Darshan: ಅಂತರ ಕಾಯ್ದುಕೊಂಡ ದರ್ಶನ್ – ‘ಡಿ ಬಾಸ್’ಗೆ ತಿರುಗೇಟು ನೀಡಿದ ಸುಮಲತಾ?

 

Darshan: ದರ್ಶನ್, ಅಂಬರೀಶ್ ಅವರ ಪತ್ನಿ ಹಾಗೂ ಕನ್ನಡದ ಹೆಸರಾಂತ ನಟಿಯಾದ ಸುಮಲತಾ ಅಂಬರೀಶ್ ಅವರನ್ನು ತನ್ನ ಎರಡನೇ ತಾಯಿ ಎಂದೇ ಬಿಂಬಿಸುತ್ತಿದ್ದರು. ಸುಮಲತಾ ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋಗಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ ಅಲ್ಲಿ ದರ್ಶನ್ ಇರುತ್ತಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಂತು ಸುಮಲತಾ ಗೆಲುವಲ್ಲಿ ದರ್ಶನ್ ಪ್ರಮುಖ ಪಾತ್ರ ವಹಿಸಿದ್ದರು. ಸುಮಲತಾ ಕೂಡ ದರ್ಶನ್ ನನ್ನ ಹಿರಿಯ ಮಗ ಎಂದೇ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದರು. ಈ ತಾಯಿ ಮಗನ ಸಂಬಂಧವನ್ನು ಕಂಡು ನಾಡಿನ ಜನ ಮೆಚ್ಚಿಗೆ ವ್ಯಕ್ತಪಡಿಸಿತ್ತು.

 

ಆದರೆ ಇದೀಗ ಅಚ್ಚರಿ ಎಂಬಂತೆ ದರ್ಶನ್(Darshan) ಮತ್ತು ಸುಮಲತಾ ಅವರ ನಡುವೆ ಬಿರುಕು ಮೂಡಿದೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ದರ್ಶನ್ ಅವರು ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಅವರನ್ನು ಅನ್ ಫಾಲೋ ಮಾಡಿರುವುದು. ಹೌದು, ತನ್ನದೇ ಅಭಿಮಾನಿ ಬಳದ ಡಿ ಕಂಪನಿ ಸೇರಿದಂತೆ ಒಟ್ಟು ಆರು ಖಾತೆಗಳನ್ನು ಹಿಂಬಾಲಿಸುತ್ತಿದ್ದ ದರ್ಶನ್ ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರನ್ನೂ ಸಹ ಅನ್‌ಫಾಲೊ ಮಾಡಿದ್ದಾರೆ.

 

ಹೀಗೆ ದರ್ಶನ್ ದಿಢೀರನೆ ಅನ್‌ಫಾಲೊ ಮಾಡಿದ ಬೆನ್ನಲ್ಲೇ ಇದರ ಹಿಂದಿನ ಕಾರಣವೇನು ಎಂಬ ಚರ್ಚೆ ಶುರುವಾಗಿದೆ. ಕೆಲವರು ದರ್ಶನ್ ಹಾಗೂ ಸುಮಲತಾ ನಡುವೆ ವೈಮನಸ್ಸು ಮೂಡಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬೆನ್ನಲ್ಲೇ ದರ್ಶನ್ ನಡೆಗೆ ಸುಮಲತಾ ಅವರು ತಿರುಗೇಟು ಕೊಟ್ಟರೆ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಸುಮಲತಾ ಪೋಸ್ಟ್ ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

ಸುಮಲತಾ ಪೋಸ್ಟ್ ನಲ್ಲಿ ಏನಿದೆ?

ಸುಮಲತಾ ಅವರು ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಂಗ್ಲಿಷ್ ಲೈನ್​ಗಳನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ಗೆ ಪೋಸ್ಟ್ ಮಾಡಿದ್ದಾರೆ. ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.

Comments are closed.