ಸೋಲಲು ಹೊರಟ ಕಾಂಗ್ರೆಸ್ ನ ಮುಂದುವರಿದ ಹಳೇ ಚಾಳಿ
ಕಾಂಗ್ರೆಸ್ ಮತ್ತೆ ಚಾಳಿಯನ್ನು ಮುಂದುವರೆಸಿದೆ.
ಕಾಂಗ್ರೆಸ್ಸಿನ ಈ ದಿನದ ಸುಯಿಸೈಡಲ್ ನಡೆಯನ್ನೇ ಗಮನಿಸಿ.
ಅತ್ತ, ವೀರ ಸಾವರ್ಕರ್ ಅವರನ್ನೇ ‘ದೇಶದ್ರೋಹಿ, ಭಾರತ ರತ್ನಕ್ಕೆ ಅನರ್ಹ’ ಅಂತ ಸಿದ್ದರಾಮಯ್ಯ ಮಾತಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜನರಲ್ಲಿ ಆದಮ್ಯ ಕಿಡಿಯನ್ನು ಪ್ರಜ್ವಲಿಸಿದ್ದ, ಅದಕ್ಕಾಗಿ ಅಂಡಮಾನ್ ನ ಕಾಲಾಪಾನಿ ಜೈಲಿನಲ್ಲಿ ವಿಪರೀತ ಹಿಂಸೆಯನ್ನು ಅನುಭವಿದ್ದ ಅಸ್ಖಲಿತ ದೇಶ ಭಕ್ತ ಇವರ ಕೈಯಲ್ಲಿ, ದೇಶದ್ರೋಹಿಯೇನೆಂಬ ಪಟ್ಟ ಕಟ್ಟಿಕೊಳ್ಳುತ್ತಾನೆ!
ಶಹಬ್ಬಾಶ್ ಕಾಂಗ್ರೆಸ್! ಸಿದ್ದರಾಮಯ್ಯ ಯು ಆರ್ ಗ್ರೇಟ್ ! ನಿಮ್ಮನ್ನು ಇತಿಹಾಸ ಇದೇ ಕಾರಣಕ್ಕೆ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ !
ಇತ್ತ, ಮಹಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಿಜಯಿಯಾಗಿ ಬಂದ ಮಹಾತ್ಮನಂತೆ, ಡಿಕೆ ಶಿವಕುಮಾರರನ್ನ, ವಿಮಾನ ನಿಲ್ದಾಣಕ್ಕೆ ಕೃಷ್ಣ ಭೈರೇಗೌಡ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮುಂತಾದವರು ಬಂದು ಸ್ವಾಗತಿಸುತ್ತಾರೆ. ಸೇಬಿನಿಂದಾಲಕೃತವಾದ ಕಾರು ವಿಮಾನ ನಿಲ್ದಾಣಕ್ಕೆ ಬರುತ್ತದೆ. ಲಕ್ಷಾಂತರ ಜನ ಅಭಿಮಾನಿಗಳು (?) ಬರುತ್ತಾರೆ. ಅವರಾಗಿ ಬಂದರೋ, ಅಥವಾ ಅವರನ್ನು ಕರೆದುಕೊಂಡು ಬಂದರೋ,ಆದರೆ ಈ ಮಟ್ಟಿಗಿನ ಅದ್ದೂರಿ ಸ್ವಾಗತ ಮಾಡಲು ಡಿಕೆ ಶಿವಕುಮಾರ ಏನೋ ಘನಂದಾರಿ ಸಾಧನೆ ಮಾಡಿ ಬಂದಿಲ್ಲ. ವಿಶ್ವಕಪ್ಪ್ ಗೆದ್ದು ತಂದಿಲ್ಲ. ಒಲಿಂಪಿಕ್ ನಲ್ಲಿ ಪದಕ-ಚಿನ್ನ ಎತ್ತಿಲ್ಲ. ಡಿಕೆಶಿಯನ್ನು ED ವಿಚಾರಾಧೀನ ಖೈದಿಯನ್ನಾಗಿ ಬಂಧಿಸಿತ್ತು. ಅದನ್ನು ನಮ್ಮ ಕೋರ್ಟು ಕೂಡ ಸಮ್ಮತಿಸಿ 51 ದಿನ ಅವರಿಗೆ ಜಾಮೀನು ನೀಡಿರಲಿಲ್ಲ. ಒಂದು ವೇಳೆ ಕೇಸು ವಜಾ ಆಗಿ, ಇಂತಹ ಅಬ್ಬರದ ವೆಲ್ಕಮ್ ಮಾಡಿದ್ರೆ ಅದರಲ್ಲಿ ಒಂದು ಅರ್ಥ ಇತ್ತು.
ಭ್ರಷ್ಟರ ಮೇಲೆ ED ಅಥವಾ ಸಿಬಿಐ ಕ್ರಮ ತೆಗೆದುಕೊಂಡರೆ ಅದು ಆಡಳಿತ ದುರುಪಯೋಗ!
ಇದೊಳ್ಳೆ ಕತೆ ಆಯ್ತಲ್ಲ. ನಿಮ್ಮ ಹತ್ತಿರ ಕೋಟ್ಯಂತರ ಅಕ್ರಮ ಹಣ ಸಿಗುತ್ತದೆ, ಹವಾಲದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುತ್ತದೆ. ನಿಮ್ಮ ಹತ್ತಿರ ಅಕ್ರಮ ಖಾತೆಗಳು, ಸಿಕ್ಕಿಬೀಳುತ್ತವೆ, ಆದರೂ ನಿಮ್ಮನ್ನು ಯಾರು ಕೂಡ ಏನೂ ಮಾಡಬಾರದು ! ಒಳ್ಳೆ ಕತೆ ಆಯ್ತಲ್ವ ನಿಮ್ದು ?! ನಿಮಗೆ 130 ವರ್ಷದ ಇತಿಹಾಸವಿರುವ ಕಾಂಗ್ರೆಸ್ ನ ಬೆಂಬಲ ಬೇರೆ. ನಮ್ಮಮೂಢ ಭಕ್ತಿಯ ಜನರ ಸಪೋರ್ಟ್ ನಿಮಗೆ ! ನಿಮಗೆ ನಿಮ್ಮ ಜಾತಿಯ ಜನರ (ಕೆಲವರ) ಬೆಂಬಲ!
ನೀವೆಲ್ಲ ED/ಸಿಬಿಐ ಮಾತ್ರವಲ್ಲ, ನಮ್ಮ ಕೋರ್ಟನ್ನು ಕೂಡ ಅನುಮಾನಿಸುವ ಜನ. ಸಿದ್ದರಾಮಯ್ಯನವರೇ, ಇದೇ ಸಿಬಿಐ ಜನಾರ್ಧನ ರೆಡ್ಡಿಯವರನ್ನು ಆ ದಿನ ಕೆಡವಿಕೊಂಡು 3.5 ವರ್ಷ ಬಂಧಿಸಿಟ್ಟಾಗ, ಅದು ಅಧಿಕಾರ ದುರುಪಯೋಗ ಆಗಿರಲಿಲ್ವಾ? ಆಗ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತಲ್ಲ, ಮರೆತು ಹೋಯ್ತಾ?
ಆಗ ಬಿಜೆಪಿಯವರು ಮುತ್ಸದ್ಧಿತನ ತೋರಿರಲಿಲ್ವಾ? ನಿಮ್ಮ ತರಹ, ಭ್ರಷ್ಟರನ್ನು ಅವರು ಬೆಂಬಲಿಸಿರಲಿಲ್ಲ ಅಲ್ಲವೆ ? ಸ್ವಲ್ಪ ಆತ್ಮಾವಲೋಕನ ಮಾಡ್ಕೊಳ್ಳಿ.
ಕಾನೂನಿಗೆ, ಜಾತಿ,ಧರ್ಮ, ಪಕ್ಷ ಭೇದವಿಲ್ಲ. ಎಲ್ರಿಗೂ ಕಾನೂನು ಕಾಯ್ತಾನೆ ಇರುತ್ತೆ. ಕುಣಿಕೆಗೆ ಬೀಳದೆ ಇರಬೇಕೆಂದರೆ ಕ್ಲೀನಾಗಿರಬೇಕಷ್ಟೆ!
ಭ್ರಷ್ಟರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಮತ್ತಷ್ಟು ಜನರಿಂದ ದೂರ ಹೋಗ್ತಿದೆ. ಸಮಾವೇಶಗಳಲ್ಲಿ ಮತ್ತು ನಿಮ್ಮ ಪ್ರಾಯೋಜಿತ ಸಭೆಗಳಲ್ಲಿ ಒಂದಿಷ್ಟು ಲಕ್ಷ ಜನ ಸೇರಬಹುದು. ನೆನಪಿಡಿ: ಆದರೆ ಕರ್ನಾಟಕದ ಜನಸಂಖ್ಯೆ 650 ಲಕ್ಷಗಳು ! ನಿಮ್ಮಒಂದೆರಡು ಲಕ್ಷಗಳು ಜನಮಾನಸದ ಅಭಿಪ್ರಾಯಗಳಲ್ಲ.
ಸರಿಪಡಿಸಲಾಗದ ಡ್ಯಾಮೇಜ್ ಆಗ್ತಿದೆ ಎಚ್ಚರ !
ಸುದರ್ಶನ್ ಬಿ. ಪ್ರವೀಣ್, ಬೆಳಾಲು