ಖ್ಯಾತ ಬಾಲಿವುಡ್ ಗಾಯಕ ಕೆ.ಕೆ.ಹೃದಯಾಘಾತದಿಂದ ನಿಧನ

ಮುಂಬೈ: ಬಾಲಿವುಡ್ ಗಾಯಕ, ಕೆಕೆ ಎಂದೇ ಖ್ಯಾತರಾಗಿದ್ದ ಕೃಷ್ಣಕುಮಾರ್ ಕುನ್ನತ್ (53) ಅವರು ಇಂದು (ಮೇ 31) ಸಂಜೆ ನಿಧನರಾದರು. ಕೋಲ್ಕತಾದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಕಾರ್ಯಕ್ರಮದ ಬಳಿಕ ಕುಸಿದು ಬಿದ್ದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.