Home latest Nanu Nandini Song: ಪರೀಕ್ಷೆಯಲ್ಲಿ ವರ್ಲ್ಡ್ ಫೇಮಸ್ ಆದ ‘ನಾನು ನಂದಿನಿ’ ಹಾಡು ಬರೆದಿಟ್ಟ ವಿದ್ಯಾರ್ಥಿ:...

Nanu Nandini Song: ಪರೀಕ್ಷೆಯಲ್ಲಿ ವರ್ಲ್ಡ್ ಫೇಮಸ್ ಆದ ‘ನಾನು ನಂದಿನಿ’ ಹಾಡು ಬರೆದಿಟ್ಟ ವಿದ್ಯಾರ್ಥಿ: ವೈರಲ್ ಆಯ್ತು ಪೋಸ್ಟ್!

Nanu Nandini song

Hindu neighbor gifts plot of land

Hindu neighbour gifts land to Muslim journalist

Nanu Nandini song : ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ವರ್ಲ್ಡ್ ಫೇಮಸ್ ನಾನು ನಂದಿನಿ..ಹಾಡು ಎಲ್ಲರ ಹಾಟ್ ಫೇವರೆಟ್ ಆಗಿಬಿಟ್ಟಿದೆ. ಬೆಂಗಳೂರಿನ ವಿಕ್ಕಿಪೀಡಿಯಾ ಎನ್ನುವ ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ” ನಾನು ನಂದಿನಿ… ಬೆಂಗಳೂರಿಗೆ ಬಂದೀನಿ.. ಪಿಜಿಲಿ ಇರ್ತೀನಿ..”(Nanu Nandini song)ಎಂಬ ಹಾಡು ವೈರಲ್‌ ಆಗಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದು ಗೊತ್ತಿರುವ ಸಂಗತಿ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳನ್ನೇ ಗುರಿ ಮಾಡಿಕೊಂಡು ಬರೆದಿರುವ ಹಾಡು ನಾನು ನಂದಿನಿ.. ವೈರಲ್‌ ಆಗಿ ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ. ಅಷ್ಟೆ ಅಲ್ಲದೇ ಬೇರೆ ಸಿನಿಮಾದ ಹಾಡು ಹಾಗೂ ಮ್ಯೂಸಿಕ್‌ ಮೀರಿಸುವಂತೆ ಟ್ರೆಂಡ್‌ ಆಗುತ್ತಿದ್ದು, ರೀಲ್ಸ್‌ಗಳನ್ನು ಮಾಡಲು, ಗಣೇಶ ಹಬ್ಬದಲ್ಲಿ ಡಿಜೆ ಸಾಂಗ್‌ ಹಾಕಿಕೊಂಡು ಕುಣಿಯಲು, ಪಬ್‌ಗಳಲ್ಲಿ ಡಿಸ್ಕೋ ಹಾಡಾಗಿ ಕೂಡ ಈ ಹಾಡನ್ನು ಬಳಕೆ ಮಾಡಲಾಗುತ್ತಿದೆ. ಈ ಹಾಡನ್ನು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದಿದ್ದು, ಇದನ್ನು ನೋಡಿ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟು ಬಿಡಿ ಎಂದು ಹೇಳುತ್ತಿದ್ದಾರೆ.

Nanu Nandini song

ನಾನು ನಂದಿನಿ.. ಹಾಡಿನ ಸೃಷ್ಟಿಕರ್ತ ವಿಕ್ಕಿ ಅವರು, ಫೋಟೋವನ್ನು ಹಂಚಿಕೊಂಡಿದ್ದು, ಗಣಪತಿ ಹಬ್ಬ, ರೀಲ್ಸ್‌ ಆಯ್ತು, ಟ್ರಾಫಿಕ್‌ ಜಾಮ್‌ ಹಾಗೂ ಪಬ್‌ಗಳಲ್ಲಿ ಆಯ್ತು!! ಅಯ್ಯೋ ಅಯ್ಯೋ ಅಯ್ಯೋ.. ಏನ್‌ ಇದು.? ಎಕ್ಸಾಂನಲ್ಲೂ ಫುಲ್‌ ಹವಾ ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲಿ ಯಾವ ತರಗತಿ ವಿದ್ಯಾರ್ಥಿ ಎಂಬುದು ಸರಿಯಾಗಿ ಗೊತ್ತಾಗದೆ ಹೋದರು ಕೂಡ ಜೀವಶಾಸ್ತ್ರ ವಿಷಯದ ಪರೀಕ್ಷೆಯಂತೆ ಕಂಡುಬರುತ್ತಿದೆ. ಉತ್ತರ ಪತ್ರಿಕೆ ಯಾವ ತರಗತಿ, ಯಾವ ಶಾಲೆ ಅಥವಾ ಕಾಲೇಜಿನದ್ದು ಎಂಬುದು ಗೊತ್ತಾಗುತ್ತಿಲ್ಲ. ಇದರಲ್ಲಿ ಮೊದಲ ಎರಡು ಪ್ಯಾರಾಗಳಲ್ಲಿ ಪ್ರಶ್ನೆಗೆ ಸಂಬಂಧಪಟ್ಟ ಉತ್ತರವನ್ನು ಬರೆಯಲಾಗಿದ್ದು, ಆನಂತರದ ಮೂರು ಮತ್ತು ನಾಲ್ಕನೇ ಪ್ಯಾರಾಗಳಲ್ಲಿ ನಾನು ನಂದಿನಿ.. ಬೆಂಗಳೂರಿಗೆ ಬಂದೀನಿ… ಎಂಬ ಹಾಡನ್ನು ಪೂರ್ತಿ ಬರೆದು ಪುಟವನ್ನು ಭರ್ತಿ ಮಾಡಲಾಗಿದೆ. ವೈರಲ್ ಆಗಿರುವ ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದು, ಈ ವಿದ್ಯಾರ್ಥಿಗೆ ಫುಲ್ ಮಾರ್ಕ್ಸ್ ಕೊಟ್ಟು ಬಿಡಿ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Gruhalakshmi Guarantee Scheme: ಯಜಮಾನಿಯರೇ, ಗೃಹಲಕ್ಷ್ಮೀಯ 2ನೇ ಕಂತಿನ ಹಣ ಬರೋದು ಯಾವಾಗ ?! ಇಲ್ಲಿದೆ ನೋಡಿ ಡೀಟೇಲ್ಸ್