Chat GPT: ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಅನ್ನೋ ಪ್ರಶ್ನೆಗೆ ಚಾಟ್ ಜಿಪಿಟಿ ನೀಡಿದೆ ಜಾಣ ಉತ್ತರ !

Chat GPT Smart Answere: ಕೆಲವರಿಗೆ ಉತ್ತರ ಸಿಗದಂತಹ ಕೆಲವೊಂದು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ. ಅಂತಹ ಉತ್ತರ ಸಿಗದ ಪ್ರಶ್ನೆಗಳಲ್ಲಿ ಈ ಕೋಳಿ (Hen) ಮೊಟ್ಟೆಯ (Egg) ಕಥೆ ಕೂಡ ಒಂದಾಗಿದೆ. ಜನರನ್ನೇ ಒಂದು ಮಟ್ಟಿಗೆ ತಳಮಳ ಮಾಡಿಸುವಂತಹ ಪ್ರಶ್ನೆ. ಅದೇನಪ್ಪಾ ಅಂದ್ರೆ, ಎಲ್ಲರೂ ಕೇಳೋದು ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಅಂತ. ನಿಮ್ಮ ಲೆಕ್ಕದಲ್ಲಿ ಯಾವುದು ಮೊದಲು ಅಂತ ಆಗುತ್ತೆ. ಈ ಪ್ರಶ್ನೆಯನ್ನೂ ಕೇಳಿದಾಗಲೇ ಯಾವುದು ಮೊದಲು ಇರಬಹುದು ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟುಕೊಳ್ಳುತ್ತದೆ ಅಲ್ವಾ. Chat GPT ಅಂದ್ರೆ artificial intelligence ಅಂದ್ರೆ ಕೃತಕ(Chat GPT Smart Answere) ಬುದ್ದಿಮತ್ತೆ ಈ ಬಗ್ಗೆ ಏನು ಹೇಳಿದೆ ಎಂದು ತಿಳಿದುಕೊಳ್ಳಬೇಕು ಅನ್ನೋ ಆಸಕ್ತಿ ನಿಮಗಿದೆಯಾ ? ಹಾಗಾದ್ರೆ ಈ ಲೇಖನದತ್ತ ಒಮ್ಮೆ ಕಣ್ಣು ಹಾಯಿಸಿ.

ಹೌದು, ವೈಜ್ಞಾನಿಕವಾಗಿ ಈ ವಿಷಯದ ಬಗ್ಗೆ ಹೇಳುವುದಾದರೆ, ಮನುಷ್ಯರನ್ನೇ ಒಂದು ಮಟ್ಟಿಗೆ ತಳಮಳಗೊಳಿಸುವಂತಹ ಈ ಪ್ರಶ್ನೆಗೆ ಸಾಮಾನ್ಯವಾಗಿ ಜೀವಶಾಸ್ತ್ರದ ನೈಸರ್ಗಿಕ ಪ್ರಕ್ರಿಯೆಗಳ ಆಧಾರದ ಮೇಲೆ ಉತ್ತರಿಸಲಾಗುವುದಿಲ್ಲ. ಏಕೆಂದರೆ ಜೀವಶಾಸ್ತ್ರದ ಪ್ರಕಾರ ನೋಡುವುದಾದರೆ ಕೋಳಿ ಮೊಟ್ಟೆಗಳನ್ನು ಇಡಲು ಮೊಟ್ಟೆಯ ಫಲೀಕರಣದ ಅಗತ್ಯ ಬಹಳಷ್ಟು ಇದೆ. ಅಂದ್ರೆ ಮತ್ತೆ ಮೊಟ್ಟೆಗೆ ಫಲ ನೀಡಲು ಕೋಳಿ ಬೇಕಾಗತ್ತೆ !

ಎಲ್ಲಿಯೂ ಇದಕ್ಕೆ ಸರಿಯಾದ ಉತ್ತರ ಸಿಗದೇ ಇದ್ದಾಗ, ಏನು ಮಾಡೋದು ಅಂತ ಈ ಚಾಟ್ ಜಿಪಿಟಿ (Chat GPT) ಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ ತಮಾಷೆಯಾಗಿ ಉತ್ತರ (funny answer) ಕೊಟ್ಟಿದೆ ನೋಡಿ GPT.

ಅದೇನಂದ್ರೆ, ” ಜಗತ್ತಿನಾದ್ಯಂತ ಬೇರೆ ಬೇರೆ ಬಝ್ ನ ಮೂಲಕ ಜನರಿಗೆ ಕಾಡುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿರುವ ವಿಷಯ ಇದೀಗಾಗಲೇ ಕಂಡು ಬರುತ್ತಿದೆ. ಅದೇ ರೀತಿ ಇಂತಹ ಒಂದು ಪ್ರಶ್ನೆಗಳಲ್ಲಿ ಜನರನ್ನೇ ಕನ್ಫ್ಯೂಸ್ ಮಾಡುವಂತಹ ಪ್ರಶ್ನೆ ಮೂಡಿತು ನೋಡಿ ” ಎಂದು ಒಂದು ಬಾರಿ ಉಸಿರೆಳೆದುಕೊಂದು ನಿಲ್ಲಿಸಿದೆ ಕಂಪ್ಯೂಟರ್ !!

ಮುಂದೆ Chat GPT ವಿಚಿತ್ರ ಉತ್ತರವನ್ನು ನೀಡಿದೆ. ” ಈ ಪ್ರಶ್ನೆಗೆ ಉತ್ತರವು ವೈಜ್ಞಾನಿಕ ಅಥವಾ ವೈದಿಕ ಸಂಗತಿಗಳನ್ನು ಆಧರಿಸಿಲ್ಲದ ಕಾರಣ, ಕೋಳಿ ಅಥವಾ ಮೊಟ್ಟೆ ಯಾವುದು ಮೊದಲು ಬಂದಿತು ಎಂದು ಯಾರಿಗೂ ತಿಳಿದಿಲ್ಲ ” ಎಂದು ಚಾಟ್ ಜಿಪಿಟಿ ತಮಾಷೆ (funny) ಕಾಣುವಂತಹಾ ರೀತಿಯ ಉತ್ತರ ನೀಡಿದೆ. ತನ್ನ ಉತ್ತರದಲ್ಲಿ, ಕಠಿಣ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರದ ಜತೆಗೇ ಭಾರತದ ವೈದಿಕ ಸಂಸ್ಕೃತಿಯ ಉತ್ತರಗಳನ್ನೂ ಗಣನೆಗೆ ತೆಗೆದುಕೊಂಡದ್ದು ವಿಶೇಷ.

ಸಾಮಾನ್ಯವಾಗಿ ಕೆಲವರು ನಂಬಿರೋದು ಮೊಟ್ಟೆ (egg) ಮೊದಲು ತದನಂತರ ಕೋಳಿ ಎಂದು. ಹಾಗೆಯೇ ಇನ್ನೂ ಕೆಲವರು ಕೋಳಿ ಮೊದಲು ನಂತರ ಕೋಳಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿತು. ಇನ್ನೂ ಕೆಲವರಂತೂ ಕೇಳೋದೇ ಬೇಡ ಬಿಡಿ, ಕೋಳಿ ಮತ್ತು ಮೊಟ್ಟೆ ಎರಡು ಒಂದೇ ಸಮಯದಲ್ಲಿ ಪ್ರಕೃತಿ ರಚನೆಯಿಂದ ಹುಟ್ಟಿಕೊಂಡಿತು ಅಂತಾರೆ. ಒಬ್ಬೊಬ್ಬರದ್ದು ಒಂದೊಂದು ದೃಷ್ಟಿಕೋನ ಆದರೆ ಯಾವುದು ನಿಜ ಎಂಬುದು ಇಂದಿಗೂ ಯಾರಿಗೂ ತಿಳಿದೇ ಇಲ್ಲ ನೋಡಿ. ಆದ್ದರಿಂದ ಈ ಪ್ರಶ್ನೆಗೆ ಯಾವುದೇ ರೀತಿಯ ಸ್ಪಷ್ಟ ಉತ್ತರವೇ ಇಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ ಉತ್ತರವೂ (answer) ಎಂದು ಸಿಗದಂತಹ ಪ್ರಶ್ನೆ ಇದಾಗಿದೆ. ಇಂತಹಾ ಉತ್ತರವಿಲ್ಲದ ಪ್ರಶ್ನೆಗಳು ಬಂದಾಗ ತಮಾಷೆಯ ಉತ್ತರಗಳೂ ಉದ್ಭವ ಆಗುತ್ತವೆ. ” ಕೋಳಿ ಮೊದಲೋ, ಮೊಟ್ಟೆ ಮೊದಲೋ ಪ್ರಶ್ನೆ ಅಷ್ಟು ತಲೆಕೆಡಿಸಿಕೊಳ್ಳೋ ಕಷ್ಟದ ಪ್ರಶ್ನೆ ಅಲ್ಲ. ಯಾವುದನ್ನ ಮೊದ್ಲು ಆರ್ಡರ್, ಮಾಡ್ತೀಯಾ ಅದು ಮೊದ್ಲು ಬರತ್ತೆ ” ಅನ್ನೋದು ಇದ್ರ ಉತ್ರ.

 

ಇದನ್ನು ಓದಿ: D Boss Apology: ಕೊನೆಗೂ ಮಾಧ್ಯಮಗಳ ಕ್ಷಮೆ ಕೇಳಿದ ನಟ ದರ್ಶನ್, ಅವತ್ತು ಮುನಿಸು ಯಾಕಾಗಿತ್ತು ಗೊತ್ತಾ ? 

Leave A Reply

Your email address will not be published.