Home News TRAI : ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್ ನೀಡಿದ TRAI : ಸದ್ಯದಲ್ಲೇ ಈ ಮೊಬೈಲ್ ಸಂಖ್ಯೆ...

TRAI : ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್ ನೀಡಿದ TRAI : ಸದ್ಯದಲ್ಲೇ ಈ ಮೊಬೈಲ್ ಸಂಖ್ಯೆ ಬ್ಯಾನ್!

TRAI

Hindu neighbor gifts plot of land

Hindu neighbour gifts land to Muslim journalist

TRAI: ಇತ್ತೀಚೆಗೆ ಮೊಬೈಲ್ ಫೋನ್ ಗಳಿಗೆ ಸಮಯವೆನ್ನದೆ ಅನಿಯಮಿತವಾಗಿ ಕರೆಗಳು ಮತ್ತು ಮೆಸೇಜ್‌ಗಳು ಬರುವುದರಿಂದ ಜನರಿಗೆ ಅಘಾದ ಕಿರಿ ಕಿರಿ ಅನಿಸುತ್ತಿತ್ತು. ಆದ್ದರಿಂದ ಅನಗತ್ಯವಾದ ಕರೆ ಹಾಗೂ ಮೆಸಜ್‌ಗಳ ಕಿರಿ ಕಿರಿಯನ್ನು ತಪ್ಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್‌ ನೀಡಿದೆ.

ಹೌದು 10 ಅಂಕಿಗಳ ಆಯ್ದ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸಲು ಟ್ರಾಯ್‌ ನಿರ್ಧರಿಸಿದ್ದು, ಟ್ರಾಯ್‌ (TRAI) ನ ಈ ಮಹತ್ವದ ನಿರ್ಧಾರದಿಂದ ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಬಹಳ ನಷ್ಟ ಆಗಲಿದೆ. ಸದ್ಯ ಪ್ರಚಾರದ ಕರೆಗಳಿಗಾಗಿ ಬಳಸಲಾಗುವ ನೋಂದಾಯಿಸದ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್‌ (TRAI) ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.

ಸಾಮಾನ್ಯ ಸಂಖ್ಯೆಗಿಂತ ಭಿನ್ನವಾಗಿರುವ ಟೆಲಿಕಾಂ ಸಂಸ್ಥೆಗಳಿಗೆ ವಿಶೇಷ ಸಂಖ್ಯೆಯನ್ನು ನೀಡಲಾಗಿರುತ್ತದೆ. ಅಂತಹ ಸಂಖ್ಯೆಗಳಿಂದ ಕರೆಗಳು ಅಥವಾ ಮೆಸೆಜ್‌ಗಳು ಬಂದಾಗ, ಅದು ಪ್ರಚಾರದ ಕರೆ ಅಥವಾ ಎಸ್‌ಎಮ್‌ಎಸ್‌ ಎಂದು ಬಳಕೆದಾರರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಇದೀಗ ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೆಜ್‌ಗಳ ಬಗ್ಗೆ ಟ್ರಾಯ್‌ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಬಳಕೆದಾರರಿಗೆ ಅನಗತ್ಯ ಕಿರಿ ಕಿರಿ ನೀಡುವ ಟೆಲಿಮಾರ್ಕೆಟಿಂಗ್ ಪ್ರಚಾರದ ಕರೆಗಳ ಹಾಗೂ ಎಸ್‌ಎಮ್‌ಎಸ್‌ಗಳ ತೊಂದರೆ ತಪ್ಪಿಸಲು ಟ್ರಾಯ್‌ ಕ್ರಮ ಕೈಗೊಳ್ಳಲಿದೆ.

ಪ್ರಸ್ತುತ ಟ್ರಾಯ್‌ ಆದೇಶವನ್ನು ಹೊರಡಿಸಿದ್ದು, ಆದೇಶದ ಪ್ರಕಾರ ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ : JIO Recharge Plan : ಇವು ಜಿಯೋ ಕಂಪನಿ ನೀಡಿರುವ ಬೆಸ್ಟ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಲಿಸ್ಟ್‌ !

ಪ್ರಸ್ತುತ ಟೆಲಿಕಾಂ ರೆಗ್ಯುಲೇಟರಿ ಸಂಸ್ಥೆಯು 30 ದಿನಗಳ ಕಾಲಾವಕಾಶ ನೀಡಿದೆ. ಯಾವುದೇ ಸಂಸ್ಥೆಯು 30 ದಿನಗಳ ಸಮಯದ ಮಿತಿಯ ನಂತರವೂ ಪ್ರಚಾರಕ್ಕಾಗಿ 10 ಸಂಖ್ಯೆಗಳ ಸಾಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಟ್ರಾಯ್ ತಿಳಿಸಿದೆ.

ಸದ್ಯ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ರೂಪಿಸಿರುವ ಈ ನಿಯಮದಿಂದ ಅನಗತ್ಯವಾದ ಕರೆ ಹಾಗೂ ಮೆಸಜ್‌ಗಳ ಕಿರಿ ಕಿರಿಯನ್ನು ತಪ್ಪಿಸಬಹುದಾಗಿದೆ.