Home Technology Cheapest electric Scooter : ಹೋಂಡಾ ಆಕ್ಟೀವಾಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಸ್ಕೂಟರ್‌

Cheapest electric Scooter : ಹೋಂಡಾ ಆಕ್ಟೀವಾಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಸ್ಕೂಟರ್‌

Hindu neighbor gifts plot of land

Hindu neighbour gifts land to Muslim journalist

ಕಾಲ ಸರಿಯುತ್ತಿದ್ದಂತೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಲು ಬಯಸಿದ್ದೀರಾ ಹಾಗಾದರೆ ಇಲ್ಲಿ ನಿಮಗೆ ಹಲವಾರು ಆಯ್ಕೆಗಳಿವೆ ನೋಡಿ.

ಪ್ರಸ್ತುತ ಪೆಟ್ರೋಲ್-ಡೀಸೆಲ್ ದರಗಳು ಏರಿಕೆ ಆಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಒಲವು ತೋರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಅನೇಕ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿವೆ.

  • ಸದ್ಯ ನೀವು ಏವನ್ ಇ ಸ್ಕೂಟ್ ನ್ನು ಆಯ್ಕೆ ಮಾಡಿದರೆ ಇದರ ಬೆಲೆ ಸುಮಾರು 45,000 ರೂ. ಆಗಿದೆ. ಈ ಸ್ಕೂಟರ್ 215-ವ್ಯಾಟ್ BLDC ಮೋಟಾರ್‌ನೊಂದಿಗೆ ಬರುತ್ತದೆ. ಇದರೊಂದಿಗೆ, 48v/20ah ಬ್ಯಾಟರಿ ಬರುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 8 ಗಂಟೆಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಬ್ಯಾಟರಿ ಫುಲ್ ಆದ ಮೇಲೆ ಸ್ಕೂಟರ್ ಪ್ರತಿ ಗಂಟೆಗೆ 24 ಕಿ.ಮೀ ವೇಗದೊಂದಿಗೆ 65 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
  • ಬೌನ್ಸ್ ಇನ್ಫಿನಿಟಿ E1 ಆಯ್ಕೆ ಮಾಡಿದರೆ ಬೌನ್ಸ್ ಇನ್ಫಿನಿಟಿ ಇ1 ಬೆಲೆಯು ಸುಮಾರು ರೂ 45,099 ರಿಂದ ಪ್ರಾರಂಭವಾಗುತ್ತದೆ. ಆದರೆ ಈ ರೂಪಾಂತರದಲ್ಲಿ ಬ್ಯಾಟರಿ ಲಭ್ಯವಿಲ್ಲ. ಇದರ ಬ್ಯಾಟರಿ ಪ್ಯಾಕ್ ರೂಪಾಂತರದ ಬೆಲೆ ಸುಮಾರು 68,999 ರೂ. 2kWh 48V ಬ್ಯಾಟರಿಯನ್ನು ಕಂಪನಿಯು ಸ್ಕೂಟರ್‌ನಲ್ಲಿ ಒದಗಿಸಿದೆ. ಇದರ ಗರಿಷ್ಠ ವೇಗ ಗಂಟೆಗೆ 65 ಕಿಮೀ ಮತ್ತು ವ್ಯಾಪ್ತಿ 85 ಕಿಮೀ. ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಡ್ರ್ಯಾಗ್ ಮೋಡ್, ಇಕೋ ಮೋಡ್ ಮತ್ತು ಪವರ್ ಎಂಬ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
  • ಓಕಿನಾವಾ R30 ನ್ನು ಆಯ್ಕೆ ಮಾಡಿದರೆ ಓಕಿನಾವಾ R30 ಬೆಲೆ ಸುಮಾರು 61,420 ರೂ. ಇದು 250 W ಮೋಟಾರ್ ಮತ್ತು 1.34KWH ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಈ ಸ್ಕೂಟರ್ 25 ಕಿಮೀ ವೇಗ, 60 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
  • ಹೀರೋ ಎಲೆಕ್ಟ್ರಿಕ್ ಆಪ್ಟಿಮಾ CX ನ್ನು ಆಯ್ಕೆ ಮಾಡಿಕೊಂಡರೆ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ ಸಿಂಗಲ್ ಬ್ಯಾಟರಿ ರೂಪಾಂತರ ಆಗಿದೆ. ಅದಲ್ಲದೆ ಬೆಲೆ ಸುಮಾರು 62,190 ರೂ.ಇದು 45 KM/H ಗರಿಷ್ಠ ವೇಗ ಮತ್ತು 82KM ವ್ಯಾಪ್ತಿಯನ್ನು ಹೊಂದಿದೆ. ಇದು 51.2V / 30Ah ಬ್ಯಾಟರಿಯನ್ನು ಪಡೆಯುತ್ತದೆ, ಇದು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಮೂರು ಬಣ್ಣದ ಆಯ್ಕೆಗಳು ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.

ಈ ಮೇಲಿನ 4ರೀತಿಯ ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ ನಿಮಗೆ ಬೇಕಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದಾಗಿದೆ