Home latest Bengalore: ಗೆಳೆಯನ ತಂಗಿ ಹುಟ್ದಬ್ಬಕ್ಕೆ ಬ್ಯಾನರ್ ಹಾಕಿ ಶುಭಕೋರಿದ ಕುಚುಕು ಗೆಳೆಯರು – ಕೆಲವೇ ಹೊತ್ತಲ್ಲಿ...

Bengalore: ಗೆಳೆಯನ ತಂಗಿ ಹುಟ್ದಬ್ಬಕ್ಕೆ ಬ್ಯಾನರ್ ಹಾಕಿ ಶುಭಕೋರಿದ ಕುಚುಕು ಗೆಳೆಯರು – ಕೆಲವೇ ಹೊತ್ತಲ್ಲಿ ಫೋಟೋದಲ್ಲಿದ್ದವರೆಲ್ಲ ಹೆಣವಾಗಿ ಹೋದರು

Bengalore

Hindu neighbor gifts plot of land

Hindu neighbour gifts land to Muslim journalist

Bengalore : ಅವರೆಲ್ಲರೂ ಕುಚಿಕು ಗೆಳೆಯರು. ಅವರಲ್ಲಿ ಒಬ್ಬ ಸ್ನೇಹಿತನ ಮುದ್ದಾದ ತಂಗಿ ಹುಟ್ಟುಹಬ್ಬಕ್ಕೆ ಆ ಗೆಳೆಯರೆಲ್ಲರೂ ಸೇರಿ ಒಂದೇ ಫ್ರೇಮ್‌ನಲ್ಲಿ ಫೋಟೋ ಹಾಕಿ, ಬ್ಯಾನರ್ ಮಾಡಿಸಿ ವಿಶ್‌ ಮಾಡಿದ್ದರು. ಆದರೆ ದುರದೃಷ್ಟವಶಾತ್ ಆ ಫೋಟಧಲ್ಲಿದ್ದ ಗೆಳೆಯರೆಲ್ಲರೂ ಕೆಲವೇ ಹೊತ್ತಿನಲ್ಲಿ ಮಸಣ ಸೇರಿರುವ ಮನಮಿಡಿಯುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

ಹೌದು, ಬೆಂಗಳೂರು(Bengalore) ಸಮೀಪದ ಅತ್ತಿಬೆಲೆ ಪಟಾಕಿ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬದುಕಿ ಬಾಳಬೇಕಿದ್ದ ಅನೇಕ ಹರೆಯದ ಜೀವಗಳು ಇಹಲೋಕ ತ್ಯಜಿಸಿವೆ. ಈ ದುರಂತದಲ್ಲಿ ಇಲ್ಲಿತನಕ 14 ಮಂದಿ ಸಜೀವ ದಹನವಾಗಿದ್ದಾರೆ. ಇದರಲ್ಲಿ ಮೃತಪಟ್ಟ 6 ಯುವಕರು ಆತ್ಮೀಯ ಗೆಳೆಯರೆಂಬುದು ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.

ಇನ್ನೂ ಕರುಳು ಕಿತ್ತುಬರುವಂತೆ ಮಾಡುವುದೇನೆಂದರೆ ಇವರು ಸಾಯುವ ಮುಂಚೆ ತಮ್ಮ ಕುಚುಕು ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ(birthday) ವಿಶ್‌ನನ್ನು ಸಹ ಮಾಡಿದ್ದರು. ಅದೂ ಕೂಡ ಒಂದೇ ಬ್ಯಾನರ್ ನಲ್ಲಿ ಫೋಟೋ(Photo) ಹಾಕಿಕೊಂಡು ವಿಶ್‌ ಮಾಡಿದ್ದರು. ಆದರೆ ತಮ್ಮ ಸಾವು ಸಮೀಪಿಸುವು ಮೊದಲು ಅಂದರೆ ಪಟಾಕಿ ದುರಂತ ಸಂಭಿಸುವ ತುಸು ಹೊತ್ತಿನ ಮುಂಚೆ ಇವರೆಲ್ಲಾ ಆ ತಂಗಿಗೆ ವಿಶ್ ಮಾಡಿದ್ದರು ಎಂದು ತಿಳಿದುಬಂದಿದೆ. ಆದ್ರೆ ಇವರೆಲ್ಲಾ ಈಗ ಮೃತಪಟ್ಟಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಾದ ತಂಗಿ ಅಣ್ಣಂದಿರ ಶವಯಾತ್ರೆಗೆ ಹೊರಟಿದ್ದಾಳೆ ಎಂಬುದು ಎಂತವರ ಹೃದಯವನ್ನು ಕರಗಿಸಿಬಿಡುತ್ತದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಮೇಲೆ ಎಫ್ಐಆರ್(Fir) ದಾಖಲು ಮಾಡಲಾಗಿದೆ. ಐಪಿಸಿ 427, 285, 286, 304 ಆಕ್ಟ್ನಡಿ ಪ್ರಕರಣ ದಾಖಲಾಗಿದ್ದು, ಗೋಡನ್ ಮಾಲೀಕ ಸೇರಿದಂತೆ ನಾಲ್ವರ ವಿರುದ್ಧ ಕೇಸ್ ಹಾಕಲಾಗಿದೆ. ಗೋಡನ್ ಮಾಲೀಕ ರಾಮಸ್ವಾಮಿ ರೆಡ್ಡಿ ಎ1, ನವೀನ್ ರೆಡ್ಡಿ ಎ2, ಮ್ಯಾನೇಜರ್ ಲೋಕೇಶ್ ಎ 3, ಜಯಮ್ಮ ಕಟ್ಟಡ ಮಾಲೀಕರು ಎ 4, ಅನಿಲ್ ರೆಡ್ಡಿ ಎ5 ಆರೋಪಿಗಳೆಂದು ಎಫ್ಐಆರ್ ದಾಖಲು ಮಾಡಲಾಗಿದೆ. ಮೃತರ ಸಂಬಂಧಿ ಲೋಕೇಶ್ವರನ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Supreme court: ಮನೆಯ ಆಸ್ತಿ ಮಾರಲು ಹಿಂದೂಗಳಿಗೆ ಬಂತು ಹೊಸ ರೂಲ್ಸ್- ಕೋರ್ಟ್ ತೀರ್ಪು ಕೇಳಿ ಕುಟುಂಬದವರೆಲ್ಲ ಶಾಕ್ !!