Home News Hero: ಬರಲಿದೆ ಹೀರೋ ಪ್ರೀಮಿಯಂ ಬೈಕ್‌ಗಳು! ಬಂದ ಮೇಲೆ ಅದರದ್ದೇ ಹವಾ!!!

Hero: ಬರಲಿದೆ ಹೀರೋ ಪ್ರೀಮಿಯಂ ಬೈಕ್‌ಗಳು! ಬಂದ ಮೇಲೆ ಅದರದ್ದೇ ಹವಾ!!!

Hindu neighbor gifts plot of land

Hindu neighbour gifts land to Muslim journalist

Hero :ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂದು ಖ್ಯಾತಿಗಳಿಸಿರುವ ಹೀರೋ ಮೋಟೋಕಾರ್ಪ್ (hero motocorp ) ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸುತ್ತಿವೆ. ಟಿವಿಎಸ್ ಮೋಟಾರ್ ಐಕ್ಯೂಬ್ ಹಾಗೂ ಹೀರೋ ಮೋಟೋಕಾರ್ಪ್ (motocorp ) ವಿಡಾ ವಿ1 (vida v1) ಎಲೆಕ್ಟ್ರಿಕ್ ಸ್ಕೂಟರ್ ನ್ನು (electric scooter ) ಮಾರಟ ಮಾಡುತ್ತಿದೆ. ಆದರೆ, ಯಾವುದೇ ಕಂಪನಿಗಳು (company ) ಮೋಟಾರ್‌ಸೈಕಲ್‌ನ್ನು (Motorcycle) ತಯಾರಿಸಿಲ್ಲ. ಇದೀಗ, ಹೀರೋ ಮೋಟೋಕಾರ್ಪ್ ದೊಡ್ಡ ಸಾಧನೆ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಹೀರೋ ಮೋಟೋಕಾರ್ಪ್, ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಮುಖ ಎಲೆಕ್ಟ್ರಿಕ್ ವಾಹನ (ಇವಿ) ಹಾಗೂ ಪವರ್‌ಟ್ರೇನ್ ತಯಾರಕ ಕಂಪನಿ ಝೀರೋ ಮೋಟಾರ್‌ಸೈಕಲ್‌ ಜೊತೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ಸ್ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿಯೇ ಹೀರೋ ಕಂಪನಿ ಘೋಷಣೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಝೀರೋ ಮೋಟಾರ್‌ಸೈಕಲ್‌ ಕಂಪನಿಯಲ್ಲಿ 60 ಮಿಲಿಯನ್ ಡಾಲರ್ (ರೂ.495 ಕೋಟಿ) ವರೆಗಿನ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್ ಆಡಳಿತ ಮಂಡಳಿ ಅನುಮೋದಿಸಿದೆ.

ಈ ಕುರಿತು ಹೀರೋ ಮೋಟೋಕಾರ್ಪ್ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ ‘ಝೀರೋ ಮೋಟಾರ್‌ಸೈಕಲ್‌ನೊಂದಿಗೆ ನಮ್ಮ ಪಾಲುದಾರಿಕೆಯು ದೊಡ್ಡ ಮೈಲಿಗಲ್ಲಾಗಲಿದೆ. ಈ ಮೂಲಕ ಭಾರತ ಹಾಗೂ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಮಾರಾಟವನ್ನು ವೇಗಗೊಳಿಸಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ. ‘ಈ ಒಪ್ಪಂದದಿಂದ ಗ್ರಾಹಕರಿಗೆ ಒಳ್ಳೆಯ ವಾಹನ ಸಿಗುವ ನೀರಿಕ್ಷೆಯಿದೆ’ ಎಂದು ಝೀರೋ ಮೋಟಾರ್‌ಸೈಕಲ್ಸ್‌ನ ಸಿಇಒ ಸ್ಯಾಮ್ ಪಾಸ್ಚೆ ತಿಳಿಸಿದ್ದಾರೆ.

ಇದೀಗ, ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೀರೋ ವಿಡಾ ಬ್ರಾಂಡ್ ಅಡಿ, ಬೆಂಗಳೂರು, ದೆಹಲಿ ಮತ್ತು ಜೈಪುರದ 50 ವಿವಿಧ ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಿದ್ದು, ಇಲ್ಲಿ ಡಿಸಿ ಮತ್ತು ಎಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ಅಳವಡಿಸಲಾಗಿದೆ. ಇನ್ನು, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೀರೋ ವಿಡಾ ವಿ1 (Hero Vida V1) ರೂ.1.28 ಲಕ್ಷದಿಂದ ರೂ.1.39 ಬೆಲೆಯಲ್ಲಿ ಸಿಗಲಿದೆ. ಸಂಪೂರ್ಣ ಚಾರ್ಜಿನಲ್ಲಿ 165 km ರೇಂಜ್ ನೀಡಲಿದೆ.

ಅದಲ್ಲದೆ ಹೀರೋ ವಿಡಾ ವಿ1 ಎರಡು ರೂಪಾಂತರಗಳನ್ನು ಹೊಂದಿದ್ದು, ಅವುಗಳೆಂದರೆ, ವಿ1 ಪ್ರೊ ಹಾಗೂ ವಿ1 ಪ್ಲಸ್, ಇವು 3.44kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿವೆ. ಅಲ್ಲದೆ, 80 kmph ಟಾಪ್ ಸ್ವೀಡ್ ಹೊಂದಿವೆ. ವಿ1 ಪ್ರೊ ಕೇವಲ 3.2 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆದರೆ, ವಿ1 ಪ್ಲಸ್ 3.4 ಸೆಕೆಂಡುಗಳಲ್ಲಿ 0-40 kmph ವೇಗವನ್ನು ತಲುಪಲಿದೆ. ಈ ಸ್ಕೂಟರ್ ಗಳು 12 ಇಂಚಿನ ಅಲಾಯ್ ವೀಲ್ಸ್, TFT ಟಚ್‌ಸ್ಕ್ರೀನ್ ಡಿಸ್ಪ್ಲೇ ಒಳಗೊಂಡಿದೆ.

ಇನ್ನು ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡೂ ರೂಪಾಂತರಗಳ ಸಾಮಾನ್ಯ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ OTA ಬೆಂಬಲದೊಂದಿಗೆ 7-ಇಂಚಿನ TFT ಡಿಸ್ ಪ್ಲೇ, ಬ್ಲೂಟೂತ್ (Bluetooth ) , 4G, Wi-Fi, ಆಂಟಿ-ಥೆಫ್ಟ್ ಅಲಾರ್ಮ್, ಜಿಯೋಫೆನ್ಸ್, ಟ್ರ್ಯಾಕ್ ಮೈ ಬೈಕ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಕ್ರೂಸ್ ಕಂಟ್ರೋಲ್, SOS ಅಲರ್ಟ್, ಪುನರುತ್ಪಾದಕ ಬ್ರೇಕಿಂಗ್ ಮತ್ತು ರಿವರ್ಸ್ ಫಂಕ್ಷನ್ ಅನ್ನು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಹೀರೋ ಮೋಟೋಕಾರ್ಪ್ ಭಾರತದ ದ್ವಿಚಕ್ರ ವಾಹನ ಮಾರಾಟದಲ್ಲಿ ಯಾವಾಗಲೂ ಮುಂದೆ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ 10% ಪ್ರಗತಿ ಸಾಧಿಸುವ ಜೊತೆಗೆ, 2022ರ ಫೆಬ್ರವರಿಯಲ್ಲಿ 358,254 ಯುನಿಟ್ ಸೇಲ್ ಮಾಡಿತ್ತು. ಇನ್ನು ಬದಲಾಗುತ್ತಿರುವ ಜನರ ಅಭಿರುಚಿಗೆ ತಕ್ಕಂತೆ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಕ್ಯಾಲಿಫೋರ್ನಿಯಾದ ಝೀರೋ ಮೋಟಾರ್‌ಸೈಕಲ್‌ ಜೊತೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ಸ್ ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಹೀರೋದಿಂದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುನ್ನತ ಮೋಟಾರ್‌ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.