Home Interesting ಡ್ರಿಂಕ್ ಆಂಡ್ ಡ್ರೈವ್ ನಿಂದ ಆಗೋ ಅಪಘಾತಗಳನ್ನು ತಡೆಯಲೆಂದೇ ಸಿದ್ಧವಾಗಿದೆ ವಿಶೇಷ ಹೆಲ್ಮೆಟ್ | ಕುಡಿದು...

ಡ್ರಿಂಕ್ ಆಂಡ್ ಡ್ರೈವ್ ನಿಂದ ಆಗೋ ಅಪಘಾತಗಳನ್ನು ತಡೆಯಲೆಂದೇ ಸಿದ್ಧವಾಗಿದೆ ವಿಶೇಷ ಹೆಲ್ಮೆಟ್ | ಕುಡಿದು ಸ್ಟಾರ್ಟ್ ಮಾಡಿದ್ರೂ ರನ್ ಆಗಲ್ಲ ಈ ಬೈಕ್

Hindu neighbor gifts plot of land

Hindu neighbour gifts land to Muslim journalist

ವಾಹನಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅಪಘಾತಗಳ ಸಂಖ್ಯೆಯೂ ಏರಿಕೆ ಆಗುತ್ತಲೇ ಹೋಗುತ್ತಿದೆ. ಎಲ್ಲಿ ನೋಡಿದರು ದಿನದಲ್ಲಿ ಒಂದು ಬಾರಿಯಾದರೂ ಅಪಘಾತ ಎಂಬ ಪದವನ್ನು ಕೇಳದೆ ಇರಲು ಸಾಧ್ಯವಿಲ್ಲ. ಅದರಲ್ಲೂ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಯೇ ಅಧಿಕವಾಗಿದೆ. ಇಂತಹ ಅಪಘಾತಗಳನ್ನು ತಪ್ಪಿಸಲೆಂದೆ ಶಾಲಾ ಮಕ್ಕಳು ಹೊಸ ಹೆಲ್ಮೆಟ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಹೌದು. ಈ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸಿದರೆ ಡ್ರಿಂಕ್ ಅಂಡ್ ಡ್ರೈವ್‌ಗೆ ಕಡಿವಾಣ ಹಾಕಬಹುದು. ಡ್ರಿಂಕ್ ಆಯಂಡ್ ಡ್ರೈವ್ ನಿಂದ ಆಗುವ ಅಪಘಾತಗಳನ್ನು ತಡೆಯಲು ಈ ವಿಶೇಷ ಹೆಲ್ಮೆಟ್ ಸಿದ್ಧಪಡಿಸಿದ್ದಾರೆ. ರಾಂಚಿಯ ಸೇಂಟ್ ಕ್ಸೇವಿಯರ್ ಶಾಲೆಯ ಅವಿರಾಜ್ ಸಿಂಗ್, ವತ್ಸಲ್ ಸರೋಗಿ, ಪಾರ್ಥ್ ಮತ್ತು ಆರವ್ ಪೊದ್ದಾರ್ ಎಂಬ 4 ಮಕ್ಕಳು ಈ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಮಕ್ಕಳು ಹೆಲ್ಮೆಟ್‌ಗೆ ವಿಶೇಷ ಚಿಪ್ ಒಂದನ್ನು ಅಳವಡಿಸಿದ್ದಾರೆ. ಈ ಚಿಪ್‌ನೊಂದಿಗೆ ಸೆನ್ಸಾರ್‌ಗಳನ್ನು ಕೂಡ ಹೆಲ್ಮೆಟ್ ಒಳಗೆ ಇರಿಸಲಾಗಿದೆ. ಇದರಿಂದಾಗಿ ಮದ್ಯ ಸೇವಿಸಿ ಬೈಕ್ ಚಲಾಯಿಸುವವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ.

ಹೆಲ್ಮೆಟ್ ಕಳುಹಿಸಿದ ಎಚ್ಚರಿಕೆಯಿಂದ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಈ ಮೂಲಕ ಬೈಕ್‌ನ ಸಂಪೂರ್ಣ ನಿಯಂತ್ರಣವನ್ನು ಹೆಲ್ಮೆಟ್ ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮತ್ತೊಂದು ಚಿಪ್ ಅನ್ನು ಅಭಿವೃದ್ಧಿಪಡಿಸಲು ಬಯಸುತ್ತಿದ್ದು, ಈ ಹೆಲ್ಮೆಟ್ ಧರಿಸದಿದ್ದರೆ ಅಥವಾ ಸರಿಯಾಗಿ ಧರಿಸದಿದ್ದರೂ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹೆಲ್ಮೆಟ್‌ನಲ್ಲಿರುವ ಚಿಪ್ ಆಲ್ಕೋಹಾಲ್ ವಾಸನೆಯನ್ನು ಪತ್ತೆ ಮಾಡುವುದಲ್ಲದೆ, ಬೈಕ್ ಸ್ಟಾರ್ಟ್ ಆಗುವುದನ್ನು ತಡೆಯುತ್ತದೆ. ಇದರಿಂದಾಗಿ ಹೆಲ್ಮೆಟ್ ಇಲ್ಲದೆ ಬೈಕು ಪ್ರಾರಂಭವಾಗುವುದಿಲ್ಲ.

ಆದರೆ, ಇದು ಭಾರತಕ್ಕೆ ಕಾಲಿಡುತ್ತದೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದು ನೀವು ಬೈಕ್ ರೈಡಿಂಗ್ ವೇಳೆ ಸುರಕ್ಷತಾ ತಂತ್ರಜ್ಞಾನದ ಆಸಕ್ತಿದಾಯಕ ಭಾಗವಾಗಿದೆ. ಕುಡಿದು ಬೈಕ್ ಚಲಾಯಿಸಲು ಬಂದರೂ ಈ ಬೈಕ್ ಸ್ಟಾರ್ಟ್ ಆಗುವುದೇ ಇಲ್ಲ. ಈ ಮೂಲಕ ಅಪಘಾತದಿಂದ ಪಾರಾಗಬಹುದಾಗಿದೆ.