Home ದಕ್ಷಿಣ ಕನ್ನಡ ಬಂಟ್ವಾಳ : ಗೋ ಕಳ್ಳತನ ಹಾಗೂ ಮಾಂಸದ ಅಡ್ಡೆಗೆ ಪೊಲೀಸ್ ದಾಳಿ, ಆರೋಪಿಗಳ ಬಂಧನ

ಬಂಟ್ವಾಳ : ಗೋ ಕಳ್ಳತನ ಹಾಗೂ ಮಾಂಸದ ಅಡ್ಡೆಗೆ ಪೊಲೀಸ್ ದಾಳಿ, ಆರೋಪಿಗಳ ಬಂಧನ

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ: ಗೋ ಕಳ್ಳತನ ಮಾಡಿ, ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳು ಸಹಿತ ದನದ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಗೋಳ್ತಮಜಲು ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳು ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಮತ್ತು ಸಾಧಿಕ್.

ಗೋಳ್ತಮಜಲು ಮಹಮ್ಮದ್ ಎಂಬವರ ಮನೆಯಲ್ಲಿ ಕದ್ದು ತಂದ ದನಗಳನ್ನು ವಧೆ ಮಾಡಿದ ಬಳಿಕ, ಮಾಂಸಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಸ್ಥಳೀಯರಿಂದ ಪೊಲೀಸರಿಗೆ ಲಭ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್ ಐ.ಅವಿನಾಶ್ ನೇತೃತ್ವದ ನಗರ ಠಾಣಾ ಪೊಲೀಸರ ತಂಡ ಮುಂಜಾವಿನ ವೇಳೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.