like this: