Home Interesting Smartphone Trick: ನೆಟ್‌ವರ್ಕ್ ಇಲ್ಲದಿದ್ದರೂ CALL ಮಾಡಲು ಈ ಟ್ರಿಕ್ ಉಪಯೋಗಿಸಿ!

Smartphone Trick: ನೆಟ್‌ವರ್ಕ್ ಇಲ್ಲದಿದ್ದರೂ CALL ಮಾಡಲು ಈ ಟ್ರಿಕ್ ಉಪಯೋಗಿಸಿ!

Hindu neighbor gifts plot of land

Hindu neighbour gifts land to Muslim journalist

Smartphone Trick: ಇಂದಿನ ಇಂಟರ್ನೆಟ್ ಯುಗದಲ್ಲಿ ಮೊಬೈಲ್(Mobile) ಫೋನ್ ಬಳಸದ ಜನರಿಲ್ಲ. ಹೀಗಿರುವಾಗ ಜನತೆಗೆ ಮುಖ್ಯವಾಗೋದು ಮೊಬೈಲ್ ಇಂಟರ್ನೆಟ್. ಇಂತಹ ಅಗತ್ಯ ಸಮಯದಲ್ಲಿ ನೆಟ್ವರ್ಕ್ ಸ್ಪೀಡ್ ಇಲ್ಲದಿದ್ದರೆ ಇದಕ್ಕಿಂತ ದೊಡ್ಡ ತೊಂದರೆ ಬೇರೊಂದಿಲ್ಲ. ಅದರಲ್ಲೂ ಈ ವರ್ಕ್ ಫ್ರಮ್ ಜಾಬ್(Work From Job) ಮಾಡೋರಿಗೆ ಆಗುವ ಸಮಸ್ಯೆ ಕೇಳೋದೇ ಬೇಡ. ಆದ್ರೆ, ಇನ್ಮುಂದೆ ಹೀಗೆ ತಲೆ ಕೆಡಿಸಿಕೊಂಡು ಏನು ಮಾಡೋದು ಎಂದು ಚಿಂತಿಸುವ ಅವಶ್ಯಕತೆ ಇಲ್ಲ!! ಯಾಕೆ ಅಂತೀರಾ?

ನೀವು ಕೆಲವು ಸಿಂಪಲ್ ಸ್ಮಾರ್ಟ್ ಫೋನ್ ಟ್ರಿಕ್ಸ್ (Smartphone Trick) ಬಳಸಿ ನೆಟ್ವರ್ಕ್ ಇಲ್ಲದೆ ಇದ್ದರೂ ಕೂಡ ಕಾಲ್ (call) ಮಾಡಬಹುದು. ಹಾಗಿದ್ರೆ, ನೆಟ್ವರ್ಕ್ ಇಲ್ಲದೆ ಕರೆ ಮಾಡೋದು ಹೇಗೆ ?(How to Call without Mobile Network) ಎಂಬ ನಿಮ್ಮ ಅನುಮಾನಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!!

ನೀವು ಮೊಬೈಲ್ ಮೂಲಕ ಯಾರಿಗಾದರು ಕರೆ ಮಾಡಬೇಕಾದರೂ ಕೂಡ ಮುಖ್ಯವಾಗಿ ಬೇಕಾಗೋದು ನೆಟ್ವರ್ಕ್ ( Network). ನೆಟ್ವರ್ಕ್ ಸರಿಯಾಗಿ ಇಲ್ಲದೆ ಇದ್ದರೆ ಆಗ ನಮಗೆ ಕರೆ ಇಲ್ಲವೇ ಇಂಟರ್ನೆಟ್ (Internet) ಬಳಸಲು ಆಗೋದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾರಿಗಾದರೂ ಕರೆ ಮಾಡಿದಾಗ ಲೈನ್ ಕನೆಕ್ಟ್ (connect) ಆಗದೇ ಇದ್ದರೆ, ನೆಟ್ವರ್ಕ್ ಇಲ್ಲ ಅನ್ನೋದು ನಾವೆಲ್ಲ ಸಾಮಾನ್ಯವಾಗಿ ಹೇಳುವ ವಿಚಾರ. ಆದ್ರೆ, ನಮ್ಮ ಮೊಬೈಲ್ ಅಲ್ಲಿ ನೆಟ್ವರ್ಕ್ ಇಲ್ಲದೆ ಇದ್ದರೂ ನಾವು ಕರೆ ಮಾಡಬಹುದು.

ನೆಟ್‌ವರ್ಕ್ ಇಲ್ಲದೆ ಕರೆ ಮಾಡುವುದು ಹೇಗೆ?How to Call without Mobile Network)
ನಾವೀಗ ಹೇಳಲು ಹೊರಟಿರುವ ವೈಶಿಷ್ಟ್ಯದ ಮೂಲಕ ನೆಟ್‌ವರ್ಕ್ ಇಲ್ಲದೆ ಕರೆಗಳನ್ನು ಮಾಡಬಹುದು. ಹೌದು!! ‘ವೈಫೈ ಕಾಲಿಂಗ್ ‘ (WiFi Calling) ವೈಶಿಷ್ಟ್ಯವನ್ನು ಸಕ್ರಿಯ ಗೊಳಿಸಿದರೆ ಸ್ಮಾರ್ಟ್‌ಫೋನ್‌ಗಳಲ್ಲಿ ವಿಥೌಟ್ ನೆಟ್ವರ್ಕ್ ನೀವು ಕರೆ ಮಾಡಬಹುದು. ಹಾಗಿದ್ರೆ, ಅದನ್ನು ಹೇಗೆ ಬಳಸೋದು ಅಂತೀರಾ?

ನೀವು ಐಫೋನ್ ಬಳಕೆದಾರ ರಾಗಿದ್ದರೆ, ಐಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ, ‘ಮೊಬೈಲ್ ಡೇಟಾ’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಅಲ್ಲಿ ನೀಡಲಾದ ಎಲ್ಲಾ ಆಯ್ಕೆಗಳಿಂದ ‘ವೈಫೈ ಕಾಲಿಂಗ್’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಈ ಆಯ್ಕೆಯಲ್ಲಿ, ನೀವು ‘ಈ ಫೋನ್‌ನಲ್ಲಿ ವೈಫೈ ಕರೆ ಮಾಡುವಿಕೆ’ ಹೆಸರಿನ ಉಪ-ವರ್ಗವನ್ನು ಕಾಣಬಹುದು. ಇದನ್ನು ನೀವು ಆನ್ ಮಾಡಿದ ಬಳಿಕ ನೀವು ನೆಟ್‌ವರ್ಕ್ ಇಲ್ಲದೆಯೂ ಕರೆ ಮಾಡಬಹುದು.

ಬಹುತೇಕ ಹೆಚ್ಚಿನವರ ಕೈಯಲ್ಲಿ ಆಂಡ್ರಾಯ್ಡ್ ಫೋನ್ ಇರೋದು ಸಹಜ. ಈ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋದ ಬಳಿಕ ‘ವೈಫೈ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಬಳಿಕ ಅಲ್ಲಿ ನೀಡಲಾದ ‘ವೈಫೈ ಕರೆ’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಈ ಆಯ್ಕೆ ಆನ್ ಆದ ತಕ್ಷಣ ಕರೆ ಮಾಡಲು ಸಾಧ್ಯವಾಗಲಿದೆ. ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಕೂಡ ಬಳಸಬಹುದು.