

Chamarajanagara: ಮುಂಗಾರು ಸಮಯ ಅಂದ್ರೆ ಅದು ರೈತರಿಗೆ ಸಂಭ್ರಮದ ಸಮಯ. ಉತ್ತಿ, ಬಿತ್ತಿ ಉತ್ತಮವಾದ ಬೆಳೆ ಪಡೆದು ನೆಮ್ಮದಿಯ ಬದುಕಿನ ಕನಸು ಕಾಣೋ ಸಮಯ. ಆ ಕನಸನ್ನು ಆತ ನನಸು ಮಾಡಲು ಹಗಲಿರುಳು ದುಡಿಯುತ್ತಾನೆ. ಕೊನೆಗೆ ಮೂರ್ನಾಲ್ಕು ತಿಂಗಳ ಅವಿರತ ಶ್ರಮದಿಂದ ರೈತನ ಕನಸು ಈಡೇರುತ್ತದೆ. ಆದರೆ ಇಷ್ಟೆಲ್ಲಾ ಮಾಡಿಯೂ ಪಟ್ಟ ಶ್ರಮಕ್ಕೆ ಫಲ ಸಿಗದಿದ್ದರೆ ಹೇಗಾಗಬಹುದು ಹೇಳಿ. ಅಂತದೇ ವಿಚಿತ್ರ ಘಟನೆ ಇದೀಗ ಚಾಮರಾಜನಗರದಲ್ಲಿ(Chamarajanagara) ನಡೆದಿದೆ.
ಹೌದು, ಇಂಥಹ ಒಂದು ವಿಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಬಿ.ಜಿ. ದೊಡ್ಡಿ ಗ್ರಾಮದ ಷಡಕ್ಷರಿ ಎಂಬ ರೈತನೋರ್ವ ಕಳಪೆ ಬಿತ್ತನೆ ಬೀಜದಿಂದ ಕಂಗಾಲಾಗಿದ್ದಾನೆ. ಬೀಟ್ರೂಟ್ ಬೆಳೆ ಬೆಳೆಯಲು ಬೀಜ ಬಿತ್ತನೆ ಮಾಡಿದ್ದಾನೆ. ಆದರೆ ಬಂದದ್ದು ಮಾತ್ರ ಮೂಲಂಗಿ ರೀತಿಯ ಬೇಳೆ ಇದರಿಂದ ಶಾಕ್ ಆದ ರೈತ ತೀವ್ರವಾಗಿ ನೊಂದಿದ್ದಾನೆ.
ಏನಿದು ಘಟನೆ?
ಷಡಕ್ಷರಿ ಎಂಬ ರೈತ ಒಡೆಯರಪಾಳ್ಯ ಗ್ರಾಮದ ನಾಗಜ್ಯೋತಿ ಆಗ್ರೋ ಸೆಂಟರ್ ನಲ್ಲಿ 9,800 ರೂ. ಕೊಟ್ಟು ಸಾಕಾಟಾ ಎಂಬ ಕಂಪನಿಯ ಬೀಟ್ರೂಟ್ ಬೀಜ ಖರೀದಿಸಿ ಒಂದುವರೆ ಎಕರೆಯಲ್ಲಿ ಬೀಟ್ರೂಟ್ ಬಿತ್ತಿದ್ದು ಬೀಟ್ರೂಟ್ ಬೆಳೆಯದೆ ಮೂಲಂಗಿ ಬಂದಿರುವುದರಿಂದ 5 ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದ ರೈತ ಷಡಕ್ಷರಿ ಕಂಗಾಲಾಗಿದ್ದಾರೆ.
ಆಗ್ರೋ ಸೆಂಟರ್, ಬೀಜ ಕಂಪನಿ ಟೋಪಿ..?
ಈ ಬಗ್ಗೆ ರೈತ ಆಗ್ರೋ ಸೆಂಟರ್ ಮಾಲೀಕನಿಗೆ ತಿಳಿಸಿದರೆ ಸಮಸ್ಯೆಯನ್ನು ಬಗೆಹರಿಸುವ ಬದಲು ಏಕವಚನದಲ್ಲಿ ನಿಂದಿಸಿ ಕಳುಹಿಸಿದ್ದಾರೆ ಎಂದು ರೈತ ಆರೋಪಿಸುತ್ತಿದ್ದಾರೆ. ಇನ್ನು ಸಂಬಂಧಪಟ್ಟ ಸಾಕಾಟಾ ಕಂಪನಿ ಜಮೀನಿಗೆ ಬಂದು ಪರಿಶೀಲನೆ ಮಾಡಿ ತೆರಳಿದರೂ ಯಾವುದೇ ಪರಿಹಾರ ನೀಡುವ ಬಗ್ಗೆ ಮಾತು ಆಡುತ್ತಿಲ್ಲ. ಕಳೆದ ವರ್ಷ ಅತಿ ಹೆಚ್ಚು ಮಳೆ ಬಿದ್ದು ಬೆಳೆದಿದ್ದ ಬೆಳೆಯಲ್ಲ ಕೊಳೆತು ಹೋಗಿ ನಷ್ಟ ಉಂಟಾಗಿತ್ತು. ಈ ಬಾರಿ ಇರುವಷ್ಟು ನೀರಿನಲ್ಲಿ ಬೆಳೆದಿದ್ದ ಬೀಟ್ರೂಟ್ ಮೂಲಂಗಿ ಆಗಿರುವುದು ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಸೂಕ್ತ ಪರಿಹಾರ ಕೊಡಿಸಬೇಕು ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತ ಷಡಕ್ಷರಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: PM Modi: ‘ಎದೆ ಬಡಿದುಕೊಂಡು ಅಳಲು ಇನ್ನೂ ಸಾಕಷ್ಟು ಸಮಯವಿದೆ’- ಮೋದಿ | ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಹೇಳಿಕೆ













