Home latest PM Kissan yojna: ವಿಜಯದಶಮಿ ದಿನವೇ ರೈತರಿಗೆ ಸಂತಸದ ಸುದ್ದಿ- ಈ ದಿನ ನಿಮ್ಮ ಖಾತೆಗೆ...

PM Kissan yojna: ವಿಜಯದಶಮಿ ದಿನವೇ ರೈತರಿಗೆ ಸಂತಸದ ಸುದ್ದಿ- ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM ಕಿಸಾನ್ 15 ನೇ ಕಂತಿನ ಹಣ

PM Kisan 15th installment

Hindu neighbor gifts plot of land

Hindu neighbour gifts land to Muslim journalist

PM Kisan 15th installment : ದೇಶದ ರೈತರಿಗೆ ದಸರಾ ಹಬ್ಬದ ದಿನವೇ ಸಂತಸದ ಸುದ್ದಿ ಒಂದ ಬಂದಿದೆ. ಅದೇನೆಂದರೆ ಪಿಎಂ ಕಿಸಾನ್(PM Kissan yojana) ಯೋಜನೆಯಡಿ ರೈತರಿಗೆ ಕೊಡಮಾಡುವ 15ನೇ ಕಂತಿನ ಹಣ(PM Kisan 15th installment) ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಈಗ ತಿಳಿದು ಬಂದಿದೆ.

ಹೌದು, ಈ ವರ್ಷದ ವರ್ಷದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 14 ನೇ ಕಂತನ್ನು ಬಿಡುಗಡೆ ಮಾಡಿದ್ದರು. ಇದಾದ ಬಳಿಕ ದೇಶದ ರೈತರೆಲ್ಲರೂ 15 ನೇ ಹಣಕ್ಕಾಗಿ ಎದರು ನೋಡುತ್ತಿದ್ದರು. ಇದೀಗ ಈ 15 ನೇ ಕಂತಿನ ಹಣ ಬರುವ ನವೆಂಬರ್ ತಿಂಗಳ ಕೊನೇ ವಾರದಲ್ಲಿ ರೈತರ ಖಾತೆ ಸೇರೋದು ಬಹುತೇಕ ಫಿಕ್ಸ್ ಆಗಿದೆ. ಹೀಗಾಗಿ ವಿಜಯದಶಮಿ ದಿನವೇ ರೈತರಿಗೆ ಭರ್ಜರಿ ಗುಡ್ ನ್ಯೂಸ್ ದಕ್ಕಿದೆ.

ಅಂದಹಾಗೆ 2019 ರಲ್ಲಿ ಜಾರಿಯಾದ ಯೋಜನೆಯು ಇದೀಗ ಸುಧೀರ್ಘವಾಗಿ ಐದು ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ನೀಡುವ ಹಣವನ್ನು ಹೆಚ್ಚಿಗೆ ಮಾಡುವ ಕುರಿತು ಚಿಂತನೆ ನಡೆಸಿದೆ. ಹೀಗಾಗಿ ಮೂರು ಕಂತುಗಳಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳು ಸದ್ಯ ರೈತರ ಖಾತೆಗೆ ಜಮಾ ಆಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ರೈತರ ಖಾತೆಗೆ ಜಮಾ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: H D kumarswamy: ಸಿದ್ದರಾಮಯ್ಯರ ‘ಸಿದ್ದಲೀಲೆ’ ಬಿಡುಗಡೆ ಮಾಡ್ಲಾ ?! ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ !!