ಪುತ್ತೂರು: ನೆಹರುನಗರದಲ್ಲಿ ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ ,ಓರ್ವ ಮೃತ್ಯು

ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಜೂ.14 ರಂದು ನೆಹರು ನಗರದಲ್ಲಿ ನಡೆದಿದೆ. ಮೃತಪಟ್ಟವರನ್ನು ಪುತ್ತೂರು ಕಲ್ಲಿಮಾರ್ ನಿವಾಸಿ ರವಿ ಎಂದು ಗುರುತಿಸಲಾಗಿದೆ. ರವಿ ಅವರು ಪುತ್ತೂರಿನ ಮಹಾಮಾಯಿ ದೇವಸ್ಥಾನದ ಬಳಿ ಕೀ ಮೇಕರ್ ಮತ್ತು ಗ್ಯಾಸ್ ಸ್ಟವ್ ರಿಪೇರಿ ಶಾಪ್ ಹೊಂದಿದ್ದರು. ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಎಸೈ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.