Home Technology Music Gadgets : ಸೋನಿ ಕಂಪನಿ ಬಿಡುಗಡೆ ಮಾಡಿದೆ ಹೊಸ ಲುಕ್ ನ ವಾಕ್ ಮ್ಯಾನ್...

Music Gadgets : ಸೋನಿ ಕಂಪನಿ ಬಿಡುಗಡೆ ಮಾಡಿದೆ ಹೊಸ ಲುಕ್ ನ ವಾಕ್ ಮ್ಯಾನ್ ! ಈ ಪ್ರಾಡಕ್ಟ್ ಬಗ್ಗೆ ಎಲ್ಲಾ ವಿವರ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗೆ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ. ಅದಲ್ಲದೆ ಟೆಕ್ನಾಲಜಿ ಕಂಪೆನಿಗಳು ದಿನೇ ದಿನೇ ಹೊಸ ಹೊಸ ಡಿವೈಸ್ಗಳನ್ನು ಪರಿಚಯಿಸುತ್ತಿದೆ. ಮ್ಯೂಸಿಕ್ ಪ್ರಿಯರಿಗೆ ಇಲ್ಲೊಂದು ಸಂತೋಷದ ಸುದ್ದಿ ಇದೆ. ಇದೀಗ ಜನಪ್ರಿಯ ಸ್ಮಾರ್ಟ್​​ಫೋನ್ ಕಂಪೆನಿಯಾಗಿರುವ ಸೋನಿ ಕಂಪೆನಿ ಇತ್ತೀಚೆಗೆ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಹವಾ ಎಬ್ಬಿಸುತ್ತಿದೆ. ಈ ಕಂಪೆನಿ ಸ್ಮಾರ್ಟ್​​ಟಿವಿ, ಸ್ಮಾರ್ಟ್​​​ ಸ್ಪೀಕರ್​, ಗ್ಯಾಜೆಟ್ಸ್​ಗಳು ಸೇರಿದಂತೆ ಅನೇಕ ಸ್ಮಾರ್ಟ್​​​ ಡಿವೈಸ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಜನರ ಮೆಚ್ಚುಗೆ ಪಡೆದಿದೆ.

ಸದ್ಯ ಸೋನಿ ಕಂಪನಿ ಭಾರತದ ಮಾರುಕಟ್ಟೆಗೆ ಹೊಸ ಸೋನಿ ವಾಕ್​ಮನ್ ​NW-ZX707 ಎಂಬ ಮ್ಯೂಸಿಕ್ ಡಿವೈಸ್​ ಅನ್ನು ಪರಿಚಯಿಸಿದೆ. ಇದು ಇತ್ತೀಚಿನ ವಿನ್ಯಾಸವನ್ನು ಹೊಂದಿದ್ದು, ಬಹಳಷ್ಟು ಫೀಚರ್ಸ್​ಗಳನ್ನು ಇದು ಒಳಗೊಂಡಿದೆ.

ಸೋನಿ ವಾಕ್​ಮನ್ ​NW-ZX707 ವಿಶೇಷತೆ :

  • ಸೋನಿ ವಾಕ್​ಮನ್ NW-ZX707 5 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇyನ್ನು ಹೊಂದಿದೆ. ಇದು ಅಲ್ಯೂಮಿನಿಯಂ ಫ್ರೇಮ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ವಾಕ್​ಮನ್ ವೈಫೈ ಕನೆಕ್ಟಿವಿಟಿಯನ್ನು ನೀಡಲಿದ್ದು, ದೂರ ಪ್ರಯಾಣ ಮಾಡುವಾಗಲೂ ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ಸಿಗಲಿದೆ. ಅಲ್ಲದೆ ಇದರಲ್ಲಿ ಹಾಡುಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಆಫ್‌ಲೈನ್‌ನಲ್ಲಿಯೂ ಸಹ ಮ್ಯೂಸಿಕ್‌ ಅನ್ನು ಕೇಳಬಹುದು. ಇನ್ನು ಇದರಲ್ಲಿರುವ ಡಿಎಸ್​ಡಿ ರೀಮಾಸ್ಟರಿಂಗ್ ಇಂಜಿನ್ ಆಡಿಯೋವನ್ನು 11.2MHz DSD ಗೆ ರಿ ಸ್ಯಾಂಪಲ್ಸ್‌ ಮಾಡಲಿದೆ. ಇದರಿಂದ ಹಾಡು ಪ್ರಿಯರಿಗೆ ಉತ್ತಮ ಅನುಭವವನ್ನು ನೀಡುತ್ತದೆ.
  • ಸೋನಿ ವಾಕ್​ಮನ್ NW-ZX707 ಎಸ್‌-ಮಾಸ್ಟರ್‌ ಹೆಚ್​ಎಕ್ಸ್​ ಡಿಜಿಟಲ್ amp ಮತ್ತು AI-ಚಾಲಿತ ಸೌಂಡ್ ಎಂಜಿನ್ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್ ಅಲ್ಟಿಮೇಟ್‌ನೊಂದಿಗೆ ಬಿಡುಗಡೆಯಾಗಲಿದೆ. ಇದರಿಂದ ರಿಯಲ್‌ ಟೈಂನಲ್ಲಿ ಮ್ಯೂಸಿಕ್‌ ಅನ್ನು ಹೈ ಎಂಡ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಇದರಲ್ಲಿರುವ ಸಿಡಿ ಗುಣಮಟ್ಟ 16-ಬಿಟ್ ಅನ್ನು ಒಳಗೊಂಡಿದ್ದು, ಯಾವುದೇ ನಷ್ಟವಿಲ್ಲದ ಕೋಡೆಕ್ ಆಡಿಯೋವನ್ನು ಹೆಚ್ಚಿಸುವುದಕ್ಕೆ ಅವಕಾಶ ಕಲ್ಪಿಸಲಿದೆ. ಇನ್ನು ಈ ಡಿವೈಸ್‌ ಉತ್ತಮ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದಾಗ 23 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
  • ಸೋನಿ ವಾಕ್​ಮನ್ NW-ZX707 ಮ್ಯೂಸಿಕ್​ ಡಿವೈಸ್​ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, 69,990 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ.

NW-A 105 ವಾಕ್​ಮನ್ ವಿಶೇಷತೆ :

ಸೋನಿ ವಾಕ್​ಮನ್ NW-ZX707 ಮ್ಯೂಸಿಕ್​ ಡಿವೈಸ್ ಇದರ ಜೊತೆಗೆ ಸೋನಿ ಕಂಪೆನಿ ಇತ್ತೀಚಿಗೆ ವಾಕ್​ಮನ್ NW-A 105 ಬಿಡುಗಡೆ ಮಾಡಿದ್ದು ಇದು 3.6 ಇಂಚಿನ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಮ್ಯೂಸಿಕ್ ಪ್ಲೇಯರ್ ಹೆಚ್ಚಿನ ರೆಸಲ್ಯೂಶನ್ ಆಡಿಯೋವನ್ನು ಬೆಂಬಲಿಸಲಿದೆ. ಇದು ಸಿಡಿ ಗುಣಮಟ್ಟದ ಸಂಗೀತಕ್ಕಿಂತ ಉತ್ತಮವಾದ ಮ್ಯೂಸಿಕ್​ ಅನುಭವವನ್ನ ನೀಡಲಿದೆ ಎಂದು ಸೋನಿ ಕಂಪೆನಿ ತಿಳಿಸಿದೆ.

ಇದರ ಜೊತೆಗೆ ಈ ಸೋನಿ ವಾಕ್​ಮನ್ 4 ಜಿಬಿ ರ್‍ಯಾಮ್ ಮತ್ತು 16ಜಿಬಿ ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ 128ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಜೊತೆಗೆ ಒಂದೇ ಚಾರ್ಜ್‌ನಲ್ಲಿ ವಾಕ್‌ಮ್ಯಾನ್‌ನಲ್ಲಿ 26 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯನ್ನು ಹೊಂದಿದ್ದು, ಇದನ್ನು ಯುಎಸ್​ಬಿ ಟೈಪ್-ಸಿ ಸ್ಲಾಟ್‌ನೊಂದಿಗೆ ಚಾರ್ಜ್ ಮಾಡಬಹುದಾಗಿದೆ.

ಸದ್ಯ NW-A 105 ಈ ವಾಕ್​ಮನ್ನ ಬೆಲೆ 23,990 ರೂಪಾಯಿ ಆಗಿದ್ದು, ಸೋನಿ ಸ್ಟೋರ್‌ನಲ್ಲಿ ಬ್ಲ್ಯಾಕ್‌ ಕಲರ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಮ್ಯೂಸಿಕ್ ಪ್ರಿಯರಿಗೆ ಇದೊಂದು ಉತ್ತಮ ಅವಕಾಶ ಆಗಿದೆ.