Home latest ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ‘ಎಸ್ಟಿಲಾ’ | ಇನ್ನೇನಿದ್ದರೂ ಎಲೆಕ್ಟ್ರಿಕ್ ಗಾಡಿಗಳದ್ದೇ ಹವಾ !

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ‘ಎಸ್ಟಿಲಾ’ | ಇನ್ನೇನಿದ್ದರೂ ಎಲೆಕ್ಟ್ರಿಕ್ ಗಾಡಿಗಳದ್ದೇ ಹವಾ !

Hindu neighbor gifts plot of land

Hindu neighbour gifts land to Muslim journalist

ಬೆಳವಣಿಗೆಯತ್ತ ಹೆಜ್ಜೆ ಹಾಕುತ್ತಿರುವುದರಲ್ಲಿ ನಮ್ಮ ದೇಶ ವೇಗವಾಗಿ ಸಾಗುತ್ತಿದೆ. ಅನೇಕ ಆವಿಷ್ಕಾರಗಳು ಕಂಡು ಬರುತಿದ್ದು, ಅದರಲ್ಲೂ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ತಯಾರಿಕೆಯನ್ನು ನೋಡಬಹುದು.

ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಅದಕ್ಕೆ ಅನುಗುಣವಾಗಿ ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಿಭಾಗದಲ್ಲಿ ಹೊಸ ಮಾದರಿಗಳ ವಾಹನಗಳನ್ನು ಪರಿಚಯಿಸುವಲ್ಲಿ ನಿರತರಾಗಿದ್ದಾರೆ.

ಇದೀಗ ದೆಹಲಿ ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಟಿಎನ್ಆರ್ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಟೆಲ್ಲಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು,ಕಂಪನಿಯು ಸ್ಕೂಟರ್ ಹೆಸರನ್ನು ಬದಲಾಯಿಸಿ ‘ಎಸ್ಟಿಲಾ’ ಎಂದು ಮರು ಪರಿಚಯಿಸಿದೆ.

ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಅವಲಂಬಿಸಿದ್ದರಿಂದ, ಇದರ ಬೇಡಿಕೆಯು ಹೆಚ್ಚಾಗುತ್ತಿದೆ ಎನ್ನಬಹುದು. ಪೆಟ್ರೋಲ್ ಗಳ ಬೆಲೆ ಏರುತ್ತಿರುವ ಈ ಸಮಯದಲ್ಲಿ ಇಂತಹ ವಾಹನಗಳೇ ಸೂಕ್ತ ಎಂಬುದು ಅನೇಕರ ಮನೋಭಾವನೆ.

TNR ಕಂಪೆನಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸೊಗಸಾದ ರೆಟ್ರೊ ನೋಟ ಲುಕ್​ ನೀಡಲಾಗಿದೆ. ಸುಧಾರಿತ ಫೀಚರ್ಸ್​ ಮತ್ತು ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದ್ದು, ದೈನಂದಿನ ಬಳಕೆಗೆ ಈ ಸ್ಕೂಟರ್ ಸೂಕ್ತ ಆಯ್ಕೆ ಎಂದು ಕಂಪೆನಿ ಹೇಳಿಕೊಂಡಿದೆ.

ಅದರಂತೆ ಎಸ್ಟಿಲಾ ಸ್ಕೂಟರ್​ನಲ್ಲಿ ದುಬಾರಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ನೀಡಲಾಗಿರುವ ಕೀಲೆಸ್ ಎಂಟ್ರಿ, ಆಂಟಿ ಥೆಫ್ಟ್ ಅಲಾರಂ, ಯುಎಸ್‌ಬಿ ಚಾರ್ಜಿಂಗ್ ಮತ್ತು ಸ್ವೈಪ್ ಸಿಸ್ಟಂನಂತಹ ಫೀಚರ್​ಗಳನ್ನು ಇದರಲ್ಲೂ ನೀಡಿರುವುದು ವಿಶೇಷ.

TNR ಎಸ್ಟಿಲಾ ಸ್ಕೂಟರ್​ ಎರಡು ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ. ಒಂದರಲ್ಲಿ 60V 28 ah ಸಾಮರ್ಥ್ಯದ ಲಿಡ್ ಆಸಿಡ್ ಬ್ಯಾಟರಿ, ಮತ್ತೊಂದರಲ್ಲಿ ಲಿಥಿಯಂ ಐ-ಆನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಲೀಡ್ ಆಸಿಡ್ ಬ್ಯಾಟರಿ ಸಂಪೂರ್ಣ ಚಾರ್ಜ್​ ಮಾಡಿಕೊಳ್ಳಲು 6 ರಿಂದ 8 ಗಂಟೆ ತೆಗೆದುಕೊಳ್ಳಲಿದೆ. ಇದೇ ವೇಳೆ ಲಿಥಿಯಂ ಐ-ಆನ್ ಬ್ಯಾಟರಿ ಸುಮಾರು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

ಇನ್ನು ಈ ಸ್ಕೂಟರ್​ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್​ ಮಾಡಿಕೊಂಡರೆ ಸುಮಾರು 70 ರಿಂದ 80 ಕಿಮೀ ಮೈಲೇಜ್ (ರೇಂಜ್) ಸಿಗಲಿದೆ ಎಂದು ಟಿಎನ್​ಆರ್ ಕಂಪೆನಿ ಹೇಳಿಕೊಂಡಿದೆ.

ಅತ್ಯಂತ ಆಕರ್ಷಕ ಲುಕ್ ಮತ್ತು ಶಕ್ತಿಯುತ ಎಲೆಕ್ಟ್ರಿಕ್ ಮೋಟಾರ್‌ ಹೊಂದಿರುವ ಈ ಸ್ಕೂಟರ್‌ನ ಆರಂಭಿಕ ಬೆಲೆ ಕೇವಲ 50,000 ರೂಪಾಯಿ (ಎಕ್ಸ್ ಶೋ ರೂಂ ಬೆಲೆ, ದೆಹಲಿ). ಪ್ರಸ್ತುತ ರಸ್ತೆಗಿಳಿದಿರುವ ಆಕರ್ಷಕ ಎಲೆಕ್ಟ್ರಿಕ್​ ಸ್ಕೂಟರ್​ಗಳಲ್ಲಿ ಎಸ್ಟಿಲಾ ಅತೀ ಕಡಿಮೆಯ ಎಲೆಕ್ಟ್ರಿಕ್ ಸ್ಕೂಟರ್ ಎನಿಸಿಕೊಂಡಿದೆ.