Home News ಬೆಳ್ತಂಗಡಿ: ಖ್ಯಾತ ವಕೀಲ ಜೆ.ಕೆ. ಪೌಲ್ ವಿಧಿ ವಶ

ಬೆಳ್ತಂಗಡಿ: ಖ್ಯಾತ ವಕೀಲ ಜೆ.ಕೆ. ಪೌಲ್ ವಿಧಿ ವಶ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಪಟ್ಟಣದ ಖ್ಯಾತ ವಕೀಲರಾದ ಜೆ.ಕೆ. ಪೌಲ್ (55) ಅವರು ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರು ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನ ಹೊಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕರಂಬಾರು ನಿವಾಸಿ ಜೆ.ಕೆ. ಪೌಲ್ ಮೃತ ದೇಹ ಶಿರ್ಲಾಲು ಮನೆಗೆ ತರಲಾಗಿದ್ದು ಇಂದು ಅಂತ್ಯ ಕ್ರಿಯೆ ಸ್ಥಳೀಯ ಚರ್ಚ್ ನಲ್ಲಿ ನಡೆಯಲಿದೆ. ಜನಪ್ರಿಯ ವಕೀಲರಾಗಿದ್ದ ಅವರು ಸರಳ ವ್ಯಕ್ತಿತ್ವ ಹೊಂದಿ ಎಲ್ಲರಲ್ಲೂ ಸ್ನೇಹದಿಂದಿರುತಿದ್ದರು. ಅವರು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರ ವರ್ಗದವರನ್ನು ಅಗಲಿದ್ದಾರೆ.