Chetan Ahimsa: ಇಬ್ಬರು ಪ್ರತಿಭಾವಂತ ನಟರೇ, ಆದರೆ ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ: ಸುದೀಪ್‌, ಪ್ರಕಾಶ್‌ ರಾಜ್‌ಗೆ ಚೇತನ್‌ ಅಹಿಂಸಾ ಟಾಂಗ್‌

Chetan Ahimsa- Kichcha Sudeep : ಕಿಚ್ಚ ಸುದೀಪ್‌(Kiccha Sudeep) ಅವರು ಬಸವರಾಜ ಬೊಮ್ಮಾಯಿ(Basavraj Bommai) ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಈ ವೇಳೆ ಸುದೀಪ್‌ ನಡೆಯನ್ನು ವಿರೋಧಿಸುತ್ತಿರುವ ಪ್ರಕಾಶ್‌ ರಾಜ್‌(Prqkash Raj) ಅವರು ಕಿಚ್ಚನನ್ನು ಕೆಣಕಿ ಕೆಣಕಿ ಟ್ವೀಟ್ ಮಾಡುತ್ತಲೇ ಇದ್ದಾರೆ. ಇದಕ್ಕೆ ನಟ ಚೇತನ್‌ ಅಹಿಂಸಾ(Chetan Ahimsa- Kichcha Sudeep) ಅವರು ಪ್ರತಿಕ್ರಿಯಿಸಿದ್ದು, ಇಬ್ಬರೂ ನಟರಿಗೂ ಟಾಂಗ್‌ ನೀಡಿದ್ದಾರೆ.

ಹೌದು, ಸುದೀಪ್ ಹಾಗೂ ಪ್ರಕಾಶ್ ರಾಜ್ ನಡುವೆ ಪ್ರವೇಶಿಸಿರುವ ಚೇತನ್ ಅವರು ಬಿಜೆಪಿಗೆ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ರವರು ಆಶ್ಚರ್ಯ & ಆಘಾತಕ್ಕೊಳಗಾಗಿದ್ದಾರೆ . ಇದು ಕುತೂಹಲಕಾರಿ ವಿಷಯವಾಗಿದೆ’ ಎಂದು ಚೇತನ್ ಹೇಳಿದ್ದಾರೆ. ಅಲ್ಲದೆ ಇಬ್ಬರು ಪ್ರತಿಭಾವಂತ ನಟರೇ, ಆದರೆ, ಒಬ್ಬರು ಬಿಜೆಪಿ ಪರ, ಮತ್ತೊಬ್ಬರು ಬಿಜೆಪಿ ವಿರೋಧಿ. ಆದರೆ, ಇಬ್ಬರೂ ಜೂಜಿನ ಜಾಹೀರಾತುಗಳ ಮೂಲಕ ಸಾಕಷ್ಟು ಗಳಿಸಿದ್ದಾರೆ ಎಂದು ಕಿಡಿಕಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಇದಲ್ಲದೆ ಈ ಹಿಂದೆ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಚೇತನ್ ಅವರು “ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ ಏಕೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ‘ಮಾರಾಟ’ ಆಗಿದ್ದಾರೆ ಎಂದು ಪ್ರಕಾಶ್ ರಾಜ್ ಅವರಿಗೆ ತಿರುಗೇಟು ನೀಡಿದ್ದರು.

ಅದಲ್ಲದೇ ನೆನಪಿಡಿ, ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದರು. ಅದರ ಜೊತೆ, ನಮ್ಮ ಕರ್ನಾಟಕದ ಬಹುಪಾಲು ಜನರು ತಮ್ಮ ಜಾತಿಯ ಆಧಾರದ ಮೇಲೆ ಮತ ಚಲಾಯಿಸಬಹುದಾದರೆ, ಒಬ್ಬ ಚಲನಚಿತ್ರ ತಾರೆಯೊಬ್ಬರು ಮುಖ್ಯಮಂತ್ರಿಯೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಆಧಾರದ ಮೇಲೆ ಪಕ್ಷದ ಪರವಾಗಿ ಪ್ರಚಾರ ಮಾಡಿದರೆ ಸಮಸ್ಯೆ ಏನು? ಎಂದು ಸುದೀಪ್‌ ಪರ ನಿಲ್ಲುವ ರೀತಿ ಮಾತನಾಡಿದ್ದರು. ಆದರೀಗ ಇಬ್ಬರನ್ನೂ ದೂಷಿಸಿ ಪೋಸ್ಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್‌ ಬೆದರಿಕೆ ಪತ್ರ ಪ್ರಕರಣಕ್ಕೆ ಹೊಸ ಟ್ವಿಸ್ಟ್! ಇದರ ಹಿಂದಿದ್ಯಾ ಮಾಜಿ ಕಾರ್ ಡ್ರೈವರ್ ಹಾಗೂ ಈ ನಿರ್ಮಾಪಕನ ಕೈವಾಡ?

1 Comment
  1. nimabi says

    Thank you very much for sharing, I learned a lot from your article. Very cool. Thanks. nimabi

Leave A Reply

Your email address will not be published.