Home News Hyundai cars: ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹುಂಡೈನ ಈ ಕಾರು!

Hyundai cars: ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹುಂಡೈನ ಈ ಕಾರು!

Hindu neighbor gifts plot of land

Hindu neighbour gifts land to Muslim journalist

Hyundai cars : ಸದ್ಯ ಜನಪ್ರಿಯ ಕಂಪನಿಗಳು ಮಾರುಕಟ್ಟೆಗೆ ನೂತನ ಕಾರುಗಳನ್ನು ಪರಿಚಯಿಸುತ್ತಿವೆ. ಹಾಗೆಯೇ ಇದೀಗ ಜನಪ್ರಿಯ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾದ (Hyundai cars) ನವೀಕರಿಸಿದ ಅಲ್ಕಾಜರ್ ಎಸ್‍ಯುವಿ (hyundai alcazar) ಮತ್ತು ನ್ಯೂ ಜನರೇಷನ್ ವೆರ್ನಾ ಸೆಡಾನ್ (hyundai verna) ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವೆರ್ನಾ ಸೆಡಾನ್ ಮಾರ್ಚ್ 21ಕ್ಕೆ ಬಿಡುಗೆಯಾಗಲಿದೆ ಎಂದು ತಿಳಿದುಬಂದಿದೆ.

ಹ್ಯುಂಡೈ ಅಲ್ಕಾಜರ್ SUV: ಸದ್ಯ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್‍ಯುವಿಯು ದೇಶೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿದ್ದು, ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಈ ಎಸ್‍ಯುವಿಯ ನವೀಕರಿಸಿದ ಆವೃತ್ತಿಯು ಬಿಡುಗಡೆಯಾಗಲಿದೆ. ಕಂಪನಿಯು 2023ರ ಅಲ್ಕಾಜರ್ 3-ಸಾಲಿನ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಮಾದರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಸಿಗ್ನೇಚರ್ ಹುಂಡೈ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದಾಗಿದ್ದು, ಗ್ರಾಹಕರು ರೂ.25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.

ನವೀಕೃತ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಹೊಸ 1.5-ಲೀಟರ್ T-GDi 4 ಸಿಲಿಂಡರ್ ಎಂಜಿನ್ ಈ ಕಾರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಹೊಸ ಅಲ್ಕಾಜರ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಈ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಸೆಡಾನ್: ಇದು ಅಲಾಯ್ ವ್ಜೀಲ್ ಗಳು, ಎಲ್ಇಡಿ ಡಿಆರ್ಎಲ್ ಆಯ್ಕೆಯೊಂದಿಗೆ ಬರಲಿದ್ದು, 1.5 ಲೀಟರ್ ಟರ್ಬೊ ಬ್ಯಾಡ್ಜಿಂಗ್ ಹೊಂದಿದೆ. ಕಾರಿನ(car) ಸ್ಟೀರಿಂಗ್ ವೀಲ್‌ನಲ್ಲಿ ಲೇನ್ ಅಸಿಸ್ಟ್ ಬಟನ್ ಇದ್ದು, ಈ ಮಾದರಿಯು ADAS (ಅಡ್ವೆನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಅನ್ನು ಟಾಪ್-ಸ್ಪೆಕ್ SX (O) ಟ್ರಿಮ್ ಹೊಂದಿರಲಿದೆ.

ಸೆಡಾನ್ ಕಾರಿನಲ್ಲಿ ಸ್ಲೋಪಿಂಗ್ ರೂಫ್ ಲೈನ್, ಸನ್‌ರೂಫ್ ಮತ್ತು ಸಿ ಪಿಲ್ಲರ್‌ ಇದ್ದು, ಸನ್‌ರೂಫ್ ಮತ್ತು ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಪಡೆದಿವೆ. ಕಾರಿನಲ್ಲಿ ಬ್ಲ್ಯಾಕ್ ಔಟ್ ಬಿ ಪಿಲ್ಲರ್‌ಗಳು ಇದ್ದು, ಕಾರಿನ ಹಿಂಭಾಗದಲ್ಲಿ ಹೊಸ ಹೈಟೆಕ್ “H-ಟೈಲ್ ಲ್ಯಾಂಪ್” ಅನ್ನು ಕೂಡ ಇದೆ. ಟ್ರೆಪೆಜಾಯ್ಡಲ್ ಫ್ರಂಟ್ ಗ್ರಿಲ್, ಹುಡ್‌ನಲ್ಲಿ ಸಿಗ್ನೇಚರ್ ಬ್ಯಾಡ್ಜ್ ಮತ್ತು ಮುಂಭಾಗದಲ್ಲಿ ಪೂರ್ಣ ಉದ್ದದ ಎಲ್‌ಇಡಿ ಡಿಆರ್‌ಎಲ್‌ಗಳ ಸ್ಟ್ರಿಪ್ ಗಳಂತಹ ಅದ್ಭುತ ವಿನ್ಯಾಸ ಹೊಂದಿದೆ.

ಹೊಸ ಹ್ಯುಂಡೈ ವೆರ್ನಾ ಕಾರು 4535 ಎಂಎಂ ಉದ್ದ ಇದ್ದು, ಅಗಲ 1765 ಎಂಎಂ ಆಗಿದೆ. ಮತ್ತು 1475 ಎಂಎಂ ಎತ್ತರವಾಗಿದೆ. ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಎಂಜಿನ್ 143.8 ಎನ್ಎಂ ಟಾರ್ಕ್ ಮತ್ತು 113.18 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.