Home latest ಬೆಂಗಳೂರಿನಲ್ಲಿ ವೈಫ್ ಸ್ವಾಪಿಂಗ್ ದಂಧೆ | ಟ್ವಿಟ್ಟರ್ ಮೂಲಕ ಆಹ್ವಾನ | ಪತ್ನಿಯನ್ನು ಇನ್ನೊಬ್ಬನ...

ಬೆಂಗಳೂರಿನಲ್ಲಿ ವೈಫ್ ಸ್ವಾಪಿಂಗ್ ದಂಧೆ | ಟ್ವಿಟ್ಟರ್ ಮೂಲಕ ಆಹ್ವಾನ | ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳುಹಿಸಿ,ಲೈವ್ ವೀಡಿಯೋ ಮಾಡುತ್ತಿದ್ದ ಪತಿ |ಗ್ರಾಮೀಣ ಭಾಗದ ದಂಪತಿ ಸೆರೆ

Hindu neighbor gifts plot of land

Hindu neighbour gifts land to Muslim journalist

ಆತನಿಗೆ ವಿಚಿತ್ರವಾದ ಒಂದು ಆಸೆ ಇತ್ತು. ಅದುವೇ ತನ್ನ ಹೆಂಡತಿ ಪರಪುರುಷನ ಜೊತೆ ಮಿಲನ ಹೊಂದುವುದನ್ನು ವೀಡಿಯೋ ಮಾಡಿ ಅದನ್ನು ನೋಡಿ ತನ್ನ ಕಾಮತೃಷೆ ತಣಿಸುವ ಹುಚ್ಚಾಸೆ. ಇದನ್ನು ಮೊಬೈಲ್ ನಲ್ಲಿ ಲೈವ್ ವೀಡಿಯೋ ಮಾಡಿ ನೋಡುವ ಹುಚ್ಚು ಈಗ ಈತನನ್ನು ಪೊಲೀಸ್ ಕಂಬಿಗಳ ಹಿಂದೆ ತಂದು ನಿಲ್ಲಿಸಿದೆ‌.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿ ನಡೆಯುವ ಈ ವೈಫ್ ಸ್ವಾಪಿಂಗ್ ದಂಧೆ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಗೆ ಲಗ್ಗೆಇಟ್ಟಿದೆ.

ಈ ದಂಧೆಗೆ ಪತಿಯೊಂದಿಗೆ ಪತ್ನಿ ಕೂಡಾ ಗ್ರೀನ್ ಸಿಗ್ನಲ್ ನೀಡಿ ಈ ವಿಲಕ್ಷಣ ಹೈಟೆಕ್ ದಂಧೆಗೆ ಕೈಜೋಡಿಸಿದ್ದಾಳೆ.

ಈತ ವೈಫ್ ಸ್ವಾಪಿಂಗ್ ನ್ನು ದಂಧೆಯನ್ನಾಗಿಸಿ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ವೈಫ್ ಸ್ವಾಪಿಂಗ್ ಗೆ ಆಹ್ವಾನ ನೀಡುತ್ತಿದ್ದ. ನಗರದಲ್ಲಿ ಹೈಟೆಕ್ ವೈಫ್ ಸ್ವಾಪಿಂಗ್ ನಡೆಯುತ್ತಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಆರೋಪಿಯೇ ಹಂಚಿಕೊಂಡಿದ್ದು ಇದನ್ನು ಸಾರ್ವಜನಿಕರೊಬ್ಬರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಇದರ ಖಚಿತ ಮಾಹಿತಿಯ ಮೇರೆಗೆ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಡ್ಯ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನ ವಿಚಾರಣೆಗೊಳಪಡಿಸಿದಾಗ ಪ್ಯಾಂಟಸಿಗಾಗಿ ದಂಧೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಂಡ್ಯ ಮೂಲದ ಯುವಕ, ಮಾಗಡಿಯ ಯುವತಿ‌ ಇಬ್ಬರು ಎಲೆಕ್ಟ್ರಾನಿಕ್ ಶಾಪ್ ವೊಂದರಲ್ಲಿ ಸೇಲ್ಸ್ ಮ್ಯಾನ್ ಗಳಾಗಿ ಕೆಲಸ ಮಾಡುವಾಗ ಒಬ್ಬರಿಗೊಬ್ಬರ ಪರಿಚಯವಾಗಿ ನಂತೆ ಪ್ರೇಮಕ್ಕೆ ತಿರುಗಿ, 2019 ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಮುದ್ದಾದ ಮಗುವಿದೆ.

ಇವರು ಪರಪ್ಪನ ಅಗ್ರಹಾರ ಬಳಿಯ ಸಿಂಗಸಂದ್ರದಲ್ಲಿ ವಾಸವಾಗಿದ್ದರು. ನಂತರ ಈತ ಪ್ಯಾಂಟಸಿ ಸೆಕ್ಸ್ ಗೆ ಒಳಪಡಿಸುವ ಇಂಗಿತವನ್ನು ತನ್ನ ಹೆಂಡತಿಯಲ್ಲಿ ಹೇಳಿ ಆಕೆಯನ್ನು ತನ್ನ ಮಾತಿನ ಮೂಲಕ ಒಪ್ಪಿಸಿದ್ದಾನಂತೆ. ಈತ ಟೆಲಿಗ್ರಾಂ ಮೂಲಕ ದಂಧೆಯ ಬಗ್ಗೆ ಮಾಹಿತಿ ನೀಡುತ್ತಿದ್ದನಂತೆ. ಆದರೆ ಸ್ನೇಹಿತನ ಸೂಚನೆ ಮೇರೆಗೆ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಜಾಹ್ನವಿ ಹೆಸರಿನಲ್ಲಿ ವೈಫ್ ಸ್ವಾಪಿಂಗ್ ಬಗ್ಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದನಂತೆ.

ಈ ಮಾಹಿತಿಯನ್ನು ಕಂಡ ಕೆಲ ಗ್ರಾಹಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಬಳಿಕ ಸಿಂಗಸಂದ್ರದ ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಿದ್ದ. ಸ್ವತಃ ತನ್ನ ಹೆಂಡತಿ ಜೊತೆ ಸೆಕ್ಸ್ ಮಾಡುವಾಗ ಪ್ರತ್ಯಕ್ಷವಾಗಿದ್ದುಕೊಂಡು ಲೈವ್ ವೀಡಿಯೋ ಮಾಡುವುದಾಗಿ ಹೇಳುತ್ತಿದ್ದ. ಗ್ರಾಹಕರು ಒಪ್ಪಿಕೊಂಡರೆ ತನ್ನ ಈ ವಿಕೃತ ಬಯಕೆಯನ್ನು ಈಡೇರಿಸುತ್ತಿದ್ದ.

ಇನ್ನೊಂದು ಈತ ಹಣಕ್ಕಾಗಿ ಗ್ರಾಹಕರಲ್ಲಿ ಡಿಮ್ಯಾಂಡ್ ಮಾಡುತ್ತಿರಲಿಲ್ಲವಂತೆ. ಗ್ರಾಹಕರು ಎಷ್ಟು ಕೊಡುತ್ತಾರೋ ಅಷ್ಟನ್ನು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.