Home ದಕ್ಷಿಣ ಕನ್ನಡ ತಮ್ಮನಿಂದಲೇ ಒಡಹುಟ್ಟಿದ ಅಣ್ಣನ ಕೊಲೆ!! ಜಗಳ ತಾರಕಕ್ಕೇರಿ ಇರಿದು ಕೊಂದ ತಮ್ಮ ಪೊಲೀಸರಿಗೆ ಶರಣು

ತಮ್ಮನಿಂದಲೇ ಒಡಹುಟ್ಟಿದ ಅಣ್ಣನ ಕೊಲೆ!! ಜಗಳ ತಾರಕಕ್ಕೇರಿ ಇರಿದು ಕೊಂದ ತಮ್ಮ ಪೊಲೀಸರಿಗೆ ಶರಣು

Hindu neighbor gifts plot of land

Hindu neighbour gifts land to Muslim journalist

ಸಹೋದರರಿಬ್ಬರ ನಡುವೆ ನಡೆದ ಜಗಳವು ತಾರಕಕ್ಕೇರಿ ತಮ್ಮನೇ ಅಣ್ಣನನ್ನು ಇರಿದು ಕೊಂದ ಘಟನೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಲ ಎಂಬಲ್ಲಿ ಮಾರ್ಚ್ 21 ರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಥೋಮಸ್ ಡಿಸೋಜ(45) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ತಮ್ಮ ರಾಜೇಶ್(37) ಎನ್ನಲಾಗಿದೆ.

ಇಬ್ಬರೂ ರಾತ್ರಿ ವಿನಃ ಕಾರಣ ಜಗಳ ನಡೆಸಿಕೊಂಡಿದ್ದು, ಮಾತಿಗೆ ಮಾತು ಬೆಳೆದು ಕತ್ತಿ ಬೀಸುವ ಮಟ್ಟಕ್ಕೆ ತಲುಪಿದೆ. ಈ ವೇಳೆ ಬಿಡಿಸಲು ಬಂದ ಥೋಮಸ್ ಸಂಬಂಧಿಕರೊಬ್ಬರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯ ನಡೆಸಿದ ಆರೋಪಿ ಬದಿಯಡ್ಕ ಪೊಲೀಸರಿಗೆ ಶರಣಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.