Home National Cyber crime: Jio ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್- ಅಂಬಾನಿ ಜನ್ಮದಿನಕ್ಕೆ ಉಚಿತ ರೀಚಾರ್ಜ್ ಘೋಷಣೆ-...

Cyber crime: Jio ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್- ಅಂಬಾನಿ ಜನ್ಮದಿನಕ್ಕೆ ಉಚಿತ ರೀಚಾರ್ಜ್ ಘೋಷಣೆ- ಈ ಲಿಂಕ್ ಕ್ಲಿಕ್ ಮಾಡಿ, ಫ್ರೀ ರೀಚಾರ್ಜ್ ಮಾಡಿರಿ : ಏನಿದರ ಸತ್ಯಾಸತ್ಯತೆ!

Cyber crime
Image credit: Livehinsusthan.com

Hindu neighbor gifts plot of land

Hindu neighbour gifts land to Muslim journalist

Cyber Crime: ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಬೆರಳ ತುದಿಯಲ್ಲೇ ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಅಷ್ಟೆ ಅಲ್ಲದೇ, ಬ್ಯಾಂಕ್ಗಳು ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಇತ್ತೀಚಿನ ದಿನದಲ್ಲಿ ಸೈಬರ್‌ ಕಳ್ಳರು ಬ್ಯಾಂಕ್‌ ಖಾತೆಗಳಿಗೆ ಲೂಟಿ ಮಾಡುವುದಕ್ಕೆ ನಾನಾ ರೀತಿಯಲ್ಲಿ ಮುಂದಾಗುತ್ತಿದ್ದು, ಈ ಮೂಲಕ ಸೈಬರ್‌ ಕಳ್ಳರು ಬಳಕೆ ಮಾಡುವ ನಾನಾ ಬಗೆಯ ತಂತ್ರಗಳು ಬ್ಯಾಂಕ್‌ ಗ್ರಾಹಕರಲ್ಲಿ (Bank Customer)ಕಳವಳ ಸೃಷ್ಟಿ ಮಾಡಿದೆ.

ಕಳ್ಳರು ಕೂಡ ನಾನಾ ತಂತ್ರ ಬಳಸುತ್ತಿದ್ದು, ಕೆಲವು ಬಾರಿ ಸೈಬರ್‌ ಕಳ್ಳರು ವಿವಿಧ ಆಫರ್‌ಗಳ ಹೆಸರಿನಲ್ಲಿ ಬ್ಯಾಂಕ್ ಗ್ರಾಹಕರಿಗೆ ಸಂದೇಶ ಕಳುಹಿಸುತ್ತಿದ್ದು, ಈಗ ಸಾಲು ಸಾಲು ಸರತಿ ಹಬ್ಬ ಹೆಚ್ಚಾಗುತ್ತಿದ್ದು, ಈ ನಡುವೆ ಸೈಬರ್ ಪೊಲೀಸ್ ಠಾಣೆ, ರಾಯಚೂರು ಸೂಚನೆಯ ಅನುಸಾರ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ(Social Media)ಪಕ್ಕದ ಚಿತ್ರದಲ್ಲಿ ತೋರಿಸಿದಂತೆ ಜಿಯೋ ಕಂಪನಿಯ(Jio Company)ಮಾಲೀಕರಾದ ಅಂಬಾನಿಯವರ ಹುಟ್ಟುಹಬ್ಬದ ವಿಶೇಷವಾಗಿ ಜಿಯೋ ಕಂಪನಿಯು ಎಲ್ಲಾ ಭಾರತದ ಬಳಕೆದಾರರಿಗೆ 28 ದಿನಗಳ ಪ್ರಿ ರಿಚಾರ್ಜ್ ಆಪ್ ನೀಡಲಾಗಿದೆ.

Cyber crime

ಈ ಆಫರ್ ನಿಮ್ಮದಾಗಿಸಿಕೊಳ್ಳಲು ಈ ಮೇಸೇಜ್‌ನಲ್ಲಿ ಕಂಡ ಕೂಡಲೇ ಲಿಂಕನ್ನು ಕ್ಲಿಕ್ ಮಾಡಿ ಎಂಬ ಮಾಹಿತಿ ಹರಿದಾಡುತ್ತಿದೆ. ಅಷ್ಟಕ್ಕೂ ಏನಿದು? ಇದರ ಅಸಲಿಯತ್ತೇನು ಎಂದು ಗಮನಿಸಿದರೆ, ಇದೊಂದು ಮೋಸಗಾರರು(Cyber crime) ಜನರನ್ನು ಮೋಸ ಮಾಡಲು ಬಳಸಿದ ಟ್ರಿಕ್ ಆಗಿದ್ದು, ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅವರು ಸದರಿ ಮೆಸೇಜ್ ಅನ್ನು 10 ಜನರಿಗೆ ಪಾರ್ವಡ್ ಮಾಡಲು ತಿಳಿಸಲಾಗುತ್ತದೆ. ಆಬಳಿಕ, ಒಂದು ಆಪ್‌ನ್ನು ಇನ್ಸಾಲ್ ಮಾಡಲು ಹೇಳಲಾಗುತ್ತದೆ.ಈ ಲಿಂಕ್ ಮೂಲಕ ನಿಮ್ಮ ಮಾಹಿತಿ ಹಾಗೂ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಂಭವ ಹೆಚ್ಚಿದೆ. ಹೀಗಾಗಿ, ಈ ಕುರಿತ ದೂರುಗಳಿಗಾಗಿ www.cybercrime.gov.in ಬೇಟಿ ನೀಡಿ ಇಲ್ಲವೇ 1930 ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಈ ಲಿಂಕ್ ನಕಲಿಯಾಗಿದ್ದು, ಈ ಕುರಿತು ರಾಯಚೂರು ಜಿಲ್ಲಾ ಸೈಬರ್ ಪೋಲಿಸ್ ಠಾಣಾ ಸೂಚನೆ ನೀಡಿ ಜನರಿಗೆ ಅರಿವು ಮೂಡಿಸಲು ಮುಂದಾಗಿದೆ.