Home Social Mobile: ಸ್ಮಾರ್ಟ್ಫೋನ್ ಬಳಕೆದಾರರೇ, ಫೋನ್ ಯೂಸ್ ಮಾಡುವಾಗ ನೆನಪಿಡಿ ಈ 5 ವಿಷಯ! ಇಲ್ಲ ಸ್ವಲ್ಪ...

Mobile: ಸ್ಮಾರ್ಟ್ಫೋನ್ ಬಳಕೆದಾರರೇ, ಫೋನ್ ಯೂಸ್ ಮಾಡುವಾಗ ನೆನಪಿಡಿ ಈ 5 ವಿಷಯ! ಇಲ್ಲ ಸ್ವಲ್ಪ ಯಾಮಾರಿದ್ರೂ ಜೈಲು ಪಾಲಾಗ್ತೀರಾ!

Mobile
Image Source- BBC

Hindu neighbor gifts plot of land

Hindu neighbour gifts land to Muslim journalist

Mobile Using: ಇದು ಸ್ಮಾರ್ಟ್‌ಫೋನ್‌ ಯುಗ. ಇಂದಿನ ಕಾಲದ ಜನತೆ ಅದರಲ್ಲೂ ಯುವಜನತೆ ಊಟ ಬಿಟ್ಟೇವು ಆದರೆ ಮೊಬೈಲ್ ಫೋನ್ ಮಾತ್ರ ಬಿಡೋದಿಲ್ಲ ಅನ್ನುವಷ್ಟರ ಮಟ್ಟಿಗೆ ತಮ್ಮ ಫೋನ್ ಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಹಲವರಿಗೆ ಊಟ, ತಿಂಡಿ, ನಿದ್ರೆ ಎಲ್ಲದೂ ಅದರಲ್ಲಿಯೇ ಅನ್ಬೋದು. ಆದರೆ ಇಂದು ಸ್ಮಾರ್ಟ್‌ಫೋನ್‌ ಬಳಸುವುದು ಸಾಮಾನ್ಯವಾದರೂ ಕೂಡ ಅನೇಕ ಮಂದಿಗೆ ಸರಿಯಾದ ಫೋನ್‌ ಬಳಕೆಯೇ ಗೊತ್ತಿಲ್ಲ. ಮಾಹಿತಿ ಕೊರತೆಯಿಂದ ಕೆಲವ ದೊಡ್ಡ ದೊಡ್ಡ ತೊಂದರೆಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. ಕೆಲವೊಮ್ಮೆ ತಿಳಿಯದೇ ಮಾಡಿದ ತಪ್ಪಿನಿಂದ ಜೈಲು ಪಾಲಾಗಬೋದು.

ಹಾಗಿದ್ರೆ ಫೋನ್ ಯೂಸ್ (Mobile Using) ಮಾಡುವಾಗ ನಾವು ಜಾಗ್ರತರಾಗಿರಬೇಕಾದ ವಿಚಾರಗಳಾವುವು? ತಲೆಯಲ್ಲಿಡಬೇಕಾದ ಅಂಶಜಳಾವುವು? ಯಾವೆಲ್ಲಾ ತಪ್ಪುಗಳು ನಮ್ಮನ್ನು ನಂಕಷ್ಟಕ್ಕೆ ತಂದೊಡ್ಡುತ್ತವೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸೋಶಿಯಲ್ ಮೀಡಿಯಾ ಎಚ್ಚರಿಕೆಯಿಂದ ಬಳಸಿ.!
ಸೋಶಿಯಲ್ ಮೀಡಿಯಾದಲ್ಲಿ ಯೋಚಿಸದೇ ಏನನ್ನೋ ಹುಡುಕುವುದನ್ನ ತಪ್ಪಿಸಿ. ಸರ್ಕಾರವು ಅನೇಕ ವಿಷಯಗಳನ್ನ ನಿಷೇಧಿಸಿದ್ದು, ಒಂದು ದೇಶದಲ್ಲಿ ನಿಷೇಧಿತ ಚಲನಚಿತ್ರವನ್ನ ಪ್ರವೇಶಿಸುವುದು ಅಪರಾಧದಂತೆ. ಮೊದಲು ಆ ದೇಶದ ಕಾನೂನಿನ ಬಗ್ಗೆ ತಿಳಿದುಕೊಳ್ಳಿ. ಅತ್ಯಾಚಾರ ಸಂತ್ರಸ್ತೆಯ ಹೆಸರನ್ನ ಪ್ರಚಾರ ಮಾಡುವುದು ಭಾರತದಲ್ಲಿ ಅಪರಾಧ, ನೀವು ಹಾಗೆ ಮಾಡುವುದರಿಂದ ದೂರವಿರಬೇಕು.

ಫೋನ್‌ನಲ್ಲಿ ಬೆದರಿಕೆ ಹಾಕಬೇಡಿ.!
ಫೋನ್‌ನಲ್ಲಿ ಯಾರನ್ನೂ ನಿಂದಿಸಬೇಡಿ. ಇನ್ನು ಕೊಲೆ ಬೆದರಿಕೆ ಹಾಕಬಾರದು ಅನ್ನೋದನ್ನ ನೆನಪಿನಲ್ಲಿಡಿ. ಇನ್ನು ಕರೆಯಷ್ಟೇ ಅಲ್ಲ ಸಂದೇಶಗಳ ಮೂಲಕವೂ ಯಾರಿಗೆ ಆಗಿರಲಿ ತಪ್ಪಾಗಿಯೂ ಬೆದರಿಕೆ ಹಾಕಬೇಡಿ. ಇನ್ನೊಂದು ಬದಿಯಲ್ಲಿರುವ ವ್ಯಕ್ತಿಯು ನಿಮ್ಮ ಬೆದರಿಕೆಯನ್ನ ರೆಕಾರ್ಡ್ ಮಾಡಬಹುದು ಅಥವಾ ಸಂದೇಶದ ಸ್ಕ್ರೀನ್ ಶಾಟ್ ಸಾಕ್ಷಿಯಾಗಿ ಇರಿಸಬಹುದು. ಆ ವ್ಯಕ್ತಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು.

ಗಲಭೆ ಪ್ರಚೋದಿಸಬೇಡಿ.!
ಗಲಭೆಗಳನ್ನ ಪ್ರಚೋದಿಸುವ ವಿಷಯವನ್ನು ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ಫೋನ್ ಮೂಲಕ ಮಾಡಿದ್ರೆ, ಅದು ಸಂಪೂರ್ಣ ಅಪರಾಧವಾಗಿದೆ. ಫೋನ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ರೆ, ಅದು ದೇಶದ್ರೋಹದ ಪ್ರಕರಣವಾಗಬಹುದು, ಇದರಿಂದಾಗಿ ನೀವು ಜೈಲಿಗೆ ಹೋಗಬಹುದು. ಇಂತಹ ಆರೋಪಗಳಲ್ಲಿ ಜಾಮೀನು ಕೂಡ ಬೇಗ ಸಿಗುವುದಿಲ್ಲ.

ಕೃತಿಸ್ವಾಮ್ಯ ಅಥವಾ ಕೃತಿಚೌರ್ಯದ ಕಾಯಿದೆಯನ್ನ ನೆನಪಿನಲ್ಲಿಡಿ.!
ಅದು ಯಾರೊಬ್ಬರ ಕಲೆ ಅಥವಾ ಯಾರೊಬ್ಬರ ಮೂಲ ವಿಷಯ, ಚಲನಚಿತ್ರ ಅಥವಾ ಸಾಹಿತ್ಯ ಅಥವಾ ಯಾವುದೇ ಅಪ್ಲಿಕೇಶನ್ ಆಗಿರಲಿ, ಈ ವಿಷಯಗಳನ್ನ ನಕಲಿಸುವುದು ಅಪರಾಧ. ನಿಮ್ಮ ಸ್ವಂತ ಲಾಭಕ್ಕಾಗಿ ಬೇರೊಬ್ಬರ ರಚನೆಯನ್ನ ಬಳಸುವುದು ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆಯಾಗಬಹುದು ಮತ್ತು ಅದಕ್ಕಾಗಿ ನಿಮ್ಮ ವಿರುದ್ಧ ಮೊಕದ್ದಮೆ ಹೂಡಬಹುದು. ಜೈಲಿಗೆ ಕೂಡ ಕಳುಹಿಸಬಹುದು.

ಫೋನ್‌ನಲ್ಲಿ ಬೆದರಿಕೆ ಹಾಕಬೇಡಿ.!
ಫೋನ್‌ನಲ್ಲಿ ಯಾರನ್ನೂ ನಿಂದಿಸಬೇಡಿ. ಇನ್ನು ಕೊಲೆ ಬೆದರಿಕೆ ಹಾಕಬಾರದು ಅನ್ನೋದನ್ನ ನೆನಪಿನಲ್ಲಿಡಿ. ಇನ್ನು ಕರೆಯಷ್ಟೇ ಅಲ್ಲ ಸಂದೇಶಗಳ ಮೂಲಕವೂ ಯಾರಿಗೆ ಆಗಿರಲಿ ತಪ್ಪಾಗಿಯೂ ಬೆದರಿಕೆ ಹಾಕಬೇಡಿ. ಇನ್ನೊಂದು ಬದಿಯಲ್ಲಿರುವ ವ್ಯಕ್ತಿಯು ನಿಮ್ಮ ಬೆದರಿಕೆಯನ್ನ ರೆಕಾರ್ಡ್ ಮಾಡಬಹುದು ಅಥವಾ ಸಂದೇಶದ ಸ್ಕ್ರೀನ್ ಶಾಟ್ ಸಾಕ್ಷಿಯಾಗಿ ಇರಿಸಬಹುದು. ಆ ವ್ಯಕ್ತಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು.

ಇದನ್ನೂ ಓದಿ: Kenya : ಅಬ್ಬಾಬ್ಬಾ! ಪಾದ್ರಿಯ ಜಮೀನಿನಲ್ಲಿ ಪತ್ತೆಯಾದ್ವು 47 ಶವಗಳು! ಮೈ ನಡುಗಿಸುತ್ತೆ ಈ ಸಾವಿನ ಹಿಂದಿರೋ ಆ ಕಾರಣ!