Home latest ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ಧ್ರುವ ಸರ್ಜಾ ದಿಢೀರ್ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ!! ದೇವಿಯ ದರ್ಶನ...

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ಧ್ರುವ ಸರ್ಜಾ ದಿಢೀರ್ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ!! ದೇವಿಯ ದರ್ಶನ ಪಡೆದು ಹೇಳಿದ್ದೇನು!?

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್ ವುಡ್ ನಟ, ಚಿರಂಜೀವಿ ಸರ್ಜಾ ಸಹೋದರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ಜೂನಿಯರ್ ಧ್ರುವ ಸರ್ಜಾ ಎಂಟ್ರಿಯಾಗಲಿದ್ದಾರೆ. ಈ ವಿಚಾರವನ್ನು ಪತ್ನಿ ಜೊತೆಗಿನ ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

2019ರಲ್ಲಿ ಮದುವೆಯಾಗಿದ್ದ ಧ್ರುವ ಸರ್ಜಾ-ಪ್ರೇರಣಾ ಜೋಡಿ, ಶೀಘ್ರವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಮೊದಲ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ,ದಾಂಪತ್ಯ ಜೀವನದ ಹಂತಕ್ಕೆ ತಲುಪಿದ್ದೇವೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

ಇನ್ನೊಂದೆಡೆ ಮೊದಲ ಮಗುವಿನ ನಿರೀಕ್ಷೆಯ ಬೆನ್ನಲ್ಲೇ ನಟ ಧ್ರುವ ಸರ್ಜಾ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ದೇವಾಲಯಕ್ಕೆ ಆಗಮಿಸಿದ ಧ್ರುವ ಸರ್ಜಾರನ್ನು ದೇವಾಲಯದ ಆಡಳಿತ ಮೊಕ್ತೇಸರ ದುಗ್ಗಣ್ಣ ಸಾವಂತರು ಗೌರವಿಸಿದ್ದು, ಅರ್ಚಕ ಶ್ರೀಪತಿ ಉಪಾಧ್ಯಾಯ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ನೀಡಿದರು.

ಸರ್ಜಾ ಬಪ್ಪನಾಡು ಭೇಟಿ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಧಾವಿಸಿದ್ದು, ಕೆಲ ಕಾಲ ಸೆಲ್ಫಿಗಾಗಿ ಮುಗಿಬಿದ್ದರು.ದೇವಿಯ ದರ್ಶನ ಪಡೆದು ಸಂತೋಷವಾಯಿತು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇಡೀ ಕುಟುಂಬ ಸಂತೋದಲ್ಲಿದೆ ಎಂದು ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದರು.