ಕೃಷಿಮೇಳ 2019
ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ-2019, ಇವತ್ತು ಅಂದರೆ ಅಕ್ಟೋಬರ್ 24 ರಿಂದ 27 ರ ವರೆಗೆ ನಡೆಯಲಿದೆ. ಇವತ್ತು ಮದ್ಯಾನ್ಹ 11.30 ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮೇಳವನ್ನು ಉದ್ಘಾಟಿಸಲಿದ್ದಾರೆ.
ಮೇಳದ ಮೊದಲ ದಿನ ಉದ್ಘಾಟನಾ ಸಮಾರಂಭ ಮತ್ತು ಉತ್ತಮ ಕೃಷಿಕರಿಗಾಗಿ ಮತ್ತು ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ರೈತ ಪ್ರಶಸ್ತಿಯನ್ನು ನೀಡಲಾಗುತ್ತಡಿ. ಮೇಳದಲ್ಲಿ ಉಪ ಮುಖ್ಯಮಂತ್ರಿ ಮತ್ತು ಕೃಷಿ ಸಚಿವ ಲಕ್ಷ್ಮಣ ಸವದಿ ಯವರು ಮುಖ್ಯ ಅತಿಯಾಗಿದ್ದು, ಶಾಶಕ ಕೃಷ್ಣ ಬೈರೇಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾನ್ಹ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡರು ಭಾಗವಹಿಸಲಿದ್ದಾರೆ.
ಈ ಸಲ ಪ್ರಥಮ ಬಾರಿಗೆ, ಕೃಷಿ ವಿಜ್ಞಾನಿಗಳ ಜತೆ ಮತ್ತು ಕೃಷಿ ಉದ್ಯಮಿಗಳ ಜತೆ ರೈತರ ಚರ್ಚೆ ಮತ್ತು ಸಂವಾದಕ್ಕೆ ವೇದಿಕೆ ಸಿದ್ಧಗೊಂಡಿದೆ.
ಈ ಸಾಲದ ಮೇಳದ ಘೋಷ ವಾಕ್ಯ “ನಿಖರ ಕೃಷಿ, ಸುಸ್ಥಿರ ಅಭಿವೃದ್ಧಿ”.
ಏನಿದು ನಿಖರ ಕೃಷಿ?
ಭೂಮಿಯಲ್ಲಿ ನೀರನ್ನು ಶೇಖರಿಸಿಟ್ಟು, ಸಂರಕ್ಷಿತ ಬೇಸಾಯ ಮಾಡಿ ನಿಖರವಾದ ಬೆಳೆ ತೆಗೆಯುವ ವಿಧಾನವನ್ನು ನಿಖರ ಬೆಳೆ ಪದ್ಧತಿ ಎಂದು ಜಿಕೆವಿಕೆ ಹೇಳಿಕೊಂಡಿದೆ.ನಿಖರ ಬೆಳೆ ಕೃಷಿ ಪದ್ದತಿಯ ಪ್ರಯೋಗದಲ್ಲಿ ಯಶಃ ಸಿಕ್ಕಿದ್ದು, ಅದು ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ ಎಂದು ಜಿಕೆವಿಕೆ ಕುಲಪತಿ ಡಾ.ಏನ್. ರಾಜೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.
ಖಾಸಗಿಯವರ ಜತೆ ಸಹಭಾಗಿತ್ವ, ಹತ್ತು ಹಲವು ಹೊಸ ತಳಿಗಳ ಆವಿಷ್ಕಾರ, ಮೌಲ್ಯವರ್ಧಿತ ಆಹಾರ ಉತ್ಪಾದನೆ ಮುಂತಾವನ್ನೆಲ್ಲ ನಾವು ತುಂಬಾ ಕೇಳಿದ್ದೇವೆ. ನಮ್ಮ ಕೃಷಿಕರು ಶತಮಾನಗಳಿಂದ ಉತ್ತಮ ಪೌಷ್ಟಿಕ ಆಹಾರವನ್ನು ಉತ್ಪತ್ತಿ ಮಾಡಿದ್ದಾರೆ, ಅದನ್ನು ಬಳಸಿ, ತಮ್ಮ ಮಕ್ಕಳಿಗೂ ತಿನ್ನಿಸಿ, ನಾವಿಷ್ಟು ತಲೆಮಾರು ಬೆಳೆದು ಬಂದಿದ್ದೇವೆ. ಈ ಸಮ್ಮೇಳನ ವು ಕೃಷಿ ವಿಶ್ವ ವಿದ್ಯಾಲಯಗಳ ಮೇಲಿನ ನಮ್ಮ ಆಪಾದನೆಯನ್ನು ಹೋಗಲಾಡಿಸುವತ್ತ ಕೃಷಿ ವಿದ್ಯಾಲಯ ಮತ್ತು ಸರ್ಕಾರ ಏನಾದರೂ ಪ್ರಯತ್ನ ನಡೆಸಿದೆಯಾ ಎಂಬುದನ್ನು ಕಾದು ನೋಡಬೇಕು.ಈ ತನಕ, ನಮ್ಮ ಕೃಷಿ ವಿಶ್ವವಿದ್ಯಾಲಯಗಳು ದೊಡ್ಡ ದೊಡ್ಡ ರಸಗೊಬ್ಬರ ಮತ್ತು ಪೆಸ್ಟಿಸೈಡ್ ಕಂಪನಿಗಳ ಹಂಗಿನಲ್ಲಿ ನಡೆಯುತ್ತ ಹೋಗುತ್ತಿರುವ ಸಂಸ್ಥೆಗಳು.ಎಲ್ಲ ಕಾರ್ಯಾಗಾರಗಳು, ಸೆಮಿನಾರುಗಳೆಲ್ಲ ಪ್ರೈವೇಟ್ ಪ್ರಾಯೋಜಿತ. ಹಿಂದೊಮ್ಮೆ, ನಮ್ಮ ಕರ್ನಾಟಕದ ಫುಕುವೋಕಾ,ನಾಡೋಜ ಪ್ರಶಸ್ತಿ ವಿಜೇತ, ಡಿ.ನಾರಾಯಣ ರೆಡ್ಡಿಯವರ ಒಂದು ಮಾತು ನಮಗೆ ಈಗ ನೆನಪಿಗೆ ಬರುತ್ತಿದೆ.” ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಎಲ್ಲವು ಇರುವುದು ನಮ್ಮ ಭೂಮಿಯನ್ನು ಹಾಳು ಮಾಡಲೆಂದೇ. ಎಲ್ಲವೂ ನಮಗೆ ಹೊರಗಡೆಯಿಂದಲೇ ಆಗಬೇಕು. ಗೊಬ್ಬರ, ಬೀಜ,ಕ್ರಿಮಿನಾಶ-ಎಲ್ಲವೂ. ಅದನ್ನು ನೀಡುವವರು ನಮ್ಮ ಬಹುರಾಷ್ಟ್ರೀಯ ಕಂಪನಿಗಳು”.
ರೈತರು ಆದಷ್ಟು, ತಮ್ಮಲ್ಲಿರುವ ಬೀಜ, ಹಟ್ಟಿಗೊಬ್ಬರ, ಕುರಿ ಗೊಬ್ಬರ, ಕೋಳಿ ಗೊಬ್ಬರ ಮುಂತಾದುವುಗಳನ್ನು ಬಳಸಿ ‘ಕಡಿಮೆ ಖರ್ಚಿನ’ ಕೃಷಿ ವಿಧಾನಗಟ್ಟ ಗಮನ ಹರಿಸುವುದು ಒಳ್ಳೆಯದು. ಸಾಧಾರಣ ಇಳುವರಿ ಬಂದರೂ ಪರವಾಗಿಲ್ಲ, ಖರ್ಚು ಕಮ್ಮಿಯಾಗಿ, ಭೂಮಿತಾಯಿಯ ಸತ್ವ ಹಾಳಾಗದಂತೆ ಕೃಷಿ ಮಾಡುವುದು ನಮ್ಮೆಲರ ಆದ್ಯತೆಯಾಗಬೇಕು. ಹೆಚ್ಚು ಇಳುವರಿ ಬಂದರೆ ಏನು ಉಪಯೋಗ, ಒಟ್ಟಾರೆ ಖರ್ಚು ಅಧಿಕವಾದಾಗ? ಒಂದು ನೂರು ಗ್ರಾಂ ಬೀಜದ ಬೆಲೆ, ನೂರು ರೂಪಾಯಿಯಿಂದ ಸಾವಿರದವರೆಗೆ ಹೋಗುತ್ತದೆ. ಅದೂ, ಎಷ್ಟೋ ಸಲ ಮೊಳಕೆ ಬರುವುದಿಲ್ಲ. ಮೊಳಕೆ ಬಂದರೂ ನಮ್ಮ ಮಣ್ಣಿಗೆ, ನಮ್ಮ ವಾತಾವರಣಕ್ಕೆಬೆಳೆಗಳು ಹೊಂದಾಣಿಕೆಯಾಗದೆ ನಾವು ಎಷ್ಟೋ ಸಲ,ಅತ್ತ ಖರ್ಚೂ ಮಾಡಿ,ಇಳುವರಿ ಕೂಡಾ ಬರದೇ ನಷ್ಟ ಮಾಡಿಕೊಳ್ಳುವು ಆಗುತ್ತಿದೆ. ಅದಕ್ಕೇ ನಮ್ಮದೇ ಬೀಜವನ್ನು,ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುವತ್ತ ಪ್ರಜ್ಞಾವಂತ ಕೃಷಿಕರು ಯೋಚಿಸಬೇಕಾಗಿದೆ.