World Boxing Record: ವಿಶ್ವ ಬಾಕ್ಸಿಂಗ್ ದಾಖಲೆ ಮೇಲೆ ಮೇರಿಕೋಮ್ ಪಂಚ್

ಎತ್ತರ ಐದು ಫೀಟು ಎರಡು ಇಂಚು. ತೂಕ ಮಾಡಿದರೆ 50 ಕೆಜಿ ಕಷ್ಟದಲ್ಲಿ ತೂಗುತ್ತಾಳೆ. ಪ್ರಾಯ ಏನಾದ್ರೂ ಕಡಿಮೆ ಇದೆಯಾ? ಅದೂ ಇಲ್ಲ. ವಯಸ್ಸು 36 ದಾಟಿದೆ. ಇದು ಆಟದ ಕಣದಲ್ಲಿ ಬಹುತೇಕ ನಿವೃತ್ತಿ ಹೊಂದಿ ಹಳೆಯ ಗಾಯಗಳನ್ನು ವಾಸಿಮಾಡುತ್ತ, ಸವರುತ್ತ ಕೂರುವ ವಯಸ್ಸು!
ಆದರೆ ಬಡತನದಲ್ಲೇ ಬೆಳೆದು, ಏಟಿನ ಮೇಲೆ ಏಟು ಕೊಟ್ಟು ಇಲ್ಲಿಯತನಕ 6 ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತಳಾಗಿದ್ದಾಳೆ, ಇವತ್ತು ವಿಶ್ವದಾಖಲೆಗೆ ಫೈನಲ್ ಪಂಚ್ ನೀಡಿ ಒಟ್ಟು 8 ವಿಶ್ವ ಚಾಂಪಿಯನ್ ಶಿಪ್ ಪದಕ ಬೀಗುತ್ತಿದ್ದಾಳೆ ಮೇರಿ ಕೋಮ್! ಈ ಮೂಲಕ 7 ಚಾಂಪಿಯನ್ ಶಿಪ್ ಪದಕ ಪಡೆದಿದ್ದ ಕ್ಯೂಬಾದ ಫೆಲಿಕ್ಸ್ ಸಾವೊನ ಸಾಧನೆಯನ್ನು ಬದಿಗೆ ಸರಿಸಿ ಮುಂದೆ ಹೋದಳು ಮೇರಿ.

Thirthahalli ಡಿಗ್ರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣ ನಿಗೂಢ


ಮೊದಲೆಲ್ಲ ಆಕೆ 46 ಕೆಜಿ ದೇಹ ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಳು. ಆಮೇಲೆ 48 ಕೆಜಿ ಯಲ್ಲಿ ಸ್ಪರ್ಧಿಸಿದಳು.ಈ ಸಾಲದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಆಗ ಸ್ಪರ್ಧಿಸಿದ್ದು 51 ಕೆಜಿ ವಿಭಾಗದಲ್ಲಿ. ಮಣಿಪುರಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಈಕೆ ಮೂರು ಮಕ್ಕಳ ತಾಯಿ. ಪುಟ್ಟಮಕ್ಕಳನ್ನು ಬಗಲಿಗೆ ಕಟ್ಟಿಕೊಂಡ ಈ ಪುಟಾಣಿ ದೇಹದ ಹೆಣ್ಣುಮಗಳು ತನ್ನ ಸ್ಪರ್ಧಾ ಜೀವನದುದ್ದಕ್ಕೂ ತನಗಿಂತ ಎತ್ತರದ ಸ್ಪರ್ಧಿಗಳ ಜತೆ ಸ್ಪರ್ಧಿಸಬೇಕಾಗಿ ಬಂದದ್ದು ಆಕೆಯ ದುರದೃಷ್ಟ. ಮಣಿಪುರಿಯವರು ಸಾಮಾನ್ಯವಾಗಿ ಕಡಿಮೆ ಎತ್ತರದ ದೇಹ ಪ್ರಕೃತಿಯವರಾಗಿರುತ್ತಾರಾದ್ದರಿಂದ, ಅವಳ ಹತ್ತಿರ ಬೇರೆ ಆಯ್ಕೆಗಳಿರಲಿಲ್ಲ.

Polutry Farm Building: ವಿಟ್ಲ ಸಮೀಪದ ಕೊಳ್ನಾಡಿಯಲ್ಲಿ ಕೋಳಿ ಫಾರಂ ಕಟ್ಟಡ ಕುಸಿತ: 5, 000ಕ್ಕೂ ಅಧಿಕ ಕೋಳಿಗಳು…

ಎಷ್ಟೇ ಎತ್ತರದ ಪ್ರತಿಸ್ಪರ್ಧಿಯೇ ಇರಲಿ, ಎಗರಿ ನಿಗುರಿ ಹೊಡೆಯುವುದೊಂದೇ ಅವಳಿಗೆ ಆಯ್ಕೆಯಾಗಿತ್ತು.ಆಕೆಯಲ್ಲಿ ಅದೆಲ್ಲಿತ್ತೋ ಅಂತಹ ದೈತ್ಯಶಕ್ತಿ? ಹಲ್ಲು ಕಚ್ಚಿ ಹಿಡಿದು,ಬಲಿಷ್ಠವಾಗಿ ಹೊಡೆದು 8 ವಿಶ್ವ ಚಾಂಪಿಯನ್ ಶಿಪ್ ಪದಕ ಪಡೆದಿದ್ದಾಳೆ. ಮೊನ್ನೆ ನಡೆದ ಸೆಮಿ ಫೈನಲ್ ನಲ್ಲಿ ಟರ್ಕಿಯ ಬುಸೇನಾಜ್ ಕ್ಯಾಕಿರೊಗ್ಲ್ ನ ಎದುರು ೧-೪ ರರಲ್ಲಿ ಸೋಲುಂಡರೂ, ಆ ಸೋಲು ಆಕೆಯಲ್ಲಿ ಆತ್ಮ ವಿಶ್ವಾಸವನ್ನು ಕುಸಿದಿಲ್ಲ.ಕೆಟ್ಟ ಅಂಪೈರಿಂಗ್ ಕೂಡ ಆಕೆ ಸೋಲಲು ಒಂದು ಕಾರಣ ವಾಗಿತ್ತು.
ಮತ್ತೊಂದು ಪದಕ ಬೇಟೆಗೆ ಆಕೆ ಸದ್ದಿಲ್ಲದೇ ಕೆಲಸ ಶುರುವಿಟ್ಟಿದ್ದಾಳೆ!

 

 

Leave A Reply

Your email address will not be published.