

ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಹೌದು, ಗೂಗಲ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 3ರ ಒಳಗಾಗಿ ತಮ್ಮ ಲಸಿಕೆಗಳ ವಿವರವನ್ನು ಸಲ್ಲಿಸಬೇಕೆಂಬ ಸೂಚನೆ ನೀಡಿತ್ತು.
ಡಿಸೆಂಬರ್ 3ರ ಬಳಿಕವೂ ಯಾವುದೇ ವಿವರಗಳನ್ನು ಸಲ್ಲಿಸದ ಉದ್ಯೋಗಿಗಳನ್ನು ಗೂಗಲ್ ವೈಯಕ್ತಿಕವಾಗಿ ಸಂಪರ್ಕಿಸುವುದೆಂದು ಸೂಚನೆಯಲ್ಲಿ ತಿಳಿಸಿತ್ತು. ಇದೀಗ ಲಸಿಕೆಯನ್ನು ಇರುವ ಪಡೆಯದೇ ಇರುವವರಿಗೆ ಜನವರಿ 18ರವರೆಗೆ ಸಮಯಾವಕಾಶ ನೀಡಿದೆ.
ಉದ್ಯೋಗಿಗಳು ಲಸಿಕೆಯನ್ನು ಪಡೆಯದೇ ಹೋದಲ್ಲಿ ಅವರಿಗೆ ವೇತನ ಸಹಿತ 30 ದಿನಗಳ ರಜೆಯನ್ನು ನೀಡಲಾಗುವುದು, ನಂತರ 6 ತಿಂಗಳ ವರೆಗೆ ವೇತನವಿಲ್ಲದ ವೈಯಕ್ತಿಕ ರಜೆಯಲ್ಲಿ ಇರಿಸಲಾಗುತ್ತದೆ ಎಂದಿದೆ. ಒಂದು ವೇಳೆ ಸಮಯಾವಕಾಶದಲ್ಲಿಯೂ ಉದ್ಯೋಗಿಗಳು ಲಸಿಕೆಯನ್ನು ತೆಗೆದುಕೊಂಡಿಲ್ಲವಾದಲ್ಲಿ ಕೆಲಸದಿಂದಲೇ ಅವರನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿದೆ.













