Home latest 20ರ ಹರೆಯದ ಯುವತಿ ಸೆಲ್ಫಿ ತೆಗೆದು ಸ್ಟೇಟಸ್ ಗೆ ಹಾಕಿದ್ಳು| ಸ್ಟೇಟಸ್ ನೋಡಿ ಗಾಬರಿಗೊಂಡ, ಸಹೋದರ...

20ರ ಹರೆಯದ ಯುವತಿ ಸೆಲ್ಫಿ ತೆಗೆದು ಸ್ಟೇಟಸ್ ಗೆ ಹಾಕಿದ್ಳು| ಸ್ಟೇಟಸ್ ನೋಡಿ ಗಾಬರಿಗೊಂಡ, ಸಹೋದರ ಬಂದು ನೋಡಿದಾಗ….ನಡೆದಿತ್ತು ದುರಂತ

Hindu neighbor gifts plot of land

Hindu neighbour gifts land to Muslim journalist

ಯುವತಿಯೊಬ್ಬಳು ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು, ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್ ಕಾಲನಿ ಸಮೀಪವಿರುವ ಕಲ್ಲು ಕ್ವಾರಿಯಲ್ಲಿ ನಡೆದಿದೆ.

ಪ್ರವೀಣಾ (20) ಎಂಬಾಕೆಯೇ, ಮೃತ ಯುವತಿ.

ಈ ಯುವತಿ ಸಾಯುವ ಮೊದಲು, ಕಲ್ಲು ಕ್ವಾರಿಗೆ ತಲುಪಿ ನಂತರ ಒಂದು ಸೆಲ್ಫಿ ತೆಗೆದುಕೊಂಡು, ಸ್ಟೇಟಸ್ ಗೆ ಹಾಕಿದ್ದಾಳೆ. ಇದನ್ನು ನೋಡಿ ಗಾಬರಿಗೊಂಡ ಆಕೆಯ ಸಹೋದರ ಅಲ್ಲಿಗೆ ಬಂದಾಗ, ಆಕೆ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹಾರಿದ್ದಾಳೆ. ಕೂಡಲೇ ಆಕೆಯ ಸಹೋದರ ಕೂಡಾ ಜಿಗಿದಿದ್ದಾನೆ. ಆದರೆ, ಈಜು ಗೊತ್ತಿರದ ಕಾರಣ ಸಹೋದರಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ.

ಕೂಡಲೇ, ಪ್ರವೀಣಾಳ ಸಹೋದರನ್ನು ನೋಡಿದ ಸ್ಥಳೀಯರು ತಕ್ಷಣ ಕ್ವಾರಿ ಒಳಗೆ ಹಗ್ಗ ಎಸೆದಿದ್ದು, ಅದನ್ನು ಹಿಡಿದುಕೊಂಡು ಆತ ಮೇಲೆ ಬಂದಿದ್ದಾನೆ. ಆದರೆ, ಆತನ ಸಹೋದರಿ ಪ್ರವೀಣಾ ಸಾವಿಗೀಡಾಗಿದ್ದು, ಮನೆ ಮಂದಿಗೆ ದಿಗ್ಭ್ರಮೆಯಾಗಿದೆ. ಮನೆಯ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಈಗ ಮೌನ ಆವರಿಸಿದೆ.

ಪ್ರವೀಣಾ ಸುಲ್ತಾನ ಬಥೇರಿ ನರ್ಸಿಂಗ್ ಸ್ಕೂಲ್ ನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಅಲ್ಲಿಯೇ ಇದ್ದ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.