Home Technology ಈ ಟೆಲಿಕಾಂ ಕಂಪನಿ ನೀಡುತ್ತಿದೆ ಉಚಿತವಾಗಿ ವಿಐಪಿ ನಂಬರ್| ಜೊತೆಗೆ ಸಿಮ್ ಕಾರ್ಡ್ ಕೂಡ ಲಭ್ಯ!

ಈ ಟೆಲಿಕಾಂ ಕಂಪನಿ ನೀಡುತ್ತಿದೆ ಉಚಿತವಾಗಿ ವಿಐಪಿ ನಂಬರ್| ಜೊತೆಗೆ ಸಿಮ್ ಕಾರ್ಡ್ ಕೂಡ ಲಭ್ಯ!

Hindu neighbor gifts plot of land

Hindu neighbour gifts land to Muslim journalist

ಟೆಲಿಕಾಂ ಕಂಪನಿಯೊಂದು ತನ್ನ ಗ್ರಾಹಕರಿಗೆ ಇದೀಗ ಆಫರ್ ಒಂದನ್ನು ನೀಡಿದೆ. ಅದೇನೆಂದರೆ, ಗ್ರಾಹಕರಿಗೆ ವಿಐಪಿ ನಂಬರ್ ನ ಜೊತೆಗೆ ಸಿಮ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತಿದೆ. ಹಾಗೇ ಈ ಸಿಮ್ ಕಾರ್ಡ್ ಅನ್ನು ಹೋಂ ಡೆಲಿವರಿ ಕೂಡ ಮಾಡಲಾಗುತ್ತದೆ.

ವೊಡಾಫೋನ್ ಐಡಿಯಾ ಕಂಪನಿಯು ಈ ಯೋಜನೆಯನ್ನು ನೀಡುತ್ತಿದ್ದು, ಇನ್ನು ಮುಂದೆ ವಿಐಪಿ ನಂಬರ್ ನ ಜೊತೆಗೆ ಸಿಮ್ ಕಾರ್ಡ್ ಬೇಕಾದರೆ ಹಣ ಖರ್ಚು ಮಾಡಬೇಕಿಲ್ಲ. ಬದಲಾಗಿ ಉಚಿತವಾಗಿಯೇ ನಿಮಗೆ ಲಭ್ಯವಾಗಲಿದ್ದು, ಈ ಯೋಜನೆಯಲ್ಲಿ ಪಡೆಯುವ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ. ನೀವು ಈ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ಪಡೆಯಬೇಕಾದರೆ ಇಲ್ಲಿ ನೀಡಿರುವ ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು.

ಇನ್ನೂ, ಈ ಸಂಖ್ಯೆಯನ್ನು ಪಡೆಯಲು, ಮೊದಲು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ನಂತರ ನೀವು ಉಚಿತ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಪಡೆಯಬಹುದಾಗಿದೆ. ಹಾಗೇ ನೀವು ಈ ಸಂಖ್ಯೆಯನ್ನು ಆಯ್ಕೆ ಮಾಡಿದ ಬಳಿಕ ಪೋಸ್ಟ್‌ಪೇಯ್ಡ್ ಅಥವಾ ಪ್ರಿಪೇಯ್ಡ್‌ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಆನಂತರ ಮನೆಯ ವಿಳಾಸ, ಪಿನ್ ಕೋಡ್ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಬೇಕು. ಆಗ ಮೊಬೈಲ್ ಗೆ OTP ಬರುತ್ತದೆ. ಇಷ್ಟೇ ಇಲ್ಲಿಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಂತರ ಸಿಮ್ ಕಾರ್ಡ್ ಅನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಈ ಪ್ರಕ್ರಿಯೆ ತುಂಬಾ ಸುಲಭ. ಮತ್ತು ಉಚಿತವಾಗಿ ನಿಮ್ಮ ಮನೆಗೆ ಬಂದು ತಲುಪುತ್ತದೆ. ಹಾಗೇ ನಿಮಗೆ ಇಷ್ಟವಾದ ಸಂಖ್ಯೆಯ ಸಿಮ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.