Home Technology ವಿದ್ಯುತ್‌ ಬಿಲ್‌ ಕಟ್ಟುವವರಿಗೆ ಪೇಟಿಎಂನಿಂದ ಭರ್ಜರಿ ಆಫರ್‌ | ಎಷ್ಟು ಹಣ ಕಟ್ಟುತ್ತೀರೋ ಅಷ್ಟೂ ಹಣ...

ವಿದ್ಯುತ್‌ ಬಿಲ್‌ ಕಟ್ಟುವವರಿಗೆ ಪೇಟಿಎಂನಿಂದ ಭರ್ಜರಿ ಆಫರ್‌ | ಎಷ್ಟು ಹಣ ಕಟ್ಟುತ್ತೀರೋ ಅಷ್ಟೂ ಹಣ ವಾಪಸ್‌

Hindu neighbor gifts plot of land

Hindu neighbour gifts land to Muslim journalist

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದ್ದು ನಾವು ಅಗತ್ಯವಾಗಿ ಪಾವತಿಸಬೇಕಾದ ಸೇವೆಗಳಾದ ಗ್ಯಾಸ್ ಬಿಲ್, ವಾಟರ್ ಬಿಲ್, ಮೊಬೈಲ್ ರೀಚಾರ್ಜ್ , ಡಿಟಿಎಚ್ ರೀಚಾರ್ಜ್, ವಿದ್ಯುತ್ ಬಿಲ್ ಹೀಗೆ ಅನೇಕ ಬಿಲ್ಗಳನ್ನು ಆನ್ ಲೈನ್ ಲ್ಲಿ ಕಟ್ಟಬಹುದಾಗಿದೆ ಇದು ನಮಗೆ ತಿಳಿದಿರುವ ವಿಚಾರವಾಗಿದೆ. ಆದರೆ ಆನ್ ಲೈನ್ ಪೇಮೆಂಟ್ ಹಲವಾರು ವಿಧಗಳಲ್ಲಿ ಇವೆ. ಅವುಗಳಲ್ಲಿ ವಿದ್ಯುತ್ ಬಿಲ್ ಕಟ್ಟುವವರಿಗೆ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಒಡೆತನದಲ್ಲಿರುವ ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ..

ಹೌದು ಬಳಕೆದಾರರು ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್‌ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

ಈಗಾಗಲೇ ಪ್ರತಿದಿನ ಬಿಜ್ಲೀ ಡೇಸ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದ 50 ಬಳಕೆದಾರರಿಗೆ 100 ಪ್ರತಿಶತ ಕ್ಯಾಶ್‌ಬ್ಯಾಕ್ ಮತ್ತು 2,000 ರೂ. ಹೆಚ್ಚುವರಿಯಾಗಿ, ಬಳಕೆದಾರರಿಗೆ ಟಾಪ್ ಶಾಪಿಂಗ್ ಮತ್ತು ಟ್ರಾವೆಲ್ ಬ್ರ್ಯಾಂಡ್‌ಗಳಿಂದ ರಿಯಾಯಿತಿ ವೋಚರ್‌ಗಳನ್ನು ಪಡೆಯಬಹುದು. ಅಂತೆಯೆ ನೀವು ಮೊದಲ ಬಾರಿಗೆ ಪೇಟಿಎಂ ಆ್ಯಪ್ ಮೂಲಕ ವಿದ್ಯುತ್ ಬಿಲ್ ಕಟ್ಟುವವರಾಗಿದ್ದರೆ 200 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ ನೀವು ‘ELECNEW200’ ಕೋಡ್ ಬಳಸಬೇಕಾಗುತ್ತದೆ.

ಪೇಟಿಎಂನಲ್ಲಿ ವಿದ್ಯುತ್ ಬಿಲ್ ಪಾವತಿಸುವ ಕ್ರಮಗಳು :

  • Paytm ಅಪ್ಲಿಕೇಶನ್ ಅಥವಾ ವೆಬ್ ಪುಟವನ್ನು ತೆರೆಯಿರಿ.
  • ಮುಖಪುಟದಲ್ಲಿ, ‘ರೀಚಾರ್ಜ್‌ಗಳು ಮತ್ತು ಬಿಲ್ ಪಾವತಿಗಳು’ ಆಯ್ಕೆ ಮೇಲೆ ಟ್ಯಾಪ್ ಮಾಡಿ.
  • ಇಲ್ಲಿ ‘ವಿದ್ಯುತ್’ ಬಿಲ್ ಆಯ್ಕೆಮಾಡಿ.
  • ಬಳಿಕ ನಿಮ್ಮ ರಾಜ್ಯ ಮತ್ತು ವಿದ್ಯುತ್ ಮಂಡಳಿಯನ್ನು ಆಯ್ಕೆಮಾಡೇಕು.
  • ನಿಮ್ಮ ಗ್ರಾಹಕ ಗುರುತಿನ ಸಂಖ್ಯೆಯನ್ನು ನಮೂದಿಸಿ.
  • ಮುಂದೆ ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಬೇಕು.
  • ಈಗ ನಿಮ್ಮ ಬಿಲ್ ಮತ್ತು ಮೊತ್ತವನ್ನು ನಿಮಗೆ ತೋರಿಸುತ್ತದೆ.
  • ಬಿಲ್ ಪಾವತಿಸಲು, ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಯೊಂದಿಗೆ ಮುಂದುವರಿಯಿರಿ.
  • ಈಗ ಪೇಟಿಎಂ ವ್ಯಾಲೆಟ್, ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಬಿಲ್‌ ಪಾವತಿಸಬಹುದು.

ಫೋನ್‌ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

  • ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
  • ‘ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳು’ ವಿಭಾಗದ ಅಡಿಯಲ್ಲಿ ವಿದ್ಯುತ್’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ವಿದ್ಯುತ್ ಮಂಡಳಿಯನ್ನು ಆಯ್ಕೆ ಮಾಡಿ.
  • ನಿಮ್ಮ ಬಿಲ್ ವಿವರಗಳನ್ನು ನಮೂದಿಸಿ.
  • ನಿಮ್ಮ ಬಿಲ್ ಅನ್ನು UPI/ಡೆಬಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸಿ.

ಗೂಗಲ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

  • ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.
    ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ, “+ ಹೊಸ ಪಾವತಿ” ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಟ್ಯಾಪ್ ಮಾಡಿ.
  • ಈಗ ಮುಂದಿನದರಲ್ಲಿ “ಬಿಲ್ ಪಾವತಿಗಳು” ಆಯ್ಕೆಯನ್ನು ಆರಿಸಿ.
  • ವಿವಿಧ ಬಿಲ್ ಪಾವತಿ ಆಯ್ಕೆಗಳಿಂದ ‘ವಿದ್ಯುತ್’ ಟ್ಯಾಬ್ ಆಯ್ಕೆಮಾಡಿ ನಂತರ ನೀವು ಪಾವತಿ ಮಾಡಲು ಬಯಸುವ ಏಜೆನ್ಸಿಯನ್ನು ಆಯ್ಕೆ ಮಾಡಿ.
  • ನೀವು ಬಯಸಿದ ಕಂಪನಿಯನ್ನು ಆಯ್ಕೆ ಮಾಡಿದ ನಂತರ, ಪಾವತಿ ಪ್ರಕ್ರಿಯೆಯನ್ನು ಮುಗಿಸಲು ನಿಮ್ಮ ಗ್ರಾಹಕ ಖಾತೆಯನ್ನು ನೀವು ಲಿಂಕ್ ಮಾಡಬೇಕಾಗುತ್ತದೆ.
  • ನೀವು ಬಿಲ್ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು UPI ಪಿನ್ ಬಳಸಿ ಬಿಲ್ ಪಾವತಿಸಿ.

ಈ ರೀತಿ ಮೂರು ತರಹ ನೀವು ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ. ಆದರೆ ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್‌ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು ಎಂದು ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ.