

Love jihad: ಇತ್ತೀಚೆಗೆ ಪ್ರೀತಿಯ ಬಲೆಗೆ ಬೀಳಿಸಿ ಮೋಸ ಮಾಡುವ ಪ್ರಕರಣ ಹೆಚ್ಚಾಗಿದೆ. ಅದರಲ್ಲೂ ಲವ್ ಜಿಹಾದ್(love jihad) ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಹಿಂದು ಮಹಿಳೆಯನ್ನು ಮದುವೆಯಾಗಿ ನಂತರ ಆಕೆಯನ್ನು ಮತಾಂತರಗೊಳಿಸಿ ಮಾನಸಿಕ ಹಿಂಸೆ ನೀಡುವುದು, ದೈಹಿಕ ಹಿಂಸೆ ನೀಡುವುದು, ಮರುಮದುವೆ, ಕೊಲೆ ಪ್ರಕರಣ ಸಾಕಷ್ಟು ಕೇಳಿ ಬರುತ್ತಿದೆ. ಇದೀಗ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಸ್ಲಾಂಗೆ ಮತಾಂತರವಾಗಿ ಮದುವೆಯಾಗಿದ್ದ ಹಿಂದೂ ಮಹಿಳೆಯನ್ನು ಹೆರಿಗೆಗೆ ಎಂದು ತವರು ಮನೆಗೆ ಕಳುಹಿಸಿ ಅಬ್ದುಲ್ ರಹೀಂ ಎಂಬಾತ ಎರಡನೇ ಮದುವೆಯಾಗಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಮಹಿಳೆ ಐದು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಬಿಕಾಂ ಓದುತ್ತಿದ್ದಳು. ಈ ವೇಳೆ ಆರೋಪಿ ಅಬ್ದುಲ್ ರಹೀಂ ನ ಪರಿಚಿತವಾಗಿತ್ತು. ಈತ ರಿಚ್ಮಂಡ್ ಸರ್ಕಲ್ ಖಾಸಗಿ ಹೋಟೆಲ್‌ನಲ್ಲಿ ಈವೆಂಟ್ ಆರ್ಗನೈಸರ್ ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರ ಪರಿಚಯ ಕಾಲಕ್ರಮೇಣ ಪ್ರೇಮಕ್ಕೆ ತಿರುಗಿದ್ದು, ನಂತರ ಇಬ್ಬರೂ ಮದುವೆಯ ಇಂಗಿತ ವ್ಯಕ್ತಪಡಿಸಿ, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಅಬ್ದುಲ್ ರಹೀಂ ಪೋಷಕರು ಈ ಮದುವೆಗೆ ಒಂದು ಷರತ್ತು ಹಾಕಿದ್ದರು, ಇದಕ್ಕೆ ಒಪ್ಪಿದರೆ ಮಾತ್ರ ಮದುವೆ ಆಗಬಹುದು ಎಂದಿದ್ದರು. ಅದೇನೆಂದರೆ, ಮಹಿಳೆ ಇಸ್ಲಾಂಗೆ ಮತಾಂತರವಾದರೆ ಮಾತ್ರ ಮದುವೆಗೆ ಆಗಬಹುದು ಎಂದಿದ್ದರು. ಹೀಗಾಗಿ ಅನ್ಯ ಮಗಳ ಪ್ರೀತಿಗೆ ಬೆಂಬಲವಾಗಿ ನಿಂತ ಸಂತ್ರಸ್ಥೆಯ ಪೋಷಕರು, ಮಗಳು ಇಸ್ಲಾಂಗೆ ಮತಾಂತರವಾಗಲು ಒಪ್ಪಿಗೆ ನೀಡಿದರು.
ಹಾಗೆಯೇ 2020ರ ಫೆ.6ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಸೀದಿಯಲ್ಲಿ ಸಂತ್ರಸ್ತೆ ಇಸ್ಲಾಂಗೆ ಧರ್ಮಕ್ಕೆ ಮತಾಂತರವಾಗಿ, ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಮೇಲೆ ಆರೋಪಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅಲ್ಲಿವರೆಗೂ ಆರೋಪಿ ಹಾಗೂ ಮನೆಯವರು ಆಕೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಆದರೆ ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಎಲ್ಲವೂ ಬದಲಾಯಿತು. ಆಕೆಯ ಅತ್ತೆ-ಮಾವ ವರದಕ್ಷಿಣೆಯ ನೆಪದಲ್ಲಿ ಕಿರುಕುಳ ನೀಡಲು ಆರಂಭಿಸಿದ್ದರು. ಹಾಗೆಯೇ ಮಹಿಳೆಯನ್ನು ಹೆರಿಗೆಗೆ ಎಂದು ತವರು ಮನೆಗೆ ಕಳುಹಿಸಿ, ಇತ್ತ ಆರೋಪಿ ಎರಡನೇ ಮದುವೆಯಾಗಿದ್ದ.
ಹೌದು, ಪತ್ನಿಯನ್ನು ಹೆರಿಗೆಗೆ ಕಳಿಸಿದ್ದ, ಹಾಗೇ ಸಂತ್ರಸ್ತೆಗೆ ಹೆಣ್ಣು ಮಗುವಾಗಿತ್ತು. ಆದರೆ ಗಂಡನ ಮನೆಯವರು ಹತ್ತಿರವೂ ಬರಲಿಲ್ಲ. ಹೀಗಾಗಿ ಸಂತ್ರಸ್ತೆಯ ಪೋಷಕರು ಸಂತ್ರಸ್ತೆ ಹಾಗೂ ಮಗುವನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೆ, ಆರೋಪಿಯ ಪೋಷಕರು ಹೆಣ್ಣು ಮಗು ಆಗಿದೆ. ಮನೆಗೆ ಸೇರಿಸುವುದಿಲ್ಲ ಎಂದು ಜಗಳವಾಡಿ, ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದರು.
ಈ ವೇಳೆ ಆರೋಪಿಗೆ ಬೇರೆ ಯುವತಿ ಜೊತೆ ಮದುವೆಯಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಆಕೆಗೆ ಒಂದು ಗುಂಡು ಮಗು ಕೂಡ ಇದೆ ಎಂಬ ವಿಚಾರ ಸಂತ್ರಸ್ತೆಗೆ ತಿಳಿದಿದೆ. ಈ ವಿಚಾರದ ಬಗ್ಗೆ ಕೇಳಿದಾಗ, ಅಬ್ದುಲ್ ರಹೀಂ ಹಾಗೂ ಆತನ ಪೋಷಕರು, ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಪ್ರಾಣ ಬೆದರಿಕೆ ಒಡ್ಡಿದ್ದು, ವಿಚ್ಚೇದನ ನೀಡುವುದಾಗಿ ಹೇಳಿದ್ದರು. ಹಾಗೇ ಆತ ಸಂತ್ರಸ್ತೆಯ ಫೋಟೋಗಳನ್ನು ವೇಶ್ಯೆ ಎಂದು ಸಾಮಾಜಿಕ ತಾಣದಲ್ಲಿ ಅಪಪ್ರಚಾರ ಮಾಡಿದ್ದ. ಇದರಿಂದ ಬೇಸತ್ತ ಮಹಿಳೆ ಚೆನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪತಿ ಅಬ್ದುಲ್ ರಹೀಂ, ಮಾವ ಅಫೀಜ್, ಅತ್ತೆ ರಶೀದಾ ಮತ್ತು ಅಬ್ದುಲ್ ರಹೀಂನ 2ನೇ ಪತ್ನಿ ನಸ್ರೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













