BMW Bike : ಬಿಎಂಡಬ್ಲ್ಯು ಕಂಪನಿಯ ಈ ಬೈಕ್ ಬೆಲೆ 35 ಲಕ್ಷ! ಯಾಕೆ ಇಷ್ಟು ದರ ?

BMW Bike: ಬೈಕ್ ಪ್ರಿಯರು ಯಾರಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಬೈಕ್ ಅಂದ್ರೆ ಭಾರೀ ಇಷ್ಟ. ಮಾರುಕಟ್ಟೆಯಲ್ಲೂ ವಿವಿಧ ವಿನ್ಯಾಸದ ಅತ್ಯುತ್ತಮ ಫೀಚರ್ ಇರೋ ಹಲವು ಬ್ರ್ಯಾಂಡ್ ನ ಬೈಕ್ ಗಳಿವೆ. ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಬೈಕ್ ಖರೀದಿಗೆ ಹೋದರೆ ಬೆಲೆಯ ಚಿಂತೆ. ಹೌದು, ಬಿಎಂಡಬ್ಲ್ಯು ಕಂಪನಿಯ ಈ ಬೈಕ್ (BMW Bike) ಬೆಲೆ 35 ಲಕ್ಷ. ಯಾಕೆ ಇಷ್ಟು ದರ ಗೊತ್ತಾ?

ಜರ್ಮನಿ (Germany) ಮೂಲದ ಕಂಪನಿ ಬಿಎಮ್​ಡಬ್ಲ್ಯು ದುಬಾರಿ ಬೆಲೆಯ ಬೈಕ್​ಗಳನ್ನೂ (BMW Bike) ತಯಾರಿಸುತ್ತದೆ. ಈ ಕಂಪನಿ ತಯಾರಿಸಿರುವ ಆರ್​ 18 ಟ್ರಾನ್ಸ್​ಕಾಂಟಿನೆಂಟ್​ ಬೈಕ್ ನ ಬೆಲೆ 35 ಲಕ್ಷ ರೂಪಾಯಿ. ಇದು ಭಾರತದಲ್ಲೂ ಬಿಡುಗಡೆಯಾಗಿದೆ. ಈ ಬೈಕ್ ನ ಎಕ್ಸ್​ಶೋ ರೂಮ್​ ಬೆಲೆ 31.50 ಲಕ್ಷ ರೂಪಾಯಿ ಆಗಿದ್ದು, ತೆರಿಗೆ ಹಾಗೂ ಇನ್ಸ್ಯುರೆನ್ಸ್​ ಸೇರಿ 35 ಲಕ್ಷ ರೂಪಾಯಿಗಿಂತ ಹೆಚ್ಚಿದೆ.

ಬಿಎಂಡಬ್ಲ್ಯು ಆರ್​18 ನಲ್ಲಿ ರೇನ್​, ರೋಲ್​ ಆಯಂಡ್​ ರಾಕ್​ ಎಂಬ ಮೂರು ರೈಡಿಂಗ್​ ಮೋಡ್​ಗಳಿವೆ. ರೋಲ್​ ಮೋಡ್​ನಲ್ಲಿ ಸೆಫ್ಟಿ ಫೀಚರ್​ಗಳು ಹೆಚ್ಚು ಕಾರ್ಯನಿರ್ವಹಿಸುತ್ತದೆ. ರಾಕ್​ ಮೋಡ್​ನಲ್ಲಿ ಆಟೋಮ್ಯಾಟಿಕ್​ ಸ್ಟೆಬಿಲಿಟಿ ಕಂಟ್ರೋಲ್​ ವ್ಯವಸ್ಥೆಯಿದೆ. ಕ್ರೂಸ್​ ಕಂಟ್ರೋಲ್​, ಟ್ರ್ಯಾಕ್ಷನ್ ಕಂಟ್ರೋಲ್​, ಡೈನಾಮಿಕ್​ ಎಂಜಿನ್​ ಬ್ರೇಕ್ ಕಂಟ್ರೋಲ್​, ಹಿಲ್​ ಸ್ಟಾರ್ಟ್​ ಕಂಟ್ರೋಲ್​, ಕೀ ಲೆಸ್​ ರೈಡ್​ ಮತ್ತಿತರ ಫೀಚರ್​ಗಳಿವೆ. ಮುಂಭಾಗದಲ್ಲಿ ಟ್ವಿನ್​ ಡಿಸ್ಕ್​ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್​ ಡಿಸ್ಕ್​ ಬ್ರೇಕ್ ಇದೆ.

ಬಿಎಂಡಬ್ಲ್ಯು ಆರ್​18 ಟ್ರಾನ್​​ಕಾಂಟಿನೆಂಟನ್​​ 1802 ಸಿಸಿಯ (BMW R 18 Transcontinental) ಎಂಜಿನ್​ನಲ್ಲಿ ಎರಡು ಸಿಲಿಂಡರ್​ಗಳಿವೆ ಹಾಗೂ ಏರ್​ಕೂಲ್ಡ್​ ತಾಂತ್ರಿಕತೆ ಹೊಂದಿದೆ. ಇದು 427 ಕೆ.ಜಿ ಭಾರವಿದ್ದು, 24 ಲೀಟರ್​ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್​ ನೀಡಲಾಗಿದೆ. ನಾಲ್ಕು ಲೀಟರ್​ ಪೆಟ್ರೊಲ್​ನ ರಿಸರ್ವ್ ಕೆಪಾಸಿಟಿಯೂ ಇದೆ. ಇದು 4750 ಆರ್​ಪಿಎಮ್​ನಲ್ಲಿ 89 ಬಿಎಚ್​​ಪಿ ಪವರ್​ ಬಿಡುಗಡೆ ಮಾಡುತ್ತದೆ. 2000ರಿಂದ 4000 ಆರ್​ಪಿಎಮ್​ ಒಳಗೆ 150 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದು ಆರು ಸ್ಪೀಡ್​ನ ಗೇರ್​ಬಾಕ್ಸ್ ಇದು ಹೊಂದಿದ್ದು, ಆಯಂಟಿ ಹೋಪಿಂಗ್​ ಕ್ಲಚ್ ಕೂಡ ಇದೆ. ಹೆಚ್ಚುವರಿಯಾಗಿ ರಿವರ್ಸ್​ ಗೇರ್​ ಆಯ್ಕೆಯನ್ನೂ ನೀಡಲಾಗಿದೆ.

ಬಿಎಂಡಬ್ಲ್ಯು ಬೈಕ್​ಗಳು ಕಾರುಗಳಂತೆಯೇ ದುಬಾರಿ. ಈ ಬೈಕ್​ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸುರಕ್ಷತಾ ಫೀಚರ್​ಗಳನ್ನು ಒಳಗೊಂಡಿದೆ. ವಿದೇಶದಲ್ಲಿಯೇ ತಯಾರಾಗಿ ಬಂದು ಭಾರತದಲ್ಲಿ ಮಾರಾಟವಾಗುವ ಬೈಕ್​ಗಳಿಗೆ ಅದರ ಮೂಲ ಬೆಲೆಯಷ್ಟೇ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಹೀಗಾಗಿ ಈ ಬೈಕ್ ನ ಬೆಲೆ ದುಬಾರಿಯಾಗಿದೆ.

Leave A Reply

Your email address will not be published.