Home Karnataka State Politics Updates Government holiday: ರಾಮ ಮಂದಿರ ಉದ್ಘಾಟನೆ- ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಘೋಷಣೆ

Government holiday: ರಾಮ ಮಂದಿರ ಉದ್ಘಾಟನೆ- ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಘೋಷಣೆ

Government holiday

Hindu neighbor gifts plot of land

Hindu neighbour gifts land to Muslim journalist

public holiday: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದ್ದು ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಇದೀಗ ಬಾಲ ರಾಮನ ಮೂರ್ತಿಯು ಗರ್ಭಗುಡಿ ಪ್ರವೇಶಿಸಿದ್ದು, ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಹಾರಾಷ್ಟ್ರ(Maharastra) ಸರ್ಕಾರವು ಜನವರಿ 22ರಂದು ತಮ್ಮ ರಾಜ್ಯದ ಸಾರ್ವಜನಿಕ ರಜೆ ಘೋಷಿಸಿದೆ.

ಹೌದು, ರಾಮ ಮಂದಿರ(Rama mandira) ಉದ್ಘಾಟನೆಗೆ ದೇಶದ ಹಲವು ರಾಜ್ಯಗಳು ರಜೆ ಘೋಷಿಸಿವೃ. ಇದೀಗ ಮಹಾರಾಷ್ಟ್ರದ ಸರ್ಕಾರ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆ ಜನವರಿ 22ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆ(public holiday) ಘೋಷಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಗೋವಾ ಸರ್ಕಾರಗಳ ಬಳಿಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಕೂಡ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.

ಇನ್ನು ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಕೇಂದ್ರವು ‘ಅರ್ಧ ದಿನ’ ಘೋಷಿಸಿದೆ.