Home Entertainment ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್?!!! ಕಾರಣವೇನು?

‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್?!!! ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

ಜ಼ೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ ಜೊತೆ ಜೊತೆಯಲಿ’ ಸೀರಿಯಲ್ ಸೆಟ್ಟಿನಿಂದ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟ ಅನಿರುಧ್ಧ್ ಹಾಗೂ ತಂತ್ರಜ್ಞರ ನಡುವೆ ಮನಸ್ತಾಪ ಉಂಟಾಗಿದೆಯಂತೆ.

ಮಾಹಿತಿ ಪ್ರಕಾರ, ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ನಡೆದಿದೆ ಎಂಬ ಸುದ್ದಿ ಇದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ದಟ್ಟವಾಗಿ ಹಬ್ಬಿದೆ‌.

ಈ ಸೀರಿಯಲ್ ಸೆಟ್ ನಲ್ಲಿ ಅನಿರುದ್ಧ್ ಅವರು ಅಸಹಕಾರ ತೋರಿದ್ದಾರೆ. ಜೊತೆ ಜೊತೆ ಸೀರಿಯಲ್ 150 ಸಂಚಿಕೆಗಳು ಈಗಾಗಲೇ ಸಂಪೂರ್ಣವಾಗಿದೆ‌ ನಂತರ ಈ ರೀತಿ ವರ್ತನೆ ಶುರುವಾಗಿದೆ ಎಂದು ಕೇಳಿ ಬಂದಿದೆ. ಆದರೂ ಶೂಟಿಂಗ್ ಮುಂದುವರಿದಿತ್ತು. ಆದರೆ ಈಗ ಎಲ್ಲವೂ ಮಿತಿ ಮೀರಿದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅನಿರುದ್ಧ ಮಾಡುತ್ತಿರುವ ಆರ್ಯವರ್ಧನ್ ಪಾತ್ರ ತುಂಬ ಅಂದರೆ ತುಂಬಾನೇ ಪ್ರಸಿದ್ಧಿಯಾಗಿದೆ. ಅಲ್ಲದೇ ಈ ಪಾತ್ರದಲ್ಲಿ ಅನಿರುದ್ಧ ಪಾತ್ರ ಅದ್ಭುತ. ಜೀವ ನೀಡಿದ್ದಾರೆ ನಟನೆಯಲ್ಲಿ ಅಂತಾನೇ ಹೇಳಬಹುದು. ಬಹುಶಃ ಪ್ರೇಕ್ಷಕರಿಗೆ ಈ ಪಾತ್ರದಲ್ಲಿ ಬೇರೆ ನಟನನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಹೇಳಬಹುದು‌. ಒಂದು ವೇಳೆ ಅನಿರುದ್ಧ್ ಈ ಸೀರಿಯಲ್‌ನಿಂದ ಹೊರನಡೆದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.

ಅನಘ್ಯ ಪ್ರೇಮಕಥೆಯನ್ನು ಒಳಗೊಂಡಿರುವ ‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ ಅನಿರುದ್ ಮತ್ತು ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಒಂದಷ್ಟು ಎಪಿಸೋಡ್‌ಗಳ ಚಿತ್ರೀಕರಣ ಆಗಿದೆ. ವಿವಾದ ಬಗೆಹರಿಯುವವರೆಗೆ ಆ ಸಂಚಿಕೆಗಳು ಪ್ರಸಾರ ಆಗಲಿದೆ.

ಅನಿರುದ್ಧ ಅವರನ್ನು ಬ್ಯಾನ್ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಈ ಘಟನೆ ಕುರಿತು ಪ್ರತಿಕ್ರಿಯಿಸಲು ಅನಿರುದ್ಧ ನಿರಾಕರಿಸಿದ್ದಾರೆ. ಆದರೆ ಈ ಕಿರಿಕ್ ಬಗ್ಗೆ ಇಲ್ಲಿಯವರೆಗೆ ಜೀ ಕನ್ನಡ ವಾಹಿನಿ ಕಡೆಯಿಂದಾಗಲಿ, ನಿರ್ದೇಶಕ ಆರೂರು ಜಗದೀಶ್ ಅವರ ಕಡೆಯಿಂದಾಗಲಿ ಅಥವಾ ನಟ ಅನಿರುದ್ಧ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

‘ನನಗೆ ವಾಹಿನಿ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅವರು ನೇರವಾಗಿ ಮಾತನಾಡಿದ ಬಳಿಕ ಸುದ್ದಿಗೋಷ್ಠಿ ಕರೆದು ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ’ ಎಂದು ಅನಿರುದ್ಧ ಅವರು ಖಾಸಗಿ ಚಾನೆಲ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.