ಪಿ ಯು ಲೆಕ್ಚರರ್ ನೇಮಕಾತಿ:ಕೀ ಆನ್ಸರ್ ತಪ್ಪಾಗಿದೆ ಸತತ ಮೂರನೇ ಬಾರಿ

0 12

ಪಿಯುಸಿ ಅದ್ಯಾಪಕರ ನೇಮಕಾತಿಗೆ ನಡೆದ ನಡೆದ ಪರೀಕ್ಷೆಯಲ್ಲಿ ಸರ್ಕಾರ ಕೀ ಆನ್ಸರ್ ರಿಲೀಸ್ ಮಾಡಿತು. ಒಂದಲ್ಲ, ಎರಡಲ್ಲ, ಮೂರು ಸಲ ಕೊಟ್ಟ ಕೀ ಆನ್ಸರ್ ಕೂಡ ತಪ್ಪಾಗಿದೆಯಂತೆ. ರಸಾಯನ ಶಸ್ತ್ರ, ಹಿಸ್ಟರಿ ಮತ್ತು ಕನ್ನಡಲ್ಲಿ ತಪ್ಪು ಉತ್ತರ ವೆಬ್ಸೈಟ್ ನಲ್ಲಿ ಪ್ರಕಟವಾಗಿದೆ. ಇದರ ಬಗ್ಗೆ ಬಿಜೆಪಿ ಸರ್ಕಾರವನ್ನು ಕೇಳಿನೋಡಿ. ಅವರು ತಮ್ಮ ಹಿಂದಿನ ಸರ್ಕಾರವನ್ನು ದೂರುತ್ತಾರೆ. ಅವರನ್ನು ಕೇಳಿದರೆ, ಯಥಾಪ್ರಕಾರ, ತಪ್ಪು ನಮ್ಮದಲ್ಲ, ಈಗಿನ ಬಿಜೆಪಿ ಏನೆಲ್ಲಾ ಯಡವಟ್ಟು ಆಗ್ತಿದೆ ನೋಡಿ ಎಂದು ಪ್ರಸ್ತುತವಿರುವ ಸರ್ಕಾರದ ಕಡೆ ಕೈ ತೋರಿಸುತ್ತಾರೆ.
ಶೇಮ್ ಆನ್ ಅವರ್ ಸಿಸ್ಟಮ್!
ಒಂದು ಸರಿಯಾಗಿ ಪ್ರಶ್ನೆ ಕೊಡುವ ಯೋಗ್ಯತೆ ಇಲ್ಲ ನಮ್ಮ ಶಿಕ್ಷಣ ವ್ಯವಸ್ಥೆಗೆ,ಯಾವ ರೀತಿ ನೀವು ನಿಮ್ಮ ವಿದ್ಯಾರ್ಥಿಗಳ ಹತ್ತಿರ, ಪರೀಕ್ಷೆ ಬರೆದ ಅಧ್ಯಾಪಕರ ಹತ್ತಿರ ಸರಿಯಾದ ಉತ್ತರವನ್ನು ನಿರೀಕ್ಷಿಸುತ್ತೀರಾ?
ಏನೋ ಒಂದು ಸಲ ಕೀ ಆನ್ಸರ್ ಮಿಸ್ ಅಗ್ಬೋದು. ಹೋಗ್ಲಿ, ಎರಡನೇ ಸಲ ಮಿಸ್ಟೇಕ್ ಆಯಿತು ಆಂದುಕೊಳ್ಳೋಣ, ಮೂರನೆಯ ಬಾರಿ ತಪ್ಪಾಗಿದೆ ಕೀ ಅನ್ಸರ್ಸ್! ಇದಕ್ಕಿಂತ ಜಾಸ್ತಿ ನಾಚಿಕೆ ಗೇಡಿನ ಸುದ್ದಿ ಏನಿದೆ ಬೇರೆ.ಉತ್ತರವಿಲ್ಲದ,ಡಬಲ್ ಉತ್ತರವಿರುವ ಪ್ರಶ್ನೆಗಳ್ಳನ್ನು ಆಯ್ದು ಪರೀಕ್ಷೆ ಬರೆಸಿದ ಸಂಭಂದಪಟ್ಟ ಎಲ್ಲ ಅಧಿಕಾರಿಗಳನ್ನು,ನೆರೆಬಂದು ಮಸಣವಾದ ಊರಿಗೆ ಜೊತೆಯಾಗಿ ಟ್ರಾನ್ಸ್ ಫರ್ ಮಾಡಬೇಕು. ಹೆಜ್ಜೆಗೊಬ್ಬ ಆಫೀಸರು,ಡೈರೆಕ್ಟರ್ ಇದ್ದಾರೆ ಈ ವೇಸ್ಟ್ ಡಿಪಾರ್ಟ್ ಮೆಂಟಿನಲ್ಲಿ. ಒಂದು ಪ್ರಶ್ನೆ ಸರಿಯಾಗಿ ಪಿಕ್ ಮಾಡಲಾಗದವರು ಯಾವ ಪುರುಷಾರ್ಥಕ್ಕೆ ಬೇಕು ನಮಗೆ? ಪಾಪ, ನಿಸ್ಸಹಾಯಕ ಶಿಕ್ಷಕರಿಗೆ ಭಾರ ಹೊರಿಸುತ್ತಾರೆ. ಇವರನ್ನು ಮಾತ್ರ ಕೇಳುವವರೇ ಇಲ್ಲ.
ಪಾಪ, ಏನೋ ಅಲ್ಲಿ-ಇಲ್ಲಿ ಪ್ರೈವೇಟ್ ಸ್ಕೂಲು ಕಾಲೇಜುಗಳಲ್ಲಿ ಟೆಂಪರರಿ ಕೆಲಸಮಾಡುತ್ತ, ನಿಮ್ಮ ತಪ್ಪು ಪ್ರಶ್ನೆಗಳಿಗೆ ಸರಿ ಉತ್ತರ ಬರೆದು, ಫೈನಲ್ ರಿಸಲ್ಟ್ ಪಡೆಯಲು ಹೆಣಗಾಡುತ್ತಾರಲ್ಲ,ಇಂತ ಪರೀಕ್ಷೆ ಬರೆಡು ಭವಿಷ್ಯ ಕಟ್ಟಿಕೊಳ್ಳುವ ಹಂಬಲದಲ್ಲಿರುವ ಕಣ್ಣೀರು ನಿಮಗೆ ಕಾಣಿಸುವುದಿಲ್ಲವೆ ಅಧಿಕಾರಿಗಳೇ?
ಶಿಕ್ಷಣ ಮಂತ್ರಿ ಸುರೇಶ ಕುಮಾರ್ ರವರೆ, ನಿಮ್ಮ ಒಳ್ಳೆಯತನ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಎತ್ತಿಕೋ ದಂಡಾಸ್ತ್ರ. ಪಕ್ಕೆಗೆ ವದೆ ಬೀಳದೆ ಹೋದರೆ ಬದಲಾವಣೆ ಅಸಾಧ್ಯ!

ಸುದರ್ಶನ್ ಬಿ. ಪ್ರವೀಣ್

 

Leave A Reply