ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಗುದ್ದಿದೆ ಗೂಳಿ

0 118

ಹೋರಿಯೊಂದು ಶಾಶಕ ರೇಣುಕಾಚಾರ್ಯಗೆ ಗುದ್ದಿದೆ.
ತಮ್ಮ ಸ್ವಕ್ಷೇತ್ರ ಹೊನ್ನಾಳಿಯಲ್ಲಿನ ದೊಡ್ಡೇರಿಯಲ್ಲಿ ನಿನ್ನೆ ಶುಕ್ರವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ನಿಜವಾದ ‘ ಹೋರಿ ‘ ರೇಣು ವನ್ನು ಹೊತ್ತುಕೊಂಡು ಮೆರವಣಿಗೆ ತಿರುಗುತ್ತಿದ್ದರು. ಆ ಸಮಯದಲ್ಲಿ ಹೋರಿ ಸ್ಪರ್ಧೆ ಪ್ರಾರಂಭವಾಗಿತ್ತು. ಎದುರುಗಡೆಯಿಂದ ಬಂದ ಹೋರಿ ಏಕಾಏಕಿ ಶಾಶಕ ರೇಣುಕಾಚಾರ್ಯನತ್ತ ನುಗ್ಗಿದೆ. ಅವರ ಎದೆ ಮತ್ತು ಮಂಡಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಆದರೆ ನಮ್ಮ ಸ್ಟ್ರಾಂಗ್ ಹೋರಿ ರೇಣುರವರಿಗೆ ಇದೇನು ಲೆಕ್ಕ?
ರೇಣುಕಾಚಾರ್ಯ ಗುಮ್ಮಲು ಹೊರಟರೆ, ಅವರಿಗೆ ಯಾವ ಗೂಳಿ ಕೂಡಾ ಲೆಕ್ಕ ಇಲ್ಲ. ಮೊನ್ನೆ ಮೊನ್ನೆ ಸರ್ಕಾರ ಬೀಳುತ್ತಿರುವಾಗ ನಮ್ಮ ಯು ಟಿ ಖಾದರ್ ಗೆ ವಿಧಾನಸೌಧದ ಮೆಟ್ಟಿಲ ಮೇಲೆಯೇ ಗುಮ್ಮಿದ್ದರು ನೋಡಿ, ಖಾದರ್ ಅವತ್ತು ಕಳೆದುಹೋದವರು ಇವತ್ತಿನವರೆಗೂ ಮಾಯ !
ಯಾರನ್ನೂ ಗುಮ್ಮಲು ಬಿಡದೆ ಓಡಾಡುತ್ತಿದ್ದ ರೇಣುವಿಗೆ ಗುದ್ದಿದ ಹೋರಿಗೆ ಸಕತ್ ತಲೆನೋವಂತೆ. ಪಾಪ, ಅದಕ್ಕೇನು ಗೊತ್ತಿತ್ತು, ಬಂಡೆಗೆ ಹೋಗಿ ಗುದ್ದಿ ತಲೆನೋವು ಬರಿಸ್ಕೊತಿದ್ದೇನೆ ಅಂತ.
ಇನ್ನು ಮುಂದೆ ರೇಣುಕಾಚಾರ್ಯ ಹೇಳಿಕೊಂಡು ಬರುತ್ತಾರೆ. ” ಗೂಳಿಗೇ ನಾನು ಬಿಟ್ಟಿಲ್ಲ, ನೀವೆಲ್ಲ ನನಗೆ ಯಾವ ಲೆಕ್ಕ?”
ಅದೃಷ್ಟವಶಾತ್ ‘ಆಯಕಟ್ಟಿನ ಜಾಗ’ ಕ್ಕೆ ಪೆಟ್ಟಾಗಿಲ್ಲವಂತೆ- ರೇಣು ಗೂಳಿ ಇಬ್ಬರಿಗೂ !

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply